ಈ ಪುಟವನ್ನು ಪರಿಶೀಲಿಸಲಾಗಿದೆ

೫೨೪ ಗೊಮ್ಮಟೇಶ್ವರ

ಹಿಡಿದಿರುವುದನ್ನು ತೋರಿಸಿರುವುದು, ಗುಂಗುರು ಗುಂಗುರಾದ ತಲೆಗೂದಲು ಕೆಲವು ವಿಗ್ರಹಗಳಲ್ಲಿ ಭುಜದವರೆಗೂ ಇನ್ನು ಕೆಲವು ಕಡೆ ಮುಂಭಾಗದಲ್ಲಿ ಭುಜದಿಂದ ಇಳಿದು ಕಂಕುಳ ಹತ್ತಿರದವರೆಗು ಇರುವಂತೆ ತೋರಿಸುವುದು, ಗೊಮ್ಮಟನ ಅಕ್ಕಪಕ್ಕದಲ್ಲಿ ಸ್ತ್ರೀಯರಿಬ್ಬರು ಮತ್ತು ಮುಂಭಾಗದಲ್ಲಿ ಪುರುಷ ಇರುವಂತೆ ಕೆತ್ತಿರುವುದು ಎಲ್ಲೋರದ ಗೊಮ್ಮಟ್ಟ್ ವಿಗ್ರಹಗಳ ವೈಶಿಷ್ಟ್ಯ್ ಗಳು.

ಶ್ರವಣಬೆಳಗೊಳದ ಗೊಮ್ಮಟ ವಿಗ್ರಹ ಲೋಕಪ್ರಸಿದ್ಧವಾಗಿದೆ. ಇದು ಪ್ರಪಂಚದ ಶಿಲ್ಪಕಲೆಗೆ ಕನಾ೯ಟಕದ ಅನುಪಮ ಕಾಣಿಕೆ. ಪ್ರಾಚೀನ ಶಿಲ್ಪಗಳಲ್ಲಿ ಪ್ರಪಂಚದಲ್ಲೇ ಅತ್ಯಂತ ಎತ್ತರವಾದ ಏಕಶಿಲಾ ಪೂಣ೯ಶಿಲ್ಪ. ಬೆಟ್ಟದ ತುದಿಯಲ್ಲಿ ಎದ್ದುನಿಂತಿದ್ದ ಕೋಡುಗಲ್ಲಿನಿಂದ ಈ ವಿಗ್ರಹವನ್ನು ಕೆತ್ತಲಾಗಿರುವುದು ಈ ವಿಗ್ರಹದ ವಿಶೇಷ. ಈ ವಿಗ್ರಹದ ಎತ್ತರದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿದ್ದುವು. ಈಚೆಗೆ ಅಳತೆ ಮಾಡಿರುವ ಪ್ರಕಾರ ಇದರ ಪ್ರಮಾಣದ ವಿವರಗಳು ಹೀಗಿವೆ: ಒಟ್ಟು ಮೂತಿ೯ಯ ಎತ್ತರ ೫೮", ಕಿವಿಯ ಕೆಳಭಾಗದವರೆಗಿನ ಎತ್ತರ ೫೧", ಕಿವಿಯ ಕೆಳಭಾಗದಿಂದ ನೆತ್ತಿಯವರೆಗಿನ ಎತ್ತರ ಸು.೬'೬", ಪಾದದ ಉದ್ದ ೮'೩", ಕಾಲ ಹೆಬ್ಬೆರಳಿನ ಉದ್ದ ೨'೯", ತೊಡೆಯ ಉದ್ದ ೧೦", ಕಿಬ್ಬೊಟ್ಟೆಯ ಅಡ್ಡಳತೆ ೧೦", ಸೊಂಟದ ಅಡ್ಡಳತೆ ೩೦", ಭುಜಗಳ ನದುವೆ ಇರುವ ವಿಸ್ತಾರ ೨೩ಳಿ", ಕುತ್ತಿಗೆಯ ಕೆಳಭಾಗದಿಂದ ಕಿವಿಯವರೆಗೆ ೨'೭", ತೋರುಬೆರಳಿನ ಉದ್ದ ೩'೯", ನಡುಬೆರಳಿನ ಉದ್ದ ೫", ಅನಾಮಿಕದ ಉದ್ದ ೪'೮",ಕಿರುಬೆರಳಿನ ಉದ್ದ ೩'೨". ಕಾಯೋತ್ಸಗ೯ಭಂಗಿಯಲ್ಲಿ ನಿಂತಿರುವ ಈ ಗೊಮ್ಮಟನ ಪ್ರತಿಮೆ ಬೃಹತ್ತಾಗಿರುವಷ್ಟೇ ಸುಂದರವೂ ಆಗಿದೆ. ಕೆಳಗೆ ತಾವರೆಯ ದಳಗಳನ್ನು ಕೆತ್ತಿದ್ದು ತಾವರೆಹೂವಿನ ಪೀಟದ ಮೇಲೆ ಮೂತಿ೯ ನಿಂತಂತೆ ಕಾನುತ್ತದೆ. ಪಾದಗಳ ಬಳಿ ಹುತ್ತ ಬೆಳೆದಂತೆ ಕೆತ್ತಲಾಗಿದೆ. ಹುತ್ತದ ಬಾಯಿಗಳಲ್ಲಿ ಸಪ೯ಗಳು ಓಡಾಡುತ್ತಿವೆ. ಬಳ್ಳಿಗಳು ಕಾಲನ್ನು ಸುತ್ತಿಕೊಂಡು ಹಬ್ಬಿ ಕೈಗಳಲ್ಲಿ ಭುಜಗಳಲ್ಲಿ ಕೊನೆಗೊಂಡಿವೆ. ತಲೆಯಲ್ಲಿನ ಕೂದಲುಗಳು ಗಂಗುರುಗುಂಗುರಾಗಿವೆ. ಆದರೆ ಇದು ಭುಜದವರೆಗೆ ಇಳಿದಿಲ್ಲ. ಹುತ್ತ ಹಬ್ಬಿ ಹಾವುಗಳು ಹರಿದಾಡಿದರೂ ಬಳ್ಳಿಗಳು ಬೆಳೆದು ತಬ್ಬಿಕೊಂಡರೂ ಅಚಲವಾದ ಮನಸ್ಸನ್ನೂ ತಪಸ್ಸಿನ ದೃಢತೆಯನ್ನೂ ಮೂತಿ೯ಯ ಮುಖಭಾವದಲ್ಲಿ ಮೂಡಿಸಲಾಗಿದೆ. ಅದರಲ್ಲಿಯೂ ಕಷ್ಟಕಾಪ೯ಣ್ಯಗಳಿಂದ ತುಂಬಿರುವ ಪ್ರಪಂಚದ ಕಡೆ ಮರುಕದಿಂದ ಕಿರುನಗೆ ಸೂಸುತ್ತಿರುವಂತೆ ತೋರುವ ಮುಖದ ಭಾವ ವಣ೯ನಾತೀತವಾದುದು. ತ್ಯಾಗವೈರಾಗ್ಯಗಳು ಹೊರಹೊಮ್ಮುತ್ತಿರುವ ಈ ಮೂತಿ೯ಯ ಗಾಂಭೀರ್ಯ ಆಕಷಣೀಯ, ಅನುಪಮ. ಈ ವಿಗ್ರಹದ ಔಣತ್ಯ, ಸೌಂದಯ೯ ಮತ್ತು ಅತಿಶಯಗಳನ್ನು ಕುರಿತು ಬೊಪ್ಪಣ ಕವಿ ಹೀಗೆ ಹೇಳಿದ್ದಾನೆ:

ಅತಿತುಂಗಾಕೃತಿಯಾದೊಡಾಗದದಜೊಳ್ ಸೌಂದರ್ಯಮೌನ್ನತ್ಯಮುಂ

ನುತ ಸೌಂದಯ೯ಮುಮಾಗೆ ಮತಿತ್ತಶಯಂ ತಾನಾಗದೌನ್ನತ್ಯಮುಂ

ನುತ ಸೌಂದಯ೯ಮುಮಾಜಿ೯ತಾತಿಶಯಮುಂ ತನ್ನಲ್ಲಿ ನಿಂದಿದು೯ವೇಂ

ಕ್ಷಿತಿಸಂಪೂಜ್ಯಮೊ ಗೊಮ್ಮಟೇಶ್ವರಜಿನಶ್ರೀರೂಪಮಾತ್ಮೋಪಮಂ

ಗಂಗ ರಾಚಮಲ್ಲನ ಮಂತ್ರಿಯಾದ ಚಾವುಂಡರಾಯ ಈ ಮೂತಿ೯ಯ ನಿಮಾ೯ಪಕ. ಈ ಬಾಹುಬಲಿ

ಮೂತಿ೯ಯ ಪಕ್ಕದಲ್ಲಿರುವ ೧೦ನೆಯ ಶತಮಾನದ ಮೂರು ಶಾಸನಗಳು ಚಾವುಂಡರಾಯ ಮಾದಿಸಿದ ಎಂದು ಸ್ಪಷ್ಟವಾಗಿ ತಿಳಿಸುತ್ತವೆ. ೯೭೮ರಲ್ಲಿ ಚಾವುಂಡರಾಯನೇ ಬರೆದಿರುವ 'ಚಾವುಂಡರಾಯ ಪುರಾಣ'ದಲ್ಲಿ ತನ್ನ ಜೀವನ, ಸಾಹಸಕಾರ್ಯ, ಯುದ್ಧ್ ಕೌಶಲ ಇತ್ಯಾದಿ ಸ್ವಕೀಯ ವಿಚಾರಗಳನ್ನು ಹೇಳಿಕೊಂಡಿದ್ದರೂ ಅದರಲ್ಲಿ ಗೊಮ್ಮಟವಿಗ್ರಹ ನಿಮಾ೯ಣದ ಪ್ರಸ್ತಾಪವಿಲ್ಲದಿರುವುದರಿಂದ ೯೭೮ಕ್ಕೆ ಮುಂಚೆ ಈ ವಿಗ್ರಹದ ನಿಮಾ೯ಣವಾಗಿಲ್ಲವೆಂದು ಹೇಳಬಹುದು. ಈಗಿರುವ ಆಧಾರಗಳ ಮೇಲೆ ಇದನ್ನು ಸು.೯೮೩ರಲ್ಲಿ ಕೆತ್ತಿಸಿ ಮುಗಿಸಿರಬೇಕೆಂದು ತಿಳಿಯಲಾಗಿದೆ. ಚಾವುಂಡರಾಯನ ತಾಯಿ ಕಾಳಲದೇವಿ ಪೌದನಪುರದ ಬಾಹುಬಲಿಯನ್ನು ನೋಡಲು ಅಪೇಕ್ಷಿಸಿದಳು. ದೂರದ ದುಗ೯ಮ ಪೌದನಪುರಕ್ಕೆ ಹೋಗುವುದು ಕಷ್ಟವಾಗಿದ್ದುದರಿಂದ ತನ್ನ ತಾಯಿಯ ಇಚ್ಛೆಯನ್ನು