ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊರಸಿಗಳು ಹಾಗೂ ಟಿಬಿಯಗಳೊಂದಿಗೆ ಕೂಡಿಕೊಂಡುಬಿಟ್ಟಿವೆ.ಮಧ್ಯದ ಬೆರಳಿನ ತುದಿಯ ಎಲುಬು ಅಗಲವಾಗಿದೆಯಲ್ಲದೆ ಇದರ ಕೊಂದಿಯುಗುರು (ಕ್ಲಾ) ಮಾರ್ಪಾಟಾಗಿ ಎಲುಬಿನ ಸುತ್ತ ಗೊರಸಾಗಿ ಬೆಳೆದಿದೆ.ಕಾಲುಗಳು ಹೀಗೆ ಉದ್ದದಲ್ಲಿ ಹೆಚ್ಚಿದ್ದರೂ ಈ ಹೆಚ್ಚಳ ಕಾಲಿನ ಕೆಳಭಾಗದಲ್ಲಿ ಮಾತ್ರ ಕಂಡುಬರುತ್ತದೆ.ಹ್ಯೂಮರಸ್ ಮತ್ತು ಫೀಮರ್ ಮೂಳೆಗಳು ಮಾತ್ರ ಮೋಟಾಗಿಯೇ ಇವೆ.ಹಿಂಗಾಲುಗಳು ದೇಹದ ಭಾರವನ್ನು ಮುನ್ನಡೆಗೆ ಸಹಯಕವಾದ ಸಾಧನಗಳಾಗಿಯೂ ಮುಂಗಾಲುಗಳು ದೇಹದ ಭಾರವನ್ನು ಹೊರುವ ಸಾಧನಗಳಾಗಿಯೂ ಇರುವುದರಿಂದ ಕಶೇರುಸ್ತಂಭ ಸೂಕ್ತವಾಗಿ ಮಾರ್ಪಟ್ಟಿದೆ.ಪಕ್ಕೆಲುಬುಗಳು ಹೇರಳವಾಗಿವೆ.ಇಲಿಯಂ ಮೂಳೆಗಳು ‌ಏಋ೩ಅಗಲವಾಗಿ,ನೇರವಾಗಿ ಮೇಲಕ್ಕೆದ್ದಿರುವಂತೆ ಇದ್ದು ಚಲನೆಗೆ ಅಗತ್ಯವಾದ ಸ್ನಾಯುಗಳಾದ ಗ್ಲೂಟೈಗಳು ಮತ್ತು ಹೊಟ್ಟೆಯ ಭಾರವನ್ನು ಹೊರುವ ಸ್ನಾಯುಗಳು ಇದಕ್ಕೆ ಅಂಟಿಕೊಂಡಿರಲು ಅನುಕೂಲವಾಗಿದೆ. ಗೊರಸಿಗಳ ಕತ್ತು ಉದ್ದವಾಗಿರುತ್ತದೆ.ಪ್ರಾಣಿ ತನ್ನ ಸುತ್ತಮುತ್ತ ದೃಷ್ಟಿ ಹಾಯಿಸುವುದಕ್ಕೆ,ಆಹಾರವನ್ನು ಎಟುಕಿಸಿಕೊಳ್ಳಲು ತಲೆಯನ್ನು ಚಾಚುವುದಕ್ಕೆ ಇದರಿಂದ ಅನುಕೂಲ.ಸಾಮಾನ್ಯವಾಗಿ ಗೊರಸಿಗಳ ಶ್ರವಣಶಕ್ತಿ ಬಹು ಚುರುಕು.ಕಿವಿಗಳೂ ಬಲು ಉದ್ದವಾಗಿದ್ದು ಶಬ್ದ ಬರುವ ದಿಕ್ಕನ್ನು ಗ್ರಹಿಸಲು ಸಹಾಯಕವಾಗಿವೆ.ಘ್ರಾಣ ಶಕ್ತಿಯೂ ಚೆನ್ನಾಗಿದೆ.ಸಾಮಾನ್ಯವಾಗಿ ಗೊರಸಿಗಳು ಹುಲ್ಲು ಮೇಯುವಾಗ ಗಾಳಿಗೆದುರಾಗಿಯೇ ಸಾಗುತ್ತವೆ.