ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಗೋಕಾಕ-ಗೋಕಾಕ, ವಿನಾಯಕ ಕೃಷ್ಣ ಭಾಗಗಳಿಂದ ಬರುವ ಭಕ್ತರು ಈ ತೀರ್ಥದಲ್ಲಿ ಸ್ನಾನ ಮಾಡುತ್ತಾರೆ. ಈ ತೀರ್ಥದ ಅವರಣದೊಳಗೆ ಕಾಲಭೈರವೇಶ್ವರ,ಗರುಡ,ಅನಿರುದ್ಧ,ಅಗಸ್ತ್ಯೇಶ್ವರ,ವಸಿಷ್ಠೇಶ್ವರ ಮುಂತಾದ ಗುಡಿಗಳಿವೆ.ಅಲ್ಲವೆ ವೈಷ್ಣವ ಹಾಗೂ ಶಾಕ್ತಪಂಥೀಯ ದೇವತಾಮಂದಿರಗಳೂ ಇವೆ.ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕಟ್ಟಿಸಿದಳೆಂದು ಹೇಳಲಾದ ಅಹಲ್ಯಬಾಯಿ ಗುಡಿ ಮತ್ತು ಛತ್ರ ಗಮನಾರ್ಹ.ಇದರ ಛಾವಣಿಯಲ್ಲಿರುವ ನಾಗಬಂಧ ವೈಶಿಷ್ಷ್ಯಪೂರ್ಣ.ಸು.6-7ನೆಯ ಶತಮಾನದ್ದೆಂದು ನಂಬಲಾದ ಗಣಪತಿ ವಿಗ್ರಹ ಕರ್ನಾಟಕದ ಪ್ರಾಚೀನ ಗಣೇಶ ವಿಗ್ರಹಗಳಲ್ಲೊಂದಾಗಿದೆ.
ಭಾರತದ ಶೈವತೀರ್ಥಕ್ಷೇತ್ರಗಳಲ್ಲಿ ಒಂದಾದ ಗೋಕರ್ಣ ಪ್ರೇಕ್ಷಣೀಯ ಪ್ರವಾಸಿ ಕೇಂದ್ರವೂ ಹೌದು.ಪ್ರತಿವರ್ಷ ಫಾಲ್ಗುಣ ಶುದ್ಧ ಪಾಡ್ಯದಂದು ನಡೆಯುವ ರಥೋತ್ಸವ ಹಾಗೂ ಶಿವರಾತ್ರಿ ಜಾತ್ರೆ ಅತ್ಯಂತ ಪ್ರಸಿದ್ದ.
ಕಾಲೇಜು,ಸಂಸ್ಕೃತ ಪಾಠಶಾಲೆ ಮುಂತಾದ ಶೈಕ್ಷಣಿಕ ಸಂಸ್ಥೆಗಳೂ ಇಲ್ಲಿವೆ. ಖ್ಯಾತವೇದ ವಿದ್ವಾಂಸರಾದ ಮಹರ್ಷಿ ದೇವರಾತ ಈ ಊರಿನಲ್ಲಿದ್ದರು.ಈ ಊರಿಗೆ ಭೂಮಾರ್ಗ ಮತ್ತು ಜಲಮಾರ್ಗಗಳೆರಡರಿಂದಲೂ ಹೋಗಬಹುದಾಗಿದೆ.ಗೋಕರ್ಣಕ್ಕೆ 3ಕಿಮೀ ದೂರದ ತದಡಿ ಬಂದರಿಗೆ ಉಗಿಹಡಗಿನಿಂದ ಹೋಗಬಹುದು.ಅನಂತರ ದೋಣಿಯ ಮೂಲಕ ಪ್ರವಾಸ.ಕಾರವಾರ ತಲುಪಿ ಕರಾವಳಿ ಹಾದಿಯಲ್ಲೂ ಅಥವಾ ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿಯೂ ಗೋಕರ್ಣವನ್ನು ತಲುಪಬಹುದು. ಈ ಊರಿನ ಸಮೀಪದ ಓಂ ಬೀಚ್ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಗೋಕಾಕ:ಕರ್ನಾಟಕದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು;ಆ ತಾಲ್ಲೂಕಿನ ಕೇಂದ್ರ.