ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರಂಥಾಲಯ

೧೩೦೦ ಗ್ರಂಥಗಳಿದದ್ದು ಕಂಡುಬಂದಿತು.ಆವನೆಲ್ಲ ಈತ ನಾಶಪಡಿಸದೆ ಜೊಪಾನವಾಗಿ ತೆಗೆದುಕೊಂಡು ಹೊಗಿ ತನ್ನ ಗ್ರಂಥಾಲಯದದಲ್ಲಿಟ್ಟುಕೊಂಡನೆಂದೂ ಕಾಲಾಂತರದಲ್ಲಿ ಆವುಗಳಲ್ಲಿಯ ಕೆಲವನ್ನು ಅರಬ್ಬಿಗೆ ಬಾಷಾಂತರ ಮಾಡಿಸಿದನೆಂದೂ ತಿಲಿದುಬರುತ್ತದೆ.ಇಂಥ ಉದಾಹರಣೆಗಳು ಆಲ್ಲಲ್ಲಿ ಮಿಂಚುವ ಬೆಳಕಿನಂತೆ, ಶಾಂತಿ ಹಾಗೂ ಸ್ಥಿರತೆಯನ್ನು ಇಂಥ ವಾತಾವರಣಕ್ಕೆ ನಿಜವಾಗಿ ತಂದವರು ಮೊಗಲರು.ಇವರು ಸ್ವತ ವಿದ್ಯಪ್ರೆಮಿಗಳೂ ಕಲಾವಂತರೂ ರಸಿಕರು ಆದ್ದರಿಂದ ಇವರ ಕಾಲದಲ್ಲಿ ಗ್ರಂಥರಚನೆ ಹಾಗೂ ಪೋಶಣೆಗಳಿಗೆ ಪುಷ್ತಿ ದೊರೆಯಿತು.ಬಾಬರನಿಂದಲೇ ಪ್ರಾರಂಭವಾದ ಕಾಲೇಜುಗಳ ಸ್ಥಾಪನೆ,ಗ್ರಂಥಾಲಯ ರಚನೆ ಹಾಗೂ ಪೋಷಣೆಗಳಿಗೆ ಪುಷ್ಟ್ತಿ ದೊರೆಯಿತು.ಇವನ ಆಳಿಕೆ ಕೇವಲ ೪ ವರ್ಶಗಳ[೧೫೨೬-೩೦] ಆಲಾವಧಿಯದಾಗಿದ್ದರೂ ವಿದ್ಯಾಮಂದಿರಗಳ ಸ್ಥಾಪನೆ,ಹಾಗೂ ಗ್ರಂಥರಚನೆ ಆ ಕಾಲಾವಧಿಯಲ್ಲಿ ಚೆನ್ನಾಗಿ ಅಭಿವ್ರುದ್ದಿ ಹೊಂದಿತು.ಸದಾ ಯುದ್ದ ನಿರತನಾಗಿದ್ದರೂ ಬಾಬರ್ ಅಲ್ಪಸ್ವಲ್ಪ ಕಾಲಾವಕಾಶ ಮಾಡಿಕೊಂಡು ವ್ಯ್ಯಾಸಂಗ ಮಾಡುತ್ತಿದ್ದ.ಮೊಗಲರ ಇಂಪೀರಿಯಲ್ ಲೈಬ್ರರಿಯ ತಳಹದಿಯನ್ನು ಹಾಕಿದವ ಬಾಬರನೇ. ಆತ ಸ್ವಂತಕ್ಕೂ ಒಂದು ಗ್ರಂಥಲಯವನ್ನು ಕಟ್ಟಿಕೊಂಡಿದ್ದ.ಬಾಜಬಹಾದ್ದೂರನೆಂಬಾತ ಇವನ ಗ್ರಂಥಪಾಲನಾಗಿದ್ದ.ಬಾಬರನ ಮಗ ಹುಮಾಯೂನನೂ ಅತ್ಯಂತ ವಿದ್ಯಾಪಕ್ಷಪಾತಿಯೂ ಸ್ವತ ಪಂಡಿತನೂ ಆಗಿದ್ದ.