ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಷ್ಠಿಗಾನ

(೧೮೮೮) ಸೇರಿವೆ. ಇವನ ಆಗಿನ ರೇಖಾವಿನ್ಯಾಸದಲ್ಲಿ ನಿಶ್ಚಿತ ಜ್ಞಾನ ಮತ್ತು ದೃಢತೆಗಳಿದ್ದವು. ವರ್ಣ ಮಿಶ್ರಣದಲ್ಲಿ ನವೀನ ಕ್ರಮವನ್ನನುಸರಿಸಿದುದರಿಂದ ಚಿತ್ರಗಳಲ್ಲಿ ಸೊಬಗೂ ಸೊಗಡೂ ಎದ್ದು ಕಾಣುತ್ತಿದ್ದವು. ಬಿಸಿಲು, ಗಾಳಿಗಳನ್ನು ಲೆಕ್ಕಿಸದೆ ವ್ಯಾನ್ಗೋ ತನ್ನ ಚಿತ್ರಕಲಾಭ್ಯಾಸವನ್ನು ಮುಂದುವರಿಸಿದ. ಸುಮಾರು ಹದಿನೈದು ತಿಂಗಳ ಅವಧಿಯಲ್ಲಿ ಈತ ಇನ್ನೂರು ಚಿತ್ರಕೃತಿಗಳನ್ನು ತಯಾರಿಸಿದ. ತನ್ನ ಚಿತ್ರಕೃತಿಗಳನ್ನೂ ಅಲ್ಲಿನ ಚಿತ್ರ ಕಲಾವಂತರನ್ನೂ ಪರಿಚಯ ಮಾಡಿಕೊಡುವ ಸಲುವಾಗಿ ಗೋಗ್ಯಾನನ್ನು ಈತ ಅಲ್ಲಿಗೆ ಆಹ್ವಾನಿಸಿದ. ಆತ ಬಂದ ಕೆಲವೇ ದಿವಸಗಳಲ್ಲಿ ಇಬ್ಬರಲ್ಲೂ ವೈಮನಸ್ಯ ತಲೆದೋರಿತು. ಆಗ ನಡೆದಂಥ ಘಟನೆ ವಿಚಿತ್ರವಾದ್ದು. ಒಮ್ಮೆ ತರುಣೆಯೊಬ್ಬಳ್ಳು ವ್ಯಾನ್ಗೂನನ್ನು ಚಹ ಅಂಗಡಿಯೊಂದರಲ್ಲಿ ಭೇಟಿ ಮಾಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಳು. ತನಗೇನಾದರೂ ಬಹುಮಾನವನ್ನು ಕೊಡಲೇಬೇಕೆಂದು ಆಕೆ ಈತನನ್ನು ಆಗಾಗ ಒತ್ತಾಯ ಮಾಡುತ್ತಿದ್ದು,ಏನೂ ಇಲ್ಲದಿದ್ದರೆ ಕಿವಿಯನ್ನಾದರೂ ಕೊಡಬೇಕೆಂದು ಕುಚೋದ್ಯ ಮಾಡಿದಳು. ಕ್ರಿಸ್ಮಸ್ ಹಬ್ಬಕ್ಕೆ ಮುಂಚೆ ತನಗೆ ಬಂದ ಭಾಂಗಿಯೊಂದನ್ನು ಬಿಚ್ಚಿ ನೋಡಿದಾಗ ಅದರಲ್ಲಿ ವ್ಯಾನ್ಗೋನ ಕಿವಿ ಇದ್ದುದನ್ನು ಕಂಡು ಆಕೆ ಗಾಬರಿಗೊಂಡಳು. ಆತ್ತ ಕಿವಿ ಕತ್ತರಿಸಿಕೊಂಡ ವ್ಯಾನ್ಗೋನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಿಂದ ಹಿಂದಿರುಗಿದ ಆನಂತರ ಈತ ತನ್ನ ಎರಡೂ ಬಗೆಯ ಸ್ವಚಿತ್ರಣವನ್ನು ರೂಪಿಸಿದ. ಕತ್ತರಿಸಿಹೋದ ಕಿವಿಯ ಜಾಗದಲ್ಲಿ ಕಟ್ಟುಕಟ್ಟಿ, ತಲೆಯ ಮೇಲೆ ಟೋಪಿ. ಬಾಯಲ್ಲಿ ಸಿಗರೇಟ್ ಇಟ್ಟಂತೆ ರೂಪಿಸಿರುವ ಈತನಿಗೆ ಪ್ರಚಾರ ಸಿಕ್ಕಿದಂತಾಯಿತು. ಮನೋವಿಕಲ್ಪದಿಂದಾಗಿ ೧೮೯೦ರ ಜುಲೈ ೨೭ರಂದು ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ. ಪ್ರಾಣಹತ್ಯೆ ಮಾಡಿಕೊಂಡದ್ದು ತಾನೆ ರ್ಚಿಸಿದ ಕೃತಿಯೊಂದರ (ಕಾರ್ನ್ ಫೀಲ್ಡ್ಸ್ ವಿತ್ ಪ್ಲೈಟ್ ಆಫ್ ಬರ್ಡ್ಸ್) ಎದುರಿನಲ್ಲಿ. ಇವನ ಸಾವಿನ ವಾರ್ತೆಯನ್ನು ಕೇಳಿದ ಇವನ ತಮ್ಮ ಬಹಳ ದುಃಖಪಟ್ಟು ಅಣ್ಣ ಸತ್ತ ಆರು ತಿಂಗಳಲ್ಲಿಯೇ ತಾನೂ ಅಸುನೀಗಿದ.