ತಾಲ್ಲೂಕಿನ ವಿಸ್ತೀರ್ಣ 1,543.78 ಚ.ಕಿಮೀ.ತಾಲ್ಲೂಕಿನಲ್ಲಿ 105 ಹಳ್ಳಿಗಳೂ 2 ಪಟ್ಟಣಗಳೂ ಇವೆ.ಅದರ ಜನಸಂಖ್ಯೆ 5,25,865(2001).ತಾಲ್ಲೂಕಿನ ಪಶ್ಚಿಮ ಭಾಗ ಗುಡ್ಡಗಾಡು. ಉಳಿದ ಭಾಗ ಸಮತಟ್ಟಾಗಿದೆ.ಗೋಕಾಕದ ಪಟ್ಟಣದ ಬಳಿ ಇವರು ನಾರಾಯಣಗುಡ್ಡ ಆ ತಾಲ್ಲೂಕಿನ ಆತ್ಯಂತ ಎತ್ತರದ ಸ್ಥಳ.ತಾಲ್ಲೂಕಿನಲ್ಲಿ ಹರಿಯುವ ನದಿಗಳು ಘಟಪ್ರಭಾ ಮತ್ತು ಮಾರ್ಕಂಡೇಯ. ಗೋಕಾಕದ್ದು ಉಷ್ಣ ವಾಯುಗುಣ.ವಾರ್ಷಿಕ ಮಳೆ ಸು.25.ಹತ್ತಿ ,ಜೋಳ ಇಲ್ಲಿಯ ಮುಖ್ಯ ಬೆಳೆಗಳು.ಬೇಳೆಕಾಳುಗಳೂ ಬೆಳೆಯುತ್ತವೆ.ಘಟಪ್ರಭಾ ನದಿಯ ಗೋಕಾಕ ಜಲಪಾತ ಗೊಕಾಕ ಪಟ್ಟಣದ ವಾಯವ್ಯಕ್ಕೆ ಸು.6ಕಿಮೀ ದೂರದಲ್ಲಿದೆ.ಇಲ್ಲಿ ಘಟಪ್ರಭಾ ನದಿ 51ಮೀ(170) ಎತ್ತರದಿಂದ ಧುಮುಕುತ್ತದೆ.ಈ ಧಬಧಬೆಯ ಬಳಿ 1887ರಲ್ಲಿ ಒಂದು ಜವಳಿ ಗಿರಣಿ ಸ್ಥಾಪಿತವಾಯಿತು.ಇಲ್ಲಿ ಸಣ್ಣಗಾತ್ರದ ಒಂದು ವಿದ್ಯುದುತ್ಪಾದಕ ಕೇಂದ್ರವಿದೆ.ಇದಕ್ಕಾಗಿ ನಿರ್ಮಿಸಲಾದ ಜಲಶಯದಿಂದ ಸುತ್ತಣ ಪ್ರದೇಶಕ್ಕೆ ನೀರಾವರಿ ಸೌಲಭ್ಯವೂ ಒದಗಿದೆ.ಧಬಧಬೆಯ ಹತ್ತಿರ ಒಂದು ತೂಗುಸೇತುವೆಯುಂಟು.ಗೋಕಾಕದ ಬಳಿ ಇವರು ಪಂಚಮಿ ಗುಡ್ಡದಲ್ಲಿ ಹಲವು ಬಗೆಯ ಶಿಲೆಗಳು ದೊರುಕುತ್ತವೆ. ಗೋಕಾಕ ಪಟ್ಟಣ ಉ.ಆ.16 40ಮತ್ತು 74 49 ಮೇಲಿದೆ; ದಕ್ಷಿಣ ರೈಲ್ವೆ ಮಾರ್ಗದ ಗೋಕಾಕ ರೋಡ್ ನಿಲ್ದಾಣದಿಂದ ಊರು 13 ಕಿಮೀ ದೂರದಲ್ಲಿದೆ. ಗೋಕಾಕದ ಬಣ್ಣದ ಆಟಿಕೆಗಳೂ ಕರದಂಟು ಎಂಬ ಖಾದ್ಯ ವಸ್ತುವೂ ಪ್ರಸಿದ್ಧವಾದವು.ಇವು ಹೊರ ದೇಶಗಳಿಗೂ- ಮುಖ್ಯವಾಗಿ ಅಮೆರಿಕಕ್ಕೆ-ನಿರ್ಯಾತವಾಗುತ್ತವೆ.ಆಟಿಕೆ ಕೈಗಾರಿಕೆ 150 ವರ್ಷಗಳಷ್ಟು ಹಳೆಯದು.