ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋರ್ಡನ್,ಆಡಮ್ ಲಿಂಡ್ ಸೇ-ಗೋಲಿ ದಕ್ಷಿಣ ಆಫ್ರಿಕದ್ ಚಿನ್ನದ ಗಣಿ ಪ್ರದೇಶಗಳಲ್ಲೊಂದಾದ ರ್ಯಾಂಡ್ ಎಂಬಲ್ಲಿ ಆಗಾಗ ತಲೆದೋರುತ್ತಿದ್ದ ಇನ್ ಫ್ಲುಯೆನ್ ಜಾ ಪಿಡುಗನ್ನು ಹತೋಟಿಗೆ ತರಲು ಸೂಕ್ತವಾದ ಸಲಹೆ ಕೊಡಬೇಕೆಂದು ಗೋರ್ಗಸನಿಗೆ ಕರೆಬಂತು.ಗಣಿ ಕೂಲಿಗಾರರ ಪಾಲೆಯಗಳಲ್ಲಿ ತುಂಬಿ ತುಳುಕಾಡುತ್ತಿದ್ದ ಹೊಲಸುರಾಡಿಗಳೇ ಈ ಪಿಡುಗುಗಳಿಗೆ ಕಾರಣವೆಂಬುದನ್ನು ಈತ ಕಂಡುಕೋಂಡು ಪಿಡುಗಿನ ವಿರುದ್ದ ಯಶಸ್ವೀ ಸಮರ ಹೂಡಿದ.೧೯೧೪ರಲ್ಲಿ ಈತನಿಗೆ ಅಮೇರಿಕದ ಸರ್ಜನ್-ಜನರಲ್ ಪದವಿ ದೊರೆಯಿತು.ಮರುವರ್ಷ ಮೇಜರ್-ಜನರಲ್ ಆಗಿ ೧೯೧೮ರಲ್ಲಿ ಕೆಲಸದಿಂದ ನಿವ್ರುತ್ತನಾದ.ತರುವಾಯ ರಾಕ್ ಫೆಲರ್ ಸಂಸ್ಥೆಯ ಅಂತಾರಾಷ್ಟ್ರಿಯ ಆರೋಗ್ಯ ಸಮೀತಿಯ ಹಳದಿಜ್ವರ ವಿಚಾರ ಮಂಡಲಿಯ ಖಾಯಂ ನಿರ್ದೇಶಕನಾಗಿ ಸೇವೆ ಸಲ್ಲಿಸಿದ.ಮಧ್ಯ ಅಮೇರಿಕದ ಗ್ವಯಾಕ್ವಿಲ್,ಈಕಡಾರ್ ಮತ್ತು ಗ್ವಾಟಿಮಾಲಗಳಲ್ಲಿ ಹಳದಿಜ್ವರದ ವಿಚಾರವಾಗಿ ಸಂಶೋಧನೆ ನಡೆಸಿದ.೧೯೧೯ರಲ್ಲಿ ಪೆರು ದೇಶದಲ್ಲಿ ನಿರ್ಮಲೀಕರಣ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡ. ಈತ ೧೯೨೦ರ ಜುಲೈ ೩ರಂದು ಲಂಡನಿನಲ್ಲಿ ಗತಿಸಿದ.ಈತನ ಸ್ಮರಣಾರ್ಥವಾಗಿ ವಾಷಿಂಗ್ ಟನ್ನಿನಲ್ಲಿ ಗೋರ್ಗಸ್ ಮೆಮೋರಿಯಲ್ ಇನ್ ಸ್ಪಿಟ್ಯೂಟ್ ಆಫ್ ಟ್ರಾಪಿಕಲ್ ಮೆದಿಸಿನ್ ಇನ್ಕ್ ಎಂಬ ಸಂಸ್ಥೆಯನ್ನೂ ಪನಾಮದಲ್ಲಿ ಗೋರ್ಗಸ್ ಮೆಮೋರಿಯಲ್ ಲ್ಯಾಬೊರೇಟರಿ ಅಫ್ ಟ್ರಾಪಿಕಲ್ ರಿಸರ್ಚ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸೊಳ್ಳೆಗಳ ಮೇಲೂ ಹಳದಿಜ್ವರದ ಮೇಲೂ ಕೆಲಸ ಮಾಡಿದ ಇನ್ನೊಬ್ಬನೆಂದರೆ ಗೋರ್ಗಸನ ಸಮಕಾಲೀನನಾದ ವಾಲ್ಟರ್ ರೀಡ್. ಗೋರ್ಡ್ನ್,ಆಡಮ್ ಲಿಂಡ್ ಸೇ:೧೮೩೩-೭೦.