ಮೂತಿ ಸದಾ ಒದ್ದೆಯಾಗಿದ್ದು ಅದರಲ್ಲಿರುವ ಗ್ರಾಹಕಾಂಗಗಳು ಗಾಳಿಗುಂಟ ಬರುವ ವಾಸನೆಯನ್ನು ಗ್ರಹಿಸಲು ಸಮರ್ಥವಾಗಿವೆ.ಅಂತೆಯೆ ನಾಲಗೆ ದೊಡ್ಡ ಗಾತ್ರದ್ದಾಗಿದ್ದು ಸೂಕ್ಷ್ಮವೇದಿಗಳಾದ ರಸನೇಂದ್ರಿಯಗಳನ್ನು ಪಡೆದಿದೆ.ಮಿದುಳೂ ದೊಡ್ಡ ಗಾತ್ರದ್ದು. ಗೊರಸಿಗಳಲ್ಲಿ ಬಹುಪಾಲು ಬಗೆಯವು ಸಮಾಜಜೀವಿಗಳು.ಗುಂಪು ಗುಂಪಾಗಿರುವುದರಿಂದ ಒಂದು ಪ್ರಾಣಿಯ ಅನುಭವವನ್ನು ಗಮನಿಸಿ ಆ ಗುಂಪಿನ ಇತರ ಪ್ರಾಣಿಗಳು ಸುಲಭವಾಗಿ ಪಾಠ ಕಲಿಯುತ್ತವೆ.ಗೊರಸಿಗಳ ಇನ್ನೊಂದು ಮುಖ್ಯ ಲಕ್ಷಣ ವಾಸನಾಗ್ರಂಥಿಗಳು.ಇವುಗಳಲ್ಲಿ ಉತ್ಪತ್ತಿಯಾಗುವ ವಾಸನೆಯನ್ನು ಗೊರಸಿಗಳು ತಮ್ಮ ನಡೆಜಾಡುಗಳನ್ನು ಮತ್ತು ಆಧೀನ ಪ್ರಾಂತಗಳನ್ನು ಗುರುತಿಸುವುದಕ್ಕೂ ಉಪಯೋಗಿಸಿಕೊಳ್ಳುತ್ತವೆ.ಗೊರಸಿಗಳು ಲೈಂಗಿಕವ್ಯವಸ್ಥೆ ಸಂಕೀರ್ಣವಾದುದು.ಇದು ದೃಷ್ಟಿ,ಶ್ರವಣ ಮತ್ತು ಘ್ರಾಣ ಸಂಬಂಧಿ ಸಂಜೆಗಳ ವಿವರವಾದ ಬಳಕೆಯನ್ನು ಒಳಗೊಂಡಿದೆ.ಕೆಲವು ಸಾರಿ ಗುಂಡುಗಳ ನಡುವೆ ಕಾದಾಟ ನಡೆಯುವ ಪರಿಪಾಠವೂ ಉಂಟು.ಗರ್ಭಾವಸ್ಥೆಯ ಅವಧಿ ದೀರ್ಘವಾದುದು.ಅಲ್ಲದೆ ಸಮರ್ಥವಾದ ಮಿದುಳುಳ್ಳ ಇತರ ದೊಡ್ಡ ಗಾತ್ರದ ಪ್ರಾಣಿಗಳಲ್ಲಿರುವಂತೆ ಹುಟ್ಟುವ ಮರಿಗಳ ಸಂಖ್ಯೆ ಕಡಿಮೆ.ಹೊಸದಾಗಿ ಹುಟ್ಟುವ ಮರಿ ಚೆನ್ನಾಗಿ ಬೆಳೆದಿರುತ್ತದಲ್ಲದೆ ಬೇಗ ಹಿಂಡಿನೊಡನೆ ಸ್ವತಂತ್ರವಾಗಿ ಓಡಾಡುವ ಸಾಮರ್ಥ್ಯವನ್ನು ಪಡೆಯುತ್ತದೆ. ಗೊರಸಿಗಳ ಆಹರವನ್ನು ಪಡೆಯುವ ಮತ್ತು ಅರಗಿಸಿಕೊಳ್ಳುವ ವಿಧಾನದಲ್ಲಿ ಬಹುಶಃ ಮೇಲೆ ಹೇಳಿದ ಲಕ್ಷಣಗಳೆಲ್ಲಕ್ಕಿಂತ ಹೆಚ್ಚು ಗಮನಾರ್ಹವಾದ ಮಾರ್ಪಾಡುಗಳನ್ನು ಕಾಣಬಹುದು . ಇವುಗಳ ಪೂರ್ವಜರಾದ ಕೀಟಭಕ್ಷಿಗಳಲ್ಲಿದ್ದ ದವಡೆಹಲ್ಲಿನ ತ್ರಿಕೋನಾಕಾರಾದ ವಿನ್ಯಾಸ ಇವುಗಳಲ್ಲಿ ಚಚ್ಚೌಕ ಮಾದರಿಯಾಗಿದೆ.