ಚಿನಗಾರರು ನಿರ್ಮಿಸುವ ಗೌರಿಗಳು ತುಂಬ ಸುಂದರವಾಗಿವೆ. ಆದರೆ ಈಗ ಕಸಬುದಾರರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಉತ್ತೇಜನ ನೀಡಲು ಒಂದು ಸಹಕಾರ ಸಂಘವುಂಟು. ಬಟ್ಟೆ ನೇಯುವ ಮತ್ತು ಅದಕ್ಕೆ ಬಣ್ಣ ಹಾಕುವ ಕಸಬುಗಳು ಪ್ರವರ್ಧಮಾನ ಸ್ಥಿತಿಯಲ್ಲಿದ್ದುವು.ಆದರೆ ಕ್ರಮೇಣ ಇವು ನಶಿಸಿದುವು.ಸರ್ಕಾರ ಇವಕ್ಕೆ ಈಚೆಗೆ ಪ್ರೋತ್ಸಾಹ ನೀಡುತ್ತಿದೆ. ಚಿದಂಬರೇಶ್ವರರ ಶಿಷ್ಯರಾದ ಬೊಠೆಮಹಾರಾಜರು ಗೋಕಾಕದವರು;ಗಳಗ ನಾಥರು ತಮ್ಮ ಮಹಾಭಾರತದ ಆದಿಪರ್ವವನ್ನು ಇಲ್ಲಿಯ ವೆಂಕಟೇಶ್ವರ ಗುಡಿಯಲ್ಲಿ ಕುಳಿತು ಬರೆದರು. ಆದಿಶಂಕರಾಚಾರ್ಯರ ದೊಡ್ಡ ಗುಡಿ ಇಲ್ಲಿದೆ. ಅಖಿಲಭಾರತ ಖ್ಯಾತಿಯ ಚಿತ್ರಗಾರರಾದ ಸಾಂಬಪ್ಪ ಚಿತ್ರಗಾರ, ಶಂಕರಪ್ಪ ಚಿತ್ರಗಾರ ಗೋಕಾಕದವರು. ಅವರು ತಯಾರಿಸಿದ ಗಣಪತಿಗಳು ಆನೇಕ ರಾಜ್ಯಗಳ್ಳಲ್ಲಿ ಪ್ರಸಿದ್ಧಿ ಪಡೆದಿವೆ. ಗೋಕಾಕ ಪಟ್ಟಣದ ಜನಸಂಖ್ಯೆ 1,35,773 (2011).ಇಲ್ಲೊಂದು ಪುರಸಭೆ ಇದೆ. ಅದು ಬಹುಕಾಲದಿಂದ ನಡೆಸಿಕೊಂಡು ಬಂದ ಪ್ರೌಢಶಾಲೆಯಲ್ಲದೆ ಇಲ್ಲಿ ಇನ್ನೂ ಪ್ರೌಢಶಾಲೆಗಳೂ,ಕಾಲೇಜೂ ಇವೆ. ಇಲ್ಲಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು 1858ರಷ್ಟು ಹಿಂದೆ ಸ್ಥಾಪಿತವಾದ್ದು.ಇನ್ನೆರಡು 1878ರಲ್ಲಿ ಪ್ರಾರಂಭವಾದುವು. ಗೋಕಾಕಕ್ಕೆ ಸಾಕಷ್ಟು ಹಳೆಯ ಇತಿಹಾಸವುಂಟು.1047ರ ಒಂದು ಶಾಸನದಲ್ಲಿ ಈ ಸ್ಥಳದ ಉಲ್ಲೇಖವಿದೆ.ಅಲ್ಲಿ ಇದನ್ನು ಗೋಕಾಗೆ ಎಂದು ಹೆಸರಿಸಿದೆ.1685ರಲ್ಲಿ ಇದು ಅಂದಿನ ಸ್ಥಳೀಯ ಸರ್ಕಾರದ ಕೇಂದ್ರವಾಗಿತ್ತು. 1717-1754ರಲ್ಲಿ ಸವಣೂರು ನವಾಬರ ಅಧೀನಕ್ಕೆ ಒಳಪಟ್ಟಿತ್ತು.ಆಗ ಇಲ್ಲಿ ಹಲವು ಮಸೀದಿಗಳು ನಿರ್ಮಾಣವಾಯಿತು.ಅನಂತರ ಮತ್ತೆ ಹಿಂದೂಗಳ ವಶಕ್ಕೆ ಬಂದ ಈ ಪಟ್ಟಣ 1836ರಲ್ಲಿ ಇಂಗ್ಲಿಷರ ವಶವಾಯಿತು. ಗೋಕಾಕ,ವಿನಯಕ ಕೃಷ್ಣ:19090-92.