ಆಸ್ಟ್ರೇಲಿಯನ್ ಕವಿ.ಹುಟ್ಟಿನಿಂದ ಇಂಗ್ಲಿಷಿನವ.ವಿದ್ಯಾಭ್ಯಾಸವಾದುದೂ ಇಂಗ್ಲೆಂಡಿನಲ್ಲಿಯೇ.ನಿರ್ಲಕ್ಷ್ಯದ,ಬೇಜವಾಬ್ದಾರಿಯ ಯುವಕನೆಂಬ ಕಾರಣದಿಂದ ಆಸ್ಟ್ರೇಲಿಯಕ್ಕೆ ಕಳುಹಿಸಲ್ಪಟ್ಟು ಅಲ್ಲಿಯೇ ನೆಲೆಸಿದ.ಅಲ್ಲಿ ಕುದುರೆ ಸವಾರಿಯ ಪೋಲಿಸು ದಳದನಾಗಿ ಕೆಲಸ ಮಾಡಲಾರಂಭಿಸಿದ.ಹಳ್ಳಿಗಾಡು ಕುದುರೆಜೂಚಿನಲ್ಲಿ ಸವಾರನಾಗಿ ಕೆಲವು ವರ್ಷ ದುಡಿದು ಈತ ಅತ್ಯುತ್ತಮ ಸವಾರನೆಂದು ದಕ್ಷಿಣ ಆಸ್ಟ್ರೇಲಿಯದಲ್ಲೆಲ್ಲ ಖ್ಯಾತಿ ಪಡೆದ.ಇಪ್ಪತ್ತೆಂಟನೆಯ ವರ್ಷದಲ್ಲಿ ಅತ್ಯಲಂಕಾರಶ್ಯಲಿಯಲ್ಲಿ ಭಾವಗೀತೆಗಳನ್ನು ಬರೆಯತೊಡಗಿದ.ಇಪ್ಪತ್ತೆಂಟನೆಯ ವರ್ಷದಲ್ಲಿ ತಾಯಿಯ ಆಸ್ತಿಗೆ ಉತ್ತರಾಧಿಕಾರಿಯಗಿ ಬಾಡಿಗೆ ಕುದುರೆಗಳ ಲಾಯವೊದನ್ನು ತೆರೆದ.ಮುವತ್ತನಾಲ್ಕನೆಯ ವರ್ಷದಲ್ಲಿ ಸ್ತ್ರಿ-ಸ್ಟ್ರೇ ಅಂಡ್ ಸ್ಮೋಕ್ ಡ್ರಿಫ್ಟ್ ಮತ್ತು ಆಶ್ಬರೋತ್ ಎಂಬ ಎರಡು ಕವನಸಂಕಲಬಳನ್ನು ಬರೆಯತೊಡಗಿದ. ಆಸ್ಟ್ರೇಲಿಯದ ಮೂಲ ನಿವಾಸಿಗಳ ನಿತ್ಯಜೀವನದ ವಿವಿದ ನೋಟಗಳನ್ನು ಈತ ತನ್ನ ಕವಿತೆಗಳಲ್ಲಿ ಸೆರೆಹಿಡಿದಿದ್ದಾನೆ.ಆಸ್ಟ್ರೇಲಿಯನ್ ಜನತೆಗೆ ವಿಶಿಷ್ಟವಾದ ನುಡಿಗಟ್ಟನ್ನೇ ಬಳಸಿಕೊಂಡ ಕವಿಗಳಲ್ಲಿ ಈತ ಮೊದಲಿಗ.ಆದರೆ ಇವನ ಕವಿತೆಗಳಲ್ಲಿ ಅತ್ಯುತ್ತಮವಾದವು ಅವುಗಳ ವಸ್ತುಗಳಿಂದಾಗಿ,ಅವುಗಳ ಭಾವನೆಗಳಿಂದಾಗಿ ಆಸ್ಟ್ರೇಲಿಯನ್ ಆಗುವುದಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಆಗಿವೆ ಎಂದು ವಿಮರ್ಶಕರ ಅಭಿಪ್ರಾಯ. ಗೋರ್ಡನ್,ಚಾರ್ಲ್ಸ್ ಚಾರ್ಜ್:೧೮೩೩-೮೫.ಬ್ರಿಟಿಷ್ ಸೇನಾಧಿಕಾರಿ ಮತ್ತು ಸಮಾಜಸೇವಕ.ಬ್ರಿಟಿಷ್ ಸೈನ್ಯ ಅಧಿಕಾರಿಯಾಗಿಕ್ರಿಮಿಯ,ತುರ್ಕಿ,ಅರ್ಮೇನಿಯ,ಚೀನ,ಭಾರತ,ಆಫ್ರಿಕ ಮುಂತಾದ ದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ.೧೮೫೯ರಲ್ಲಿ ಚೀನದ ಮೇಲೆ ದಂಡೆತ್ತಿಹೋದ ಸೈನ್ಯದ ನಾಯಕನಾಗಿ ಗಳಿಸಿದ ಜಯದಿಂದ ಈತ ಚೀನಿ ಗೋರ್ಡನ್ ಎಂದು ಕರೆಯಲ್ಪಟ್ಟ.ಆಫ್ರಿಕದಲ್ಲಿ ಈಜಿನಿನ ಖೆಡಿವ್ ಸರ್ಕಾರದ ಪರವಾಗಿ ಸಮಭಾಜಕೀಯ ಪ್ರಾಂತಗಳ ಗಮರ್ನರಾಗಿದ್ದಾಗ ಗುಲಾಮರ ವ್ಯಾಪಾರ,ಲಂಚಗುಳಿತನ,ಬಡತನ ಮತ್ತು ಅನಾರೋಗ್ಯಗಳ ನಿರ್ಮೂಲಕ್ಕಾಗಿ ಶ್ರಮಿಸಿದ.ದಕ್ಷಿಣ ಆಫ್ರಿಕದಲ್ಲಿ ಬಸೂಟೊ ಜನರ ದಂಗೆಯನ್ನು ಸೈನ್ಯವನ್ನು ಉಪಯೋಗಿಸದೆ ಹತ್ತಿಕ್ಕಿದ ಯಶಸ್ಸು ಈತನದಾಯಿತು.ಆದ್ದರಿಂದ ಈತನ ಸ್ಮಾರಕವಾಗಿ ಅನಾಥ ಬಾಲಕರಿಗಿ ವ್ರುತ್ತಿಶಿಕ್ಷಣ ಕೊಡಲು ವೋಕಿಂಗ್ ಎಂಬಲ್ಲಿ ಗೋರ್ಡನ್ ಬಾಯ್ಸ್ ಸ್ಕೂಲ್ ಅನ್ನು ಸ್ಥಾಪಿಸಲಾಗಿದೆ.ಇಂಗ್ಲೆಂಡಿನಲ್ಲಿ ಅನೇಕ ಕಡೆ ಈತನ ಸ್ಮಾರಕಗಳಿವೆ. ಗೋರ್ಡಿಯೇಸಿಯ:ಆಸ್ಕೆಲ್ಮಿಂಥೀಸ್ ವಿಭಾಗದ ಇಂದು ವರ್ಗ.ನೆಮ್ಯಾಟೋ ಮಾರ್ಫ ಪರ್ಯಾಯನಾಮ.ಕೂದಲಿನ ಎಳೆಯಂತೆ ಕಾಣುವ ವಿಶಿಷ್ಟ ರೀತಿಯ ಹುಳುಗಳನ್ನು ಪರ್ಯಾಯನಾಮ.ಗೋರ್ಡಿಯೇಸಿಯಕ್ಕೆ ಸೇರಿದ ಜೀವಿಗಳು ಭಿನ್ನಲಿಂಗಿಗಳು.ಜನನಾಗಗಳು ದೇಹದುದ್ದಕ್ಕೂ ವ್ಯಾಪಿಸಿವೆ.ನೀರಿನಲ್ಲಿ ಬೆಳೆಯುವ ಜೊಂಡಿನ ಮೇಲೆ ಉದ್ದುದ್ದನೆಯ ಸರಪಳಿಗಳ ರೀತಿಯಲ್ಲಿ ಇವು ಮೊಟ್ಟೆಗಳನ್ನಿಡುತ್ತವೆ. ಗೋಲಿ:ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಾಲ್ನಾಡ್ ತಾಲ್ಲೂಕಿನಲ್ಲಿರುವ,ಬೌದ್ಧಸ್ತೂಪದ ಅವಶೆಷಗಳುಳ್ಳ ಪ್ರಸಿದ್ದ ಗ್ರಾಮ.ಕ್ರಿಷ್ಣಾನದಿಯ ಗೊಲ್ಲಾರು ಎಂಬ ನದಿಯ ದಡದ ಮೇಲಿದೆ.೧೮೨೨ರಲ್ಲಿ ರಾಬರ್ಟ್ ಸಿವೆಲ್ ಇಲ್ಲಿದ್ದ ಬೌದ್ಧಸ್ತೂಪವನ್ನು.