ಗೋಡೈವ-ಗೋಣಿಸೊಪ್ಪು ಪರಿಸರದ ಅನುಕೂಲತೆಗಳನ್ನೂ ಅನುಸರಿಸಿ ರಚನೆ ಕಲ್ಲು,ಮಣ್ಣು,ಸಿಮೆಂಟ್ ಕಾಂಕ್ರಿಟ್,ಕಬ್ಬಿಣ,ಮರ ಮುಂತಾದ ವಸ್ತುಗಳಿಂದ ಆಗಬವುದು ಗೋಡೆಯ ಗಾತ್ರದ ನಿರ್ಧಾರ ಒಂದು ಎಂಜಿನಿಯರಿಂಗ್ ಸನಸ್ಯೆ ಗೋಡೆಯ ಉದ್ದೇಶ,ಅದು ಭರಿಸಬೇಕಾದ ಹೊರೆ,ಪರಿಸರ ಹಾಗೂ ಲಭ್ಯವಸ್ತುಗಳು ಇವನ್ನು ಅವಲಂಬಿಸಿ ಈ ಸಮಸ್ಯೆಗೆ ಪರಿಹಾರವನ್ನು ಎಂಜಿಯರುಗಳು ಒದಗಿಸುತಾರೆ (ನೋಡಿ-ಕಟ್ಟಡ;ಗೃಹ;ಗೃಹಾಲೇಖ್ಯ,) (ಜಿ.ಟಿ.ಜಿ.ಕೆ.ಎಸ್.ಕೆ;ಎಂ.ಆರ್.ಎಸ್.ಐ) ಗೋದೈವ : ಸು.1040-1080.ಮರ್ಸಿಯದ ಅರ್ಲ್ ಹಾಗೂ ಕಾವೆಂಟ್ರಿಯ ಲಾರ್ಡ್ ಆದ ಲಿಯೋಫ್ರಿಕನ ಮಡದಿ.ಅನೇಕ ಧಾರ್ಮಿಕ ಸಂಘಸಂಸ್ಥೆಗಳಿಗೆ ಉದಾರ ಧನ ಸಹಾಯ ನೀಡಿದವಳು.ಈಕೆಯ ಬಗ್ಗೆ ಸ್ವಾರಸ್ಯವಾದ ಒಂದು ಕಥೆ ಇದೆ;ತೆರಿಗೆಗಳ ಹೊರೆಯನ್ನು ಹೊರಲಾರದೆ ಜನ ತಳಮಳಿಸುತ್ತಿರುವುದನ್ನು ಕಂಡು ಗೋಡೈವಳಿಗೆ ಸಹಿಸದ ಸಂಕಟವಾಯಿತು.ಕಂದಾಯವನ್ನು ಕಡಿಮೆ ಮಾಡುವಂತೆ ತನ್ನ ಗಂಡನನ್ನು ಕೇಳಿಕೊಂಡಳು.ಆತ ಒಂದು ಶರತ್ತು ಹಾಕಿದ.ಅದು ಕೇವಲ ಬಾಯಿಮಾತಿಗೆ ಹಾಕಿದ ಶರತ್ತೇ ವಿನಾ ಉದ್ದೇಶಪೂರ್ವಕವಾದದಾಗಿರಲಿಲ್ಲ.ತನ್ನ ಪತಿಯ ಆದೇಶವನ್ನು ಗಂಭೀರವಾಗಿ ಪರಿಗಣಿಸಿದ ಗೋಡೈವ ನಿರ್ವಸ್ತ್ರಳಾಗಿ,ತನ್ನ ಉದ್ದನೆಯ ತಲೆಗೂದಲಿನಿಂದ ಮೈಯನ್ನು ಮುಚ್ಚಿಕೊಂಡು ಕುದುರೆಯ ಮೇಲೆ ಕುಳಿತು ಕಾವೆಂಟ್ರಿಯ ಬೀದಿಗಳಲ್ಲಿ ಹಾದುಹೋದಳು.ಇದನ್ನು ಗಮನಿಸಿದ ಕಾವೆಂಟ್ರಿಯ ಜನ ತಮ್ಮ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮನೆಯೊಳಗೇ ಇದ್ದುಬಿಟ್ಟರು.ಗೋಡೈವಳ ಈ ವರ್ತನೆಯ ಪರಿಣಾಮವಾಗಿ ಊರಿನ ಜನರ ಮೇಲೆ ವಿಧಿಸಿದ ತೆರಿಗೆ ಕಡಿಮೆಯಾಯಿತು.ಗೋಡೈವ ಬೀದಿಯ ಮೂಲಕ ಹಾಯುತ್ತಿದ್ದಾಗ ನಡೆಯುತ್ತಿದ್ದುದೇನು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕಿಟಕಿಯಿಂದ ಇಣಕಿ ನೋಡುತ್ತಿದ್ದ ಟಾಮ್ ಎಂಬ ಯುವಕನಿಗೆ ಅವನ ದೃಷ್ಟಿ ಹೋಯಿತೆಂತಲೋ ಇಲ್ಲವೇ ಆತ ಸಾವನ್ನಪ್ಪಿದನೆಂತಲೋ ಕಥೆಯಿರುವುದಾದರೂ ಈ ಬಗ್ಗೆ ಸಂಬಂಧಿಸಿದ ಉಲ್ಲೇಖ 17ನೆಯ ಶತಮಾನದ ಮೊದಲಿಗೆ ಎಲ್ಲಿಯೂ ಕಾಣಸಿಗದು.ಕೆಲವು ಇತಿಹಾಸಕಾರರು ಮತ್ತು ಮಾನವಶಾಸ್ತ್ರಘ್ನರು ಈ ಕುದುರೆಸವಾರಿಯನ್ನು ಫಲಸಂವೃದ್ಧಿಗಾಗಿ ಕೈಗೊಳ್ಳುತ್ತಿದ್ದ ಕಟ್ಟಳೆಗಳಲ್ಲೊಂದು ಎಂದು ವ್ಯಾಖ್ಯಿಸಿದ್ದಾರೆ. ಗೋಣಿತಟ್ಟು : ಸೆಣಬಿನ ನಾರಿನಿಂದ ತಯಾರಿಸಲಾಗುವ ತಟ್ಟು (ಹೆಸಿಯನ್,ಬರ್ಲಾಪ್).ಗೋಣಿಯ ತಟ್ಟನ್ನು ಸಾದಾ ನೆಯ್ಗೆಯ (ಪ್ಲೇನ್ ವೀವ್) ವಿಧಾನದಿಂದ ಚದರ ಅಂಗುಲಕ್ಕೆ 8-12 ದಾರಗಳಿರುವಂತೆ ತಯಾರಿಸಲಾಗುತ್ತದೆ.ಕೆಲವೊಮ್ಮೆ ಅಂಗುಲಕ್ಕೆ 4ರಷ್ಟು ಕಡಿಮೆಯಾಗಿಯೂ 20ರಷ್ಟು ಹೆಚ್ಚಾಗಿಯೂ ದಾರಗಳಿರಬಹುದು.ತಟ್ಟಿನ ಒಟ್ಟು ಅಗಲ ಸಾಮಾನ್ಯವಾಗಿ 88 ಸೆಂಮೀ ಇರುತ್ತದೆ.ಇದು ಚದುರಗಜವೊಂದುಕ್ಕೆ 10.5 ಔನ್ಸ್ ತೂಗುತ್ತದೆ. ಗೋಣಿತಟ್ಟನ್ನು ಅನೇಕ ತರಹ ಸಾಮಾನುಗಳ ಸಂವೇಷ್ಟನಕ್ಕೆ,ವಿವಿಧ ಬಗೆಯ ಸರಕುಗಳನ್ನು ತುಂಬುವ ಚೀಲಗಳ ತಯಾರಿಕೆಗೆ ಉಪಯೋಗಿಸುತ್ತಾರೆ.ನೀರುಳ್ಳಿ ತುಂಬುವ ಜಾಳು ಚೀಲ-ಹೀಗೆ ಚೀಲಗಳಲ್ಲಿ ವಿವಿಧ ಬಗೆಗಳಿವೆ.ಅಲ್ಲದೆ ತಟ್ಟಿಗೆ ಬಣ್ಣಹಾಕಿ ಕೋಟಿನ ಲೈನಿಂಗ್,ಸೋಫಾ ಲೈನಿಂಗ್,ಪಾದರಕ್ಷೆಗಳ ಒಳಭಾಗ ಮುಂತಾದವಕ್ಕೂ ಉಪಯೋಗಿಸಬಹುದು.ಕೆಲವು ರಾಸಾಯನಿಕಗಳನ್ನು ಬಳಸಿ ಗೋಣಿತಟ್ಟು ನೀರಿನಿಂದ ಕೊಳೆಯದಂತೆ ಮಾಡಿ ಅದರ ಉಪಯುಕ್ತತೆ ಹೆಚ್ಚುವಂತೆ ಮಾಡಲಾಗಿದೆ.ತಟ್ಟಿನ ಮೇಲೆ ಅಂದವಾದ ವಿನ್ಯಾಸಗಳನ್ನು ಮುದ್ರಿಸಿ ಅಲಂಕರಣ ವಸ್ತುವಾಗಿ ಬಳಸುವುದುಂಟು.ನೆಲಕ್ಕೆ ಹಾಸುವ ಲಿನೋಲಿಯಮ್ ಬಟ್ಟೆ ಸಹ ಗೋಣಿತಟ್ಟಿನಿಂದ ತಯಾರಾದುದು. ಗೋಣಿತಟ್ಟು ಸಾಗಣಿಕೆಯ ಒರಟು ವಿಧಾನಗಳಿಗೆ ಜಗ್ಗದ ಪದಾರ್ಥ.ಅಲ್ಲದೆ ಬಹಳ ಅಗ್ಗ.ಇದರಿಂದಾಗಿ ಹಿಂದ ಇದಕ್ಕೆ ಬಹಳ ಬೇಡಿಕೆ ಇತ್ತು;ತಯಾರಿಕೆಯ ಪ್ರಮಾಣವೂ ಸಾಕಷ್ಟಿತ್ತು.ಆದರೆ ಇತ್ತೀಚೆಗೆ ಕೃತಕ ಎಳೆಗಳಿಂದ ತಯಾರಿಸಲಾಗುವ ಸಂವೇಷ್ಟನ ವಸ್ತುಗಳ ಬಳಕೆಯಿಂದ ಇದರ ತಯಾರಿಕೆ ಇಳಿಮುಖವಾಗಿದೆ (ನೋಡಿ-ಸೆಣಬಿನ ಗಿಡ) (ಎಸ್.ಎನ್.ಬಿ.) ಗೋಣಿಮರ : ಮೊರೇಸೀ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಗಾತ್ರದ ಮರ.ಅಂಜೂರ,ಅರಳಿ,ಆಲ ಮುಂತಾದ ಮರಗಳ ಹತ್ತಿರ ಸಂಬಂಧಿ.ಶಾಸ್ತ್ರೀಯ ಹೆಸರು ಫೈಕಸ್ ಡ್ರೂಪೇಸಿಯ ಇಲ್ಲವೆ ಫೈಕಸ್ ಮೈಸೂರೆನ್ಸಿಸ್.ಕರ್ನಾಟಕದ ಮೂಲವಾಸಿಯಾದ ಇದು ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.ಶ್ರೀಲಂಕ,ಬರ್ಮ ಮತ್ತು ಭಾರತದ ಖಾಸಿ ಬೆಟ್ಟಗಳಲ್ಲೂ ಇದನ್ನು ಕಾಣಬಹುದು.ಗೋಣಿ ಮರವನ್ನು ಅಲಂಕಾರಕ್ಕಾಗಿ ಉದ್ಯಾನವನಗಳಲ್ಲೂ ಸಾಲುಮರವಾಗಿ ರಸ್ತೆಯ ಅಂಚುಗಳಲ್ಲಿಯೂ ಬೆಳೆಸುವುದುಂಟು. ಗೋಣಿಮರ ಸುಮಾರು 15-20 ಮೀ ಎತ್ತರಕ್ಕೆ ಬೆಳೆಯುವ ಮರ.ಕಾಂಡ ಬೂದುಬಣ್ಣದ್ದು.ಎಳೆಯ ಕಾಂಡವನ್ನು ಮುರಿದರೆ ಬಿಳಿ ಬಣ್ಣದ ಹಾಲ್ನೊರೆ ಒಸರುತ್ತದೆ.ಎಲೆಗಳು ಸರಳ ಮಾದರಿಯುವು;ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ.ಆಕಾರ ಅಂಡದಂತೆ.ತುದಿ ಮೊನಚು.ಎಲೆಗಳ ಮೈ ಹೊಳಪಿನದು.