ನೂತನ ಚಿತ್ರಕಲಾ ಸಂಪ್ರದಾಯದಲ್ಲಿ ಪ್ರಸಿದ್ಧನಾದ ವ್ಯಾನ್ಗೋ ತನ್ನದೇ ಆದ ಸ್ವಂತಿಕೆಯನ್ನು ಪ್ರದರ್ಶಿಸಿದ. ಸಾಂಪ್ರದಾಯಿಕ ಪರಿಣಾಮ ವಿಧಾನದ ಚಿತ್ರಕಲಾವಿದರು ಬಳಸುವ ವರ್ಣಗಳನ್ನು, ರೂಪಿಸುವ ಕ್ರಮವನ್ನು ಇವನು ಸ್ವಾಗತಿಸಿದನಾದರೂ ಚಿತ್ರ ಬಿಡಿಸುವುದರಲ್ಲಿ ನವೀನ ವಿನ್ಯಾಸವನ್ನೂ ಕಲಾವಂತಿಕೆಯನ್ನೂ ಬಳಸಿದ. ಅಭಿವ್ಯಕ್ತಿವಾದದ ಪ್ರವರ್ತಕರಲ್ಲಿ ಈತ ಒಬ್ಬ ಎನ್ನಲಾಗಿದೆ.೨೦ನೆಯ ಶತಮಾನದ ಅನೇಕ ಚಿತ್ರ ಕಲಾವಿದರ ಮೇಲೆ ಈತ ಬೀರಿದ ಪ್ರಭಾವ ವಿಶೇಷ ರೀತಿಯದು. ಇವನ ಜೀವನವನ್ನು ಚಿತ್ರಿಸುವ ಹಲವಾರು ಸಂಪಾದಿತ, ಸಂಗ್ರಹಿತ ಗ್ರಂಥಗಳಲ್ಲಿ ಕಂಪ್ಲೀಟ್ ಲೆಟರ್ಸ್ (೧೯೫೮), ಪರ್ಸನಲ್ ರಿಕಲೆಕ್ಷನ್ಸ್ (ಅನು: ೧೯೧೩) ಎಂಬವೂ ಇವನ ಜೀವನವನ್ನಧರಿಸಿ ರಚಿತವಾದ ಕಾದಂಬರಿ ಲಸ್ಟ್ ಫಾರ್ ಲೈಫ್ ಎಂಬುದೂ ಮುಖ್ಯವಾದವು.