ಹಲ್ಲುಗಳ ಕೋಡೂ ಕೆಲವು ಬದಲಾವಣೆಗಳಿಗೊಳಗಾಗಿ ಚೂಪು ಮೊನೆಯಂತಿರದೆ ಹಲವಾರು ಏಣುಗಳುಳ್ಳ ಲೋಘೋಡಾಂಟ್ ಮಾದರಿಯ ಮೇಲ್ಮೈಯಾಗಿ ರೂಪುಗೊಂಡಿದೆ ಮಿಗಿಲಾಗಿ ಇಡೀ ಹಲ್ಲೇ ಸಿಮೆಂಟಿನಿಂದ (ಮೂಳೆ) ಆವೃತವಾಗುತ್ತದೆ.ಬೇಗ ಸವೆಯಬಹುದಾದ ಮೋಟು ಬಗೆಯ ದವಡೆ ಹಲ್ಲುಗಳ (ಬ್ರಾಕಿಡಾಂಟ್)ಬದಲಾಗಿ ಉದ್ದವಾದ ಹೈಪೋಸೋಡಾಂಟ್ ಬಗೆಯ ಹಲ್ಲುಗಳು ಕಾಂಇಸಿಕೊಳ್ಳುತ್ತವೆ.ಈ ಪ್ರಾಣಿಗಳಲ್ಲಿ ಆಹಾರವನ್ನು ಅರೆಯುವ ಆವಶ್ಯಕತೆ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿ ಇಡೀ ದಂತಶ್ರೇಣಿ ಹಾಗೆಯೇ ಬಹುಕಾಲ ಉಳಿಯುವುದಲ್ಲದೆ ದವಡೆಹಲ್ಲುಗಳೂ ಮುಂದವಡೆ ಹಲ್ಲುಗಳೂ ಆಹಾರವನ್ನು ಅರೆಯಲು ಅನುಕೂಲವಾಗುವಂತೆ ಚಪ್ಪಟೆಯಾಗಿವೆ.ಈ ಲಕ್ಷಣದಲ್ಲಿ ಗೊರಸಿಗಳು ಮಾಂಸಾಹಾರಿಗಳಾದ ಕಾರ್ನಿವೋರ ಗಣದ ಪ್ರಾಣಿಗಳಿಂದ ಭಿನ್ನವೆನಿಸಿವೆ.ಗೊರಸಿಗಳ ಬಾಚಿಹಲ್ಲುಗಳು ಹುಲ್ಲು ಚಿಗುರು ಮುಂತಾದ ಸಸ್ಯಹಾರವನ್ನು ತುಂಡರಿಸಲು ಸಹಾಯಕವಾಗಿವೆ.ಕೆಲವೊಮ್ಮೆ (ಉದಾಹರಣೆಗೆ ಆರ್ಟಿಯೋಡ್ಯಾಕ್ಟಿಲ ಗಣದ ಗೊರಸಿಗಳು )ಮೇಲ್ದವಡೆಯಲ್ಲಿನ ಬಾಚಿಹಲ್ಲುಗಳು ಸಾಲು ಅಳಿದು ಹೋಗಿರುತ್ತವೆ.ಇಂಥವುಗಳಲ್ಲಿ ಕೆಳದವಡೆಯ ಬಾಚಿಹಲ್ಲುಗಳು ಮತ್ತು ಕೊಂಬಿನಂತೆ ಇರುವ ಮೇಲ್ದುಟಿಗಳೇ ಆಹಾರವನ್ನು ಕತ್ತರಿಸಲು ಸಹಾಯಕವಾಗಿವೆ.ಅನೇಕ ಸಲ ಕೋರೆಹಲ್ಲು ಕಾಣೆಯಾಗಿರುತ್ತದೆ.ಆಹಾರವನ್ನು ತುಂಡರಿಸುವ ಮತ್ತು ಅರೆಯುವ ಕಾರ್ಯ ತುಟಿ,ತಾಲು,ನಾಲಗೆ ಮತ್ತು ದವಡೆಗಳು ಹಾಗೂ ಅವುಗಳ ಸ್ನಾಯುಗಳ ಹಲವಾರು ಮಾರ್ಪಾಟುಗಳಿಗೆ ಕಾರಣವಾಗಿದೆ.