ಎಲೆಗಳು ಎಳೆಯವಾಗಿರುವಾಗ ವೃಂತಪತ್ರ ರಕ್ಷಿತವಾಗಿರುತ್ತದೆ;ದೊಡ್ಡವಾದಂತೆ ವೃಂತಪತ್ರ ಬಿದ್ದುಹೋಗುತ್ತದೆ.ಹೂಗಳು ಬಲು ಚಿಕ್ಕವು.ಅರಳಿ,ಆಲ ಮುಂತಾದವುಗಳಲ್ಲಿರುವಂತೆ ಅವು ಗುಂಡನೆಯ ಹೂಗೊಂಚಲುಗಳ ಒಳಭಾಗದಲ್ಲಿ ಸಮಾವೇಶಗೊಂಡಿವೆ.ಹೂಗೊಂಚಲಿಗೆ ಹೈಪ್ಯಾಂತೋಡಿಯಮ್ ಎಂದು ಹೆಸರು.ಇದು ಹೊರನೋಟಕ್ಕೆ ಕಾಯಿಯಂತೆಯೇ ಕಾಣುತ್ತದೆ.ಎಳೆಯದಿರುವಾಗ ಇದರ ಬಣ್ಣ ಹಸಿರು,ಮಾಗಿದ ಮೇಲೆ ಕಿತ್ತಳೆಬಣ್ಣಕ್ಕೆ ತಿರುಗುತ್ತದೆ.ಆಗ ಇದನ್ನು ಸೈಕೋನಸ್ ಎಂದು ಕರೆಯುತ್ತಾರೆ.ಹೂಗಳು ಏಕಲಿಂಗಿಗಳು.ಪ್ರತಿ ಹೂಗೊಮ್ಚಲು ಸಣ್ಣ ದ್ವಾರವನ್ನು ಪಡೆದಿರುವ ಒಂದು ಪಾತ್ರೆಯಂತಿದೆ.ಒಳಗೆ ತಳಭಾಗದಲ್ಲಿ ಹೆಣ್ಣು ಹೂಗಳೂ ಮೇಲ್ಭಾಗದಲ್ಲಿ ಅಂದರೆ ದ್ವಾರದ ಕಡೆಗೆ ಕೆಲವು ಗಂಡು ಹೂಗಳೂ ಇವೆ.ಇವಕ್ಕೆ ಗಾಲ್ ಹೂಗಳೆಂದು ಹೆಸರು.ಪ್ರತಿ ಗಂಡು ಹೂವಿನಲ್ಲಿ ನಾಲ್ಕು ಪೆರಿಯಾಂತ್ ಹಾಲೆಗಳು ಮತ್ತು ಒಂದೇ ಕೇಸರ ಹಾಗೂ ಪ್ರತಿಯೊಂದು ಹೆಣ್ಣು ಹೂವಿನಲ್ಲಿ ನಾಲ್ಕು ಪೆರಿಯಾಂತ್ ಹಾಲೆಗಳು ಮತ್ತು ಉಚ್ಚ ಸ್ಥಾನದ ಒಂದು ಅಂಡಾಶಯ ಇವೆ.ಅಂಡಾಶಯದೊಳಗೆ ಒಂದು ಅಂಡಕ ಮಾತ್ರ ಇದೆ.ಗಾಲ್ ಹೂಗಳ ಅಂಡಾಶಯದಲ್ಲಿ ಅಂಡಕದ ಬದಲು ಒಂದು ಬಗೆಯ ಕೀಟದ ಕೋಶಾವಸ್ಥೆ ಇರುತ್ತದೆ.ಗೋಣಿ ಮರದಲ್ಲಿ ಪರಾಗಸ್ಪರ್ಶ ವಿಶಿಷ್ಟ ರೀತಿಯದ್ದಾಗಿದೆ.ಹೈಮಿನಾಪ್ಟರ ಗುಂಪಿಗೆ ಸೇರಿದ ಕೀಟವೊಂದು ಹೂಗೊಂಚಲಿನ ದ್ವಾರದ ಮೂಲಕ ಒಳಹೊಕ್ಕು ಗಾಲ್ ಹೂವಿನ ಅಂಡಾಶಯದ ಒಳಗೆ ಮೊಟ್ಟೆಯನ್ನಿಟ್ಟು ಹೂವಿನಿಂದ ಹೊರಬರಲಾರದೆ ಅಲ್ಲೇ ಸಾಯುತ್ತದೆ.ಮೊಟ್ಟೆಯಿಂದ ಹೊರಬರುವ ಮರಿ ಅಲ್ಲೇ ಕೋಶಾವಸ್ಥೆಯನ್ನು ಕಳೆದು ಕೀಟವಾಗಿ ಹೊರಬರುತ್ತದೆ.