ಗೋಷ್ಠಿಗಾನ: ಹಲವಾರು ಒಟ್ಟುಗೂಡಿ ಒಮ್ಮೆಗೇ ಹಾಡಿ ನುಡಿಸುವುದಕ್ಕೆ ಈ ಹೆಸರಿದೆ. ಇಂಥ ಸಮುದಾಯದಾಲ್ಲಿ ಪ್ರತಿಯೊಬ್ಬರಿಗೂ ಪೂರ್ವ ನಿಶ್ಚಿತ ಧಾತು(ಗೇಯಾಂಶ) ಮತ್ತು ಮಾತುಗಳು ತಿಳಿದಿದ್ದು ಆವನ್ನು ನಿಯತಕಾಲದಲ್ಲಿ ಸ್ವತಂತ್ರವಾಗಿ ಹಾಡಿ ನುಡಿಸುತ್ತರೆ. ಪಾಶ್ಚಾತ್ಯರ ಆರ್ಕೆಸ್ಟ್ರ ಎಂಬ ಮಾತು ನಮ್ಮಲ್ಲಿ ಇದಕ್ಕೆ ಪರ್ಯಾಯವಾಗಿ ಇಂದು ಬಳಕೆಗೆ ಬಂದಿದೆ. ಕರ್ಣಾಟಕ ಸಂಗೀತ ಅಥವಾ ಹಿಂದೂಸ್ತಾನೀ ಸಂಗೀತಗಳಲ್ಲಿನ ಕಚೇರಿಗಳನ್ನು ಗೋಷ್ಠಿಗಾಯನವೆನ್ನಲಾಗದು. ಏಕೆಂದರೆ ಇವುಗಳಲ್ಲಿನ ಪ್ರಧಾನ ಗಾಯಕ ಅಥವಾ ವಾದಕ ಹಾಡಿ ನುಡಿಸುವುದನ್ನೇ ಪಕ್ಕವಾದ್ಯಾಗಳವರು ಅನುಸರಿಸಿ ಅನುಕರಿಸುತ್ತಾರೆ. ಸಂಗೀತದ ಧಾತುವಾದರೂ ಇಲ್ಲಿ ಪೂರ್ವನಿಶ್ಚಿತವಲ್ಲ. ಗಾಯಕ ವಾದಕರುಗಳ ಸ್ವತಂತ್ರ ಕಲ್ಪನಾಶಕ್ತಿಯೇ ಇದರ ಜೀವನಾಡಿ. ಅಲ್ಲದೆ ಗೋಷ್ಠಿಗಾನದ ಮೂಲತತ್ವವಾದ ಸಹಕಾಲಿಕ ಸ್ವತಂತ್ರ ಗಾನವಾದನಗಳು ಇಲ್ಲಿಲ್ಲ.

ಇತಿಹಾಸ: ಗೋಷ್ಠಿಗಾನ ಎಂಬುದು ಆಧುನಿಕ ಪ್ರಯೋಗಸಿದ್ಧಿಯನ್ನು ಪಡೆದಿದ್ದರೂ ಆಶುದ್ಧವೇ ಎನ್ನಬೇಕು. ಗೋಷ್ಠಿ ಮತ್ತು ಗಾನ ಎಂಬ ಶಬ್ದಗಳಿಂದ ಆದ ಶಬ್ದವಿದು. ಇವೆರಡು ಮಾತುಗಳಿಗೂ ಭಾರತೀಯ ಸಂಗೀತಶಾಸ್ತ್ರದಲ್ಲಿ ನಿರ್ದಿಶ್ಟವೂ ಸ್ವತಂತ್ರವೂ ಆದ ಬೇರೆ ಬೇರೆ ಅರ್ಥಗಳೇ ಇವೆ. ಗೋಷ್ಠಿ ಎಂಬುದು ಗಾಯನವಿಲ್ಲದೆ ವಾದ್ಯಗಳು ಮಾತ್ರ ಸೇರಿ ಉತ್ಪತ್ತಿಮಾಡಿದ ಸಂಗೀತಕ್ಕೆ ಶಾಸ್ತ್ರವಿಟ್ಟ ಪಾರಿಭಾಷಿಕ ಸಂಜ್ಞೆ. ಇದನ್ನೇ ಪಂಪಾದಿ ಕನ್ನಡ ಕವಿಗಳು ಪ್ರಾಚೀನ ಕಾಲದಿಂದಲೂ ಗೊಟ್ಟಿ ಎಂಬ ತದ್ಭವ ರೂಪದಲ್ಲಿ ಹೇಳುತ್ತ ಬಂದಿದ್ದಾರೆ. ಇದಕ್ಕೆ ಶುಷ್ಕವೆಂಬ ಮತ್ತೊಂದು ಹೆಸರು ಉಂಟು. ಗಾನವೆಂದರೆ ಹಾಡುವುದು ಎಂದು ಅರ್ಥ. ಹಾಡು ಬಾಜನೆಗಳೆರಡು ಸೇರಿದ ಕೂಟವನ್ನು ಬೃಂದವೆಂಬ ಹೆಸರಿನಿಂದ ಶಾಸ್ತ್ರ ವ್ಯವಹರಿಸುತ್ತದೆ. ಒಬ್ಬರೇ ಹಾಡುವುದಕ್ಕೆ ಏಕಲವೆಂದು ಇಬ್ಬರು