ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವಾ


 ಭಾರತದ ಪಶ್ಚಿಮ ಕರಾವಳಿಯ ಅತ್ಯದ್ಭುತ ಮತ್ತು ಅತಿಯಾಗಿ ಭೇಟಿ ನೀಡಲ್ಪಡುವ ಸ್ಥಳವೆಂದರೆ ಗೋವಾ. 'ಕಾಸ್ಮೊಪಾಲಿಟನ್' ನಗರವಾಗಿರುವ ಗೋವಾ ತನ್ನಲ್ಲಿರುವ ಅದ್ಭುತ ಬೀಚ್ ಗಳು ಮತ್ತು ಸರಳವಾಗಿ ಹಾಗು ಅಷ್ಟೆ ಕಡಿಮೆ ದರದಲ್ಲಿ ದೊರಕುವಂಥ ಮದ್ಯದಿಂದ ಯುವಜನರಲ್ಲಿ ಮಾತ್ರವೆ ಅಲ್ಲದೆ ಹಿರಿಯರಲ್ಲೂ ಕೂಡ ಹೆಚ್ಚು ಜನಪ್ರಿಯವಾಗಿದೆ. ರಜೆಯ ಮೋಜಿನ ಪರಿಣಾಮಕಾರಿಯಾದ ಅನುಭವವನ್ನು ಪಡೆಯಲು ಗೋವಾ ಇಡಿ ಭಾರತದಲ್ಲೇ ನೆಚ್ಚಿನ ತಾಣವಾಗಿದ್ದು, ಬೇರಾವ ಕರಾವಳಿ ಪ್ರದೇಶವು ಇದರ  ಮಟ್ಟಕ್ಕೆ ಬೆಳೆದಿಲ್ಲ ಎಂದರೆ ತಪ್ಪಾಗಲಾರದು.60 ರ ದಶಕದ ವರೆಗೂ ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿದ್ದ ಗೋವಾದಲ್ಲಿ ಪೋರ್ಚುಗೀಸರ ಪ್ರಭಾವ ಯಥೇಚ್ಚವಾಗಿ ಕಾಣಬಹುದಾಗಿದೆ. ಇನ್ನು ಇಲ್ಲಿಯ ವಿಶೀಷ್ಟ ಬಗೆಯ ಸಂಸ್ಕೃತಿ ಹಾಗು ಅದನ್ನು ಪ್ರತಿಫಲಿಸುವ ಸ್ಮಾರಕಗಳು ಎಲ್ಲೆಡೆ ತುಂಬಿದ್ದು ಗೋವಾದ ಜನಸಮುದಾಯದಿಂದ ಸುಭದ್ರವಾಗಿ ಸಂರಕ್ಷಿಸಲ್ಪಟ್ಟಿವೆ ಮತ್ತು ಅವರಿಗಿದು ಒಂದು ಹೆಮ್ಮೆಯ ವಿಷಯವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ತಾಣಗಳಾದ ಬ್ಯಾಂಕಾಕ್, ಇಬಿಜಾನಂಥ ಬೀಚ್ ಗಳೊಂದಿಗೆ ಹೋಲಿಸುವ ಮಟ್ಟದಲ್ಲಿ ಗೋವಾ ಇದ್ದು ಬಹುಸಂಖ್ಯೆಯಲ್ಲಿ ವಿದೇಶಿ ಪ್ರಯಾಣಿಕರನ್ನು ಆಕರ್ಣ್ಸುತ್ತದೆ.


.ಉತ್ತರ ಗೋವಾದ ಕ್ಯಾಂಡೋಲಿಮ್ ಅಥವಾ ಪಣಜಿ ರಸ್ತೆಗಳಲ್ಲಿ ಒಡಾಡುತ್ತ, ರಸ್ತೆ ಬದಿಯಿರುವ ಉಪಹಾರ ಗೃಹಗಳಲ್ಲಿ ಬೇಕಾದರೆ 'ಮೇಡಿಟರೇನಿಯನ್' ಅಥವಾ 'ಕಾಂಟಿನೆಂಟಲ್' ಸಾಂಪ್ರದಾಯಿಕ ಶೈಲಿಯ ಊಟವನ್ನು ಸವಿಯಬಹುದು ಅದು ಕೂಡ ಬೀರ್ ನೊದಿಗೆ! ಏಕೆಂದರೆ ಇಲ್ಲಿ ಮದ್ಯ ಹಾಗು ಊಟ ಸೇವನೆ ಸರ್ವೆ ಸಾಮಾನ್ಯ. ಕ್ಯಾಂಡೋಲಿಮ್ ಬೀದಿಗಳಲ್ಲಿನ ಓಡಾಟ ಮನರಂಜನಾದಾಯಕವಾಗಿರುವುದರಿಂದ ಬೇಕಾದರೆ ಕೇವಲ 250 ರೂ ನಲ್ಲಿ ದ್ವಿಚಕ್ರವನ್ನು ದಿನ ಪೂರ್ತಿ ಬಾಡಿಗೆಗೆ ಪಡೆದು ಮನಸೊ ಇಚ್ಛೆ ಸುತ್ತಾಡಬಹುದು ಮತ್ತು ಅಲ್ಲಲ್ಲಿ ಬಗೆ ಬಗೆಯ ವಸ್ತುಗಳ ಶಾಪಿಂಗ್ ಕೂಡ ಮಾಡಬಹುದು ಅದು ಅತಿ ಕಡಿಮೆ ದರದಲ್ಲಿ. ಪ್ರತಿ ಶನಿವಾರದಂತೂ ಕ್ಯಾಂಡೋಲಿಮ್ ಮತ್ತು ಅಂಜುನಾಗಳಲ್ಲಿ ಸಂತೆಯೇ ಏರ್ಪಟ್ಟಿರುತ್ತದೆ.ಇನ್ನು ರಜೆ ದಿನಗಳಲ್ಲಂತೂ ಬೀಚ್ ಗಳು ಕೈಬಿಸಿ ಅಹ್ವಾನಿಸುತ್ತವೆ. ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕ್ಯಾಂಡೋಲಿಮ್ ಬಿಚ್, ಕಲಂಗುಟ್ ಬೀಚ್ ಮತ್ತು ಬಾಗಾ ಬೀಚ್ ಗಳನ್ನು ಕ್ಯಾಂಡೋಲಿಮ್ ಪ್ರದೇಶದಲ್ಲಿ ಕಾಣಬಹುದಾಗಿದೆ. ಬಹುತೇಕ ಎಲ್ಲ ಬೀಚ್ ಗಳಲ್ಲಿ ಬಗೆ ಬಗೆಯ ಜಲಕ್ರೀಡೆಗಳಾದ ಜೆಟ್ ಸ್ಕಿ, ಬನಾನಾ ರೈಡ್ ಮತ್ತು ಪ್ಯಾರಸೇಲಿಂಗ ನಂತಹ ಆಟಗಳು ಲಭ್ಯವಿರುವುದರಿಂದ ನೀರಾಯಾಸವಾಗಿ ದಲ್ಲಾಳಿಗಳ ಸಹಾಯದಿಂದ ಅವುಗಳ ಮಜಾ ಸವಿಯಬಹುದು. ಇವುಗಳ ನಡುವೆ ಬೀರ್ ಜೊತೆ ಗೋವನ್ ಶೈಲಿಯ ಖಾದ್ಯ ಸವಿದರೆ ಸಾರ್ಥಕತೆಯ ಭಾವನೆ ಮೂಡದೆ ಇರಲಾರದು. ಬಾಗಾ ಬೀಚ್ ನಲ್ಲಿರುವ 'ಬ್ರಿಟ್ಟೊಸ್' ಉಪಹಾರಗೃಹವು ಅತಿ ಹೆಚ್ಚು ಜನಪ್ರಿಯವಾಗಿದ್ದು ರುಚಿ ರುಚಿಯಾದ ಸಿ ಫುಡ್ ಸವಿಯಬಹುದು.