ಮೊಟ್ಟೆ ಇಡಲು ಹೋದ ಕೀಟ ಹೊರಗೆ ಬರಲಾಗದುದಕ್ಕೂ ಮೊಟ್ಟೆಯಿಂದ ಬೆಳೆದ ಕೀಟ ಸುಲಭವಾಗಿ ಹೊರಬರಲು ಸಾಧ್ಯವಾಗುವುದಕ್ಕೂ ಕಾರಣ ಇಷ್ಟೇ.ಹೂಗೊಂಚಲಿನ ಮುಖದಲ್ಲಿ ಒಳಮುಖವಾಗಿ ಬೆಳೆದಿರುವ ರೇಕುಗಳು ಪ್ರಾರಂಭದಲ್ಲಿ ಬಹು ಗಡಸಾಗಿರುತ್ತವೆ.ಇದರಿಂದಾಗಿ ಕೀಟ ಹೂವಿನಿಂದ ಹೊರಬರಲು ಆಗುವುದಿಲ್ಲ.ಹೂ ಮಾಗಿದಂತೆ ರೇಕುಗಳು ಮೃದುವಾಗಿ ಸುರುಟಿಕೊಳ್ಳುತ್ತವಾಗಿ ಬೆಳೆದ ಕೀಟ ಸುಲಭವಾಗಿ ಹೊರಬರುತ್ತದೆ;ಹೀಗೆ ಬರುತ್ತಿರುವಾಗ ಅದು ಗಂಡು ಹೂಗಳ ಮೇಲೆ ಚಲಿಸುವುದರಿಂದ ಪರಾಗ ಅದರ ಮೈಗೆ ಅಂಟಿಕೊಳ್ಳುತ್ತದೆ.ಇದು ಇನ್ನೊಂದು ಹೂಗೊಂಚಲಿನ ಒಳಗೆ ಮೊಟ್ಟೆಯಿಡಲು ಹೋದಾಗ ಅದರ ಮೈ ಮೇಲಿರುವ ಪರಾಗ ಹೆಣ್ಣು ಹೂವಿನ ಶಲಾಕಾಗ್ರದ ಮೇಲೆ ಬೀಳುತ್ತದೆ.ಹೀಗೆ ಪರಾಗಸ್ಪರ್ಶ ನಡೆಯುತ್ತದೆ.ಮಕ್ಕಳಿಗೆ ದಡಾರ ಬಂದಾಗ ಗೋಣಿಮರದ ಹಾಲ್ನೊರೆಯನ್ನು ಮೇಕೆ ಇಲ್ಲವೆ ಹಸುವಿನ ಹಾಲಿನೊಂದಿಗೆ ಸೇರಿಸಿ ಕೊಡುವುದಿದೆ.ಮರವನ್ನು ಸೌದೆಯಾಗೂ ಸೊಪ್ಪುಸದೆಯನ್ನು ಜಾನುವಾರುಗಳ ಮೇವಾಗೂ ಉಪಯೋಗಿಸುತ್ತಾರೆ. (ಕೆ.ಎನ್.ಜಿ) ಗೋಣಿಸೊಪ್ಪು : ಪೋರ್ಚುಲಕೇಸೀ ಕುಟುಂಬಕ್ಕೆ ಸೇರಿದ ಒಂದು ಕಳೆ ಸಸ್ಯ.ಪೋರ್ಚುಲಕ ಕ್ವಾಡ್ರಿಫಿಡ ಇದರ ವೈಘ್ನಾನಿಕ ಹೆಸರು.ಭಾರತದಲ್ಲೆಲ್ಲ ಇದರ ವ್ಯಾಪ್ತಿಯಿದೆ.ಇದು ನೆಲದ ಮೇಲೆ ಹರಡಿಕೊಂದು ಬೆಳೆಯುವ ಏಕವಾರ್ಷಿಕ ಮೂಲಿಕೆಗಿಡ.ಕಾಂಡ ಮತ್ತು ಎಲೆಗಳು ದಪ್ಪವಾಗಿ ರಸಭರಿತವಾಗಿ ಇರುತ್ತದೆ.ಎಲೆಗಳ ಆಕಾರ ದೀರ್ಘ ಅಂಡದಂತೆ,
ಪುಟ:Mysore-University-Encyclopaedia-Vol-6-Part-11.pdf/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