ಕೂದಿ ಹಾಡುವ ದ್ವಂದ್ವಗಾಯನಕ್ಕೆ ಯಮಳವೆಂದೂ ಮೂವರು ಅಥವಾ ಹೆಚ್ಚು ಮಂದಿ ಕೂಡಿ ಹಾಡುವುದಕ್ಕೆ ಬೃಂದವೆಂದೂ ಶಾಸ್ತ್ರೀಯ ಪರಿಭಾಷೆ. ಬೃಂದವನ್ನು ಕನಿಷ್ಠ, ಮಧ್ಯಮ, ಉತ್ತಮ ಮತ್ತು ಕೋಲಾಹಲವೆಂದು ನಾಲ್ಕು ಬಗೆಯಾಗಿ ಸಂಗೀತರತ್ನಾಕರದಲ್ಲಿ ಶಾರ್ಙ್ಗದೇವ ವಿಂಗಡಿಸುತ್ತಾನೆ. ಇವುಗಳಲ್ಲಿ ಉತ್ತಮ ಗಾಯಕ ವೃಂದದಲ್ಲಿ ನಾಲ್ವರು ಗಾಯನರೂ ಎಂಟು ಅನುಗಾಯನರೂ (ಇವರಿಗೆ ಸಮಗಾಯನರೆಂದು ಹೆಸರು: ಗಾಯನ=ಹಾಡುಗಾರ ಎಂದು ಶಾಸ್ತ್ರರ್ಥ) ನಾಲ್ವರು ಕೊಳಲು ನುಡಿಸುವವರೂ ನಾಲ್ವರು ಮಾರ್ದಂಗಿಕರೂ ಇರುತ್ತಿದ್ದರು. ಮಧ್ಯಮ ಗಾಯನ ಬೃಂದದಲ್ಲಿ ಇದರ ಅರ್ಧದಷ್ಟು ಸಂಖ್ಯೆಯ ಗಾಯನ, ಸಮಗಾಯನ ಮುಂತಾದವರೂ ಕನಿಷ್ಠ ಗಾಯನ ಬೃಂದದಲ್ಲಿ ಒಬ್ಬ ಮುಖ್ಯ ಗಾಯನನೂ ಮೂವರು ಗಾಯನೀಯರೂ (ಹಾಡುಗಾರ್ತಿ) ಇಬ್ಬರು ವಾಂಶಿಕರೂ (ಕೊಳಲುಗಾರ) ಇಬ್ಬರು ಮಾರ್ದಂಗಿಕರೂ ಇರುತ್ತಿದ್ದರು. ಹಾಗೆಯೇ ಉತ್ತಮ ಗಾಯನೀ ವೃಂದದಲ್ಲಿ ಇಬ್ಬರು ಮುಖ್ಯ ಗಾಯನಿಯೂ ನಾಲ್ವರು ಸಮಗಾಯನೀಯರೂ ನಾಲ್ವರು ವಾಂಶಿಕರೂ ಒಬ್ಬ ಮಾರ್ದಲಿಕನೂ ಕನಿಷ್ಠ ಗಾಯನೀ ಬೃಂದದಲ್ಲಿ ಇದ್ದಕ್ಕಿಂತ ಕಡಿಮೆ ಸಂಖ್ಯೆಯವರೂ ಇರುತ್ತಿದ್ದರು. ಉತ್ತಮ ಬೃಂದದಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಹಾಡುವವರು ನುಡಿಸುವ್ವರು ಭಾಗವಹಿಸಿದರೇ ಅದನ್ನು ಕೋಲಾಹಲವೆಂದು ಕರೆಯುವರು.ಇದೆಲ್ಲವನ್ನೂ ರನ್ನ, ಅಭಿನವಪಂಪ, ಅಗ್ಗಳ, ಕಮಲಭವ ಮೊದಲಾದ ಕನ್ನಡ ಕವಿಗಳು ಹತ್ತನೆಯ ಶತಮಾನದಿಂದ ಹೇಳುತ್ತ ಬಂದಿರುವುದರಿಂದ, ಕನ್ನಡನಾಡಿನಲ್ಲಿ ಬೃಂದ ಸಂಗೀತ ಈ ವೇಳೆಗಾಗಲೇ ಪ್ರೌಢಾವಸ್ಥೆಯಲ್ಲಿ ಉತ್ಕರ್ಷವನ್ನು ಪಡೆದಿತ್ತೆಂದು ತಿಳಿಯಬಹುದು.

    ವಾದ್ಯಗಳು ಮಾತ್ರವಿರುವ ಬೃಂದವಿಶೇಷಕ್ಕೆ ಕುತಪವೆಂದು ಸಂಜ್ಞೆ ಶಾರ್ಙ್ಗದೇವ ಸಂಗೀತರತ್ನಾಕರದ ಪ್ರಕೀರ್ಣಕಾಧ್ಯಾಯದಲ್ಲಿ ಕುತಪವನ್ನು ತತ, ಅವನದ್ಧ ಮತ್ತು ಸುಶೀರ.