ಇನ್ನು ಅಂಜುನಾ ಬೀಚ್ ನಲ್ಲಿ ವಿಶ್ವ ಪ್ರಸಿದ್ಧವಾದ 'ಕರ್ಲಿಸ್'ನ ಶಾಖೆಗೆ ಭೇಟಿ ನೀಡಬಹುದಾಗಿದೆ. ಮೇಲಿನ ಮೂರು ಬೀಚ್ ಗಳಲ್ಲಿ ಅಂಜುನಾ ಬೀಚ್ ವು ಮೂಲೆಯಲ್ಲಿದ್ದು ಸಮಯ ಕಳೆಯಲು ಅದ್ಭುತವಾದ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಮನಹಪೂರ್ವಕವಾಗಿ ವಿರಮಿಸುತ್ತ ಬೇಕಾದರೆ ತಮ್ಮನ್ನು ತಾವು ಪುಸ್ತಕಗಳಲ್ಲೊ ಅಥವಾ 'ಲ್ಯಾಪಟಾಪ್'ಗಳಲ್ಲೊ ತೊಡಗಿಸಿಕೊಳ್ಳಬಹುದು. ಇನ್ನು ಹುಕ್ಕಾ ಪ್ರಿಯರು 'ಕರ್ಲಿಸ್' ನಲ್ಲಿ ಹುಕ್ಕಾ ಸೇದಬಹುದು, ಅದು ಕೈಗೆಟುಕುವ ಬೆಲೆಯಲ್ಲಿ.ದಕ್ಷಿಣ ಗೋವಾವು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂತಲೆ ಹೇಳಬಹುದು. ಇಲ್ಲೂ ಕೂಡ ಹಲವಾರು ಪ್ರಸಿದ್ಧ ಕಡಲ ತೀರಗಳಿದ್ದು ಅವುಗಳಲ್ಲಿ ಕೋಲ್ವಾ ಬೀಚ್ ಪ್ರಮುಖವಾಗಿದೆ. ಮುಖ್ಯ ವಿಷಯವೆಂದರೆ ಈ ಪ್ರದೇಶವು ಕೌಟುಂಬಿಕ ಜನರು ಅಥವಾ ಗ್ರಹಸ್ತರು ಇಷ್ಟಪಡುವ ತಾಣವಾಗಿದ್ದು, ಅವರ ಅಭಿರುಚಿಗೆ ತಕ್ಕುದಾದ ಉಪಹಾರ ಗೃಹಗಳು ಮತ್ತು ಹೊಟೆಲ್ ಗಳನ್ನು ಇಲ್ಲಿ ಕಾಣಬಹುದಾಗಿದೆ.ಗೋವಾದ ಪ್ರತಿ ಸಾಯಂಕಾಲ ಔತಣ ಪ್ರೀಯರಿಗೆ ಸ್ವರ್ಗವೆಂದೇ ಹೇಳಬಹುದು. ಹಲವಾರು 'ಪಬ್'ಗಳು ಹೊಟೆಲ್ ಗಳು ರಾತ್ರಿಯೆಲ್ಲ ತೆರೆದಿದ್ದು ನಸುಕಿನವರೆಗೂ ಸಂಗೀತಮಯವಾಗಿರುವುದನ್ನು ಗಮನಿಸಬಹುದು. ನೀವೆನಾದರು ತುಂಬಾ ದೂರ ಸಾಗಬೇಕಿದ್ದರೆ ನಿಮ್ಮ ಪ್ರಯಾಣಕ್ಕೆ ಬೇಕಾಗಿರುವ ವಾಹನ ವ್ಯವಸ್ಥೆಯನ್ನು ಮುಂಚಿತವಾಗೆ ಮಾಡಿಟ್ಟುಕೊಳ್ಳುವುದು ಉತ್ತಮ ಇಲ್ಲವಾದರೆ ರಾತ್ರಿ ಸಮಯದಲ್ಲಿ ಕ್ಯಾಬ್ ಅಥವಾ ಟ್ಯಾಕ್ಸಿ ಪಡೆಯುವುದು ತುಂಬಾ ಕಷ್ಟ. ಕಲಗುಟೆ ಬೀಚ್ ನ ಹತ್ತಿರವಿರುವ 'ಕ್ಯಾಫೆ ಟಿಟೊಸ್' ಮತ್ತು 'ಮ್ಯಾಂಬೊಸ್' ನೈಟ್ ಕ್ಲಬಗಳು ಉತ್ತರ ಗೋವಾದಲ್ಲಿರುವ ಎರಡು ಪ್ರಸಿದ್ಧ ಸ್ಥಳಗಳು. ಇಷ್ಟೆ ಅಲ್ಲದೆ ರಸ್ತೆ ಬದಿ ಬದಿಗೆ ಇತರೆ ಅನೇಕ ಪಬ್ ಗಳನ್ನು ಕೂಡ ಕಾಣಬಹುದು. ಕೇವಲ ಕ್ಲಬಗಳು ಮಾತ್ರವಲ್ಲದೆ ಬೀಚ್ ಗಳಲ್ಲಿರುವ ಅನೇಕ ಶ್ಯಾಕ್ ಗಳೂ ಕೂಡ ಔತಣಕೂಟ್ಗಳನ್ನು ಏರ್ಪಡಿಸುವುದನ್ನು ಗಮನಿಸಬಹುದಾಗಿದೆ. ಇನ್ನು ಪಂಜಿಮನಲ್ಲಿ ಅಷ್ಟೊಂದು ಉಲ್ಲಾಸಭರಿತ ವಾತಾವರಣ ಇಲ್ಲದೆ ಹೊದರೂ ಬಗೆ ಬಗೆಯ ರುಚಿಕರವಾದ ಖಾದ್ಯ ಸವಿಯಬಹುದು ಮತ್ತು ಸಕತ್ತಾಗಿ ಶಾಪಿಂಗ್ ಮಾಡಬಹುದು.ಉತ್ತಮಮವಾದ ಸಂಪರ್ಕ ವ್ಯವಸ್ಥೆ ಹೊಂದಿದ್ದು, ಸರಳವಾಗಿ ತಲುಪಬಹುದಾದ ಗೋವಾ, ಮಕ್ಕಳಿಂದ ಹಿಡಿದು ವಯಸ್ಕರವರೆಗೂ ರಜೆ ಅಥವಾ ವಿರಾಮದ ಸಮಯವನ್ನು ಅತ್ಯಾನಂದದಿಂದ ಕಳೆಯಬಹುದಾದ ತಾಣವಾಗಿದೆ. ಶಾಂತಿ ಹಾಗು ನಿಧಾನಗತಿಯ ಜೀವನ ಶೈಲಿಗೆ ಹೆಸರುವಾಸಿಯಾಗಿರುವ ಗೋವಾ ದೇಶಿಯ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನು ವಿದೇಶಿಯರು ಇಲ್ಲಿರುವ ಸ್ವಾತಂತ್ರ್ಯ, ವಿಸ್ಮಯಭರಿತ ಜೀವನಶೈಲಿಗೆ ಮನಸೋಲದೆ ಇರಲಾರರು.ನೀವೆನಾದರು ಸಾಹಸ ಪ್ರವೃತ್ತಿಯವರಾಗಿದ್ದರೆ ಚಿಂತಿಸಲೆ ಬೇಡಿ. ಅವರಿಗೆಂದೆ ಹಲವಾರು ಸೌಲಭ್ಯಗಳು ಬೀಚ್ ಗಳಲ್ಲಿ ಲಭ್ಯವಿದ್ದು ಬೇಕಾದರೆ ಶ್ಯಾಕ (ಕಚ್ಚಾವಾಗಿ ನಿರ್ಮಿಸಲ್ಪಟ್ಟ ಪುಟ್ಟ ಕುಟಿರ ಅಥವಾ ಕ್ಯಾಬಿನ್)ಗಳನ್ನು ಬಾಡಿ ಪಡೆದು ಸ್ಥಳೀಯ ಸಂಸ್ಕೃತಿಯ ಅವಲೋಕನ ಮಾಡಬಹುದು