ದವಡೆ ತಲೆಬುರುಡೆಯೊಂದಿಗೆ ಚಪ್ಪಟೆ ಫಲಕದ ರೀತಿ ಕೀಲಿಸಿಕೊಂಡಿರುವುದರಿಂದ ಕೆಳದವಡೆ ಆವರ್ತಚಲನೆಯನ್ನು ತೋರುತ್ತದೆ.ಗೊರಸಿಗಳ ತಲೆಬುರುಡೆಯಲ್ಲಿ ಹಣೆಯ ಏಣು ಇಲ್ಲದಿರುವುದರಿಂದ ಅದು ಚಪ್ಪಟೆಯಾಗಿದೆ. ಗೊರಸಿಗಳು ಸೇವಿಸುವ ಆಹರದಲ್ಲಿನ ಸೆಲ್ಯುಲೋಸಿನ ಪಚನಕ್ರಿಯೆಯಲ್ಲಿ ಸಹಾಯ ಮಾಡುವ ಬ್ಯಾಕ್ಟೀರಿಯಗಳಿಗಾಗಿ ಗೊರಸಿಗಳ ಜೀರ್ಣಂಗವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಒಂದು ಪ್ರತ್ಯೇಕ ಕೋಣೆಯಿರುತ್ತದೆ .ಈ ಕೋಣೆ ಆರ್ಟಿಯೋಡ್ಯಾಕ್ಟಿಲ ಪ್ರಾಣಿಗಳಲ್ಲಿ ಜಠರದಲ್ಲಿದ್ದರೆ ಪೆರಿಸೋಡ್ಯಾಕ್ಟಿಲ ಪ್ರಾಣಿಗಳಲ್ಲಿ ಸೀಕಂ ಭಾಗದಲ್ಲಿದೆ. ಹೀಗೆ ಮೇಲೆ ವಿವರಿಸಿದ ಲಕ್ಷಣಗಳು ಗೊರಸಿಗಳಿಗೆ ಮಾತ್ರ ವಿಶಿಷ್ಟವಾಗಿದ್ದು ಎಲ್ಲವೂ ಈ ಪ್ರಾಣಿಗಳ ಸಸ್ಯಹಾರ ಜೀವನಕ್ಕೆ ಪೂರಕವಾಗಿವೆ. ವರ್ಗೀಕರಣ ;ಗೊರಸಿಗಳ ಗುಂಪನ್ನು ಪ್ರೋಟೋಅಂಗ್ಯುಲೇಟ ,ಪೀನಂಗ್ಯುಲೇಟ ,ಮೀಸಾಕ್ಕೋನಿಯ ಮತ್ತು ಪ್ಯಾರಾಕ್ಸೋನಿಯ ಎಂಬ ೪ ಆಧಿಗಣಗಳಾಗಿ ವಿಂಗಡಿಸಲಾಗಿದೆ;ಪ್ರೋಟೋಆಂಗ್ಯುಲೇಟದಲ್ಲಿ ಕಾಂಡಿಲಾರ್ತ್ರ,ನೋಟೋಆಅಂಗ್ಯುಲೇಟ ,ಲಿಟಾಪ್ಪರ್ನ,ಆಸ್ಟ್ರಪೊತೀರಿಯ ಮತ್ತು ಟ್ಯೂಬ್ಯುಲಿಡೆಂಟೇಟ ಎಂಬ ೫ ಗಣಗಳಿವೆ.ಪೀನಂಗ್ಯುಲೇಟ ಆಧಿಗಣ ಹೈರಕಾಯ್ದಿಯ,ಪ್ರೊಬಾಸಿಡಿಯ,ಪ್ಯಾಂಟೊಡಾಂಟ ,ಡೈನೋಸೆರೇಟ ,ಪೈರೊತೀರಿಯ,ಎಂಬ್ರಿತಾಪೊಡ ಮತ್ತು ಸೈರೀನಿಯ ಎಂಬ ೭ ಗಣಗಳನ್ನು ಒಳಗೊಂಡಿದೆ .ಪೆರಿಸೋಡ್ಯಾಕ್ಟಿಲ ಎಂಬ ಗಣ ಮೀಸಾಕ್ಸೋನಿಯ ಆಧಿಗಣಕ್ಕೆ ಆರ್ಟಿಯೊಡ್ಯಾಕ್ಟಿಲ ಎಂಬ ಗಣ ಪ್ಯಾರಾಕ್ಸೋನಿಯ ಆಧಿಗಣಕ್ಕೆ ಸೇರಿವೆ.