ವಿನಾಯಕ ಎಂಬ ಕಾವ್ಯನಾಮದಿಂದ ಖ್ಯಾತರಾಗಿದ್ದು ಕನ್ನಡ ಸಾಂಸ್ಕೃತಿಕ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿದ ಮೇಧಾವಿಗಳು.ಜ್ನಾನಪೀಠ ಪ್ರಶಸ್ತಿ ಪುರಸ್ಕೃತರು.ಕನ್ನಡ ಸಾಹಿತ್ಯದಲ್ಲಿ ನವ್ಯತೆಗೆ ಭದ್ರ ಬುನಾದಿ ಹಾಕಿದವರು ಇವರು ಎನ್ನಲಾಗಿದೆ.ಕವಿ,ಕಾದಂಬರಿಕಾರ,ವಿಮರ್ಶಕ,ವಾಗ್ಮಿ,ಶಿಕ್ಷಣ ತಜ್ನ ಎಂದಿವರನ್ನು ಜನತೆ ಗುರುತಿಸಿದೆ. ಇವರು ಹುಟ್ಟಿದ್ದು ಸವಣೂರಿನಲ್ಲಿ,1909ರ ಆಗಸ್ಟ್ 9 ರಂದು.ಇವರು ಬಾಲ್ಯದ ಶಿಕ್ಷಣ ಸವಣೂರಿನಲ್ಲೂ ಉಚ್ಚ ಶಿಕ್ಷಣ ಧಾರವಾಡದಲ್ಲೂ ಜರುಗಿದವು.ಅನಂತರ ಇವರು ಉನ್ನತ ಶಿಕ್ಷಣಕ್ಕಾಗಿ ಆಕ್ಸ್ ಫರ್ಡಿಗೆ (1936)ಹೋಗಿಬಂದರು. ಧಾರವಾಡದಲ್ಲಿ ಓದುವಾಗ ಬೇಂದ್ರೆ ಮುಗಳಿ ಅಂಥವರ ಸಹವಾಸದಲ್ಲಿ ಕನ್ನಡ ಅಭಿವ್ಯಕ್ತಿ, ಸಾಮರ್ಥ್ಯಗಳತ್ತ ಇವರ ಮನಸ್ಸು ತಿರುಗಿತು.ಇಂಗ್ಲಿಷ್ ಸಾಹಿತ್ಯಕ ಶಬ್ದಗಳ ಶಕ್ತಿಯುತ ಸ್ಥಾಣು ಕನ್ನಡ ರೂಪಗಳನ್ನು ಹುಡುಕುವತ್ತ ತಮ್ಮ ಪ್ರತಿಭೆಯನ್ನು ಹರಿಸಿದರು.ಬೇಂದ್ರೆ ಮುಂದಾಳಾದ ಗೆಳೆಯರ ಗುಂಪು ಸಾಹಿತ್ಯ ಸಂಸ್ಥೆಯ ಸ-ಫಲ-ತೆಯ ದ್ಯೋತಕವೆಂದು ಪರಿಗಣಿಸಲ್ಪಟ್ಟರು.ಸ್ಥಳೀಯ ಬಿ.ಎ. ಮತ್ತು ಎಂ.ಎ.ಗಳಲ್ಲೂ ಆಕ್ಸಫರ್ಡಿನ ಬಿ.ಎ.ಯಲ್ಲೂ ಪ್ರಥಮ ವರ್ಗ ಪಡೆದರು. ತಮ್ಮ ತುಂಬುಜೀವನದಲ್ಲಿರುವ ಬಹುಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳ ಅಧ್ಯಾಪಕರಗಿ ಕೆಲಸ ಮಾಡಿದ್ದಾರೆ. ಅಧ್ಯಾಪಕ ವೃತ್ತಿಗೆ ಇವರು ಇಳಿದದ್ದು 1931ರಲ್ಲಿ. ಅನಂತರ 1940ರಲ್ಲಿ ಸಾಂಗ್ಲಿಯ ವಿಲಿಂಗ್ ಡನ್ ಕಾಲೇಜಿನ ಮುಖ್ಯಸ್ಥರಾದರು.1945ರಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು.1946ರಲ್ಲಿ ವೀಸನಗರ ಕಾಲೇಜಿನ ಮುಖ್ಯಸ್ಥರಾದರು.1949ರಲ್ಲಿ ಕೊಲ್ಹಾಪುರದ ರಾಜಾರಾಂ ಕಾಲೇಜಿನ