ಇವನ ಸಾವು ಕೂಡ ಗ್ರಂಥಾಲಯದಲ್ಲೇ ಆಯಿತು.ಗ್ರಂಥ ಹುಡುಕಲು ತನ್ನ ಸ್ವಂತ ಗ್ರಂಥಲಯದ ಮಹಡಿಯ ಮೇಲೆ ಹತ್ತಿದ ಈತ ಅಲ್ಲಿಂದಲ್ಲೇ ಕಾಅಲುಜಾರಿ ಬಿದ್ದು ನಿಧನನಾದ.ಅಕ್ಬರ್ ನ ಕಾಲದಲ್ಲಿ ಮೊಗಲರ ಆಳಿಕೆ ಘನತೆಯನ್ನು ಮುಟ್ಟಿದತೆ ಗ್ರಂಥಾಲಯಗಳ ವ್ಯವಸ್ಥೆಯೂ ಚನ್ನಾಗಿಯೆ ಬೆಳೆಯಿತು.ಇವನ ಕಾಲದಲ್ಲಿಯೆ ಗ್ರಂಥಾಲಯದ ಅಂಗವಾಗಿ ಭಾಷಾಂತರ ವಿಭಾಗ ಸ್ತಾಪಿತವಾಯಿತು.ಇದರಿಂದಾಗಿ ಅನೇಕ ಸಂಸ್ಕ್ರುತ ಗ್ರಂಥಗಳ ಭಾಷಾಂತರಗೊಂಡವು.ಆಸ್ಥನ ಪಂಡಿತರುಗಳಾದ ಬದ್ ಯೂನಿಯ ಲೇಖನಿಯಿಂದ ರಾಮಾಯಾಣ [೧೫೮೯],ನಬೀಬ್ ಖಾನನ ಮೇಲ್ವಿಚಾರಣೆಯಲ್ಲಿ ಮಹಾಬಾರತಗಳ ೧೫೮೩]ಬಾಷಾಂತರಗಳು ಬೆಳಕು ಕಂಡವು.ಆಥವ೯ಮೆದ ಲೀಲಾವತಿ ಗ್ರಂಥಗಳೂ ರೂಪಾಂತರಗೊಂಡವು.ಆಗ್ರದ ಕಿಲ್ಲೆಯಲ್ಲಿಯು ಅಕ್ಬರ್ ಬಾದಶಹ ವಿಶಯಾನುಕ್ರಮದಲ್ಲಿ ವಗ೯ವಿಬಾಗ ಹೊಂದಿದ್ದ ಇಂಪೀರಿಯಲ್ ಗ್ರಂಥಗಳು ಇದ್ದವೆಂದು ಸ್ಥಾಪಿಸಿದ.ಇಲ್ಲಿ ೨೪೦೦೦ ಗ್ರಂಥಗಳು ಇದ್ದವೆಂದೂ ಈ ಹೊತ್ತಿನ ಬೆಲೆಯಲ್ಲಿ ಅವುಗಳ ಬೆಲೆ೭೪ ಲಕ್ಶ ಪೊಂಡುಗಲಿಗೂ ಮೀರಿದ್ದಾಗಿತ್ತೆಂದು ಅಂದಾಜು ಮಾಡಲಾಗಿದೆ.ಇಲ್ಲಿಯ ಗ್ರಂಥಗಳು ಕವಿತೆ,ಜೋತಿಶ್ಯ,ಖಗೋಳಶಾಸ್ತ್ರ,ಬೂಮಿತಿ,ಆಯುವೇ೯ದ ಮುಂತಾದ ವಿಭಾಗಗಳಾಗಿ ವಗಿ೯ಕರಿಸಲ್ಪಟ್ಟ ದವು.ಗ್ರಂಥಾಲಯಕ್ಕೆ ಕಡ್ದಾ ಯವಾಗಿ ತಮ್ಮ ಗ್ರಂಥಗಳ ಪ್ರತಿಗಳನ್ನು ಒಪ್ಪಿಬೇಕಾಗಿತ್ತು.ಗುಜರಾತಿನ ದಾಳಿಯ ಸಮಯದಲ್ಲಿ ಅಲ್ಲಿಯ ಇತ್ತಿಮಾದ ಖಾನನ ಗುಜರಾತಿ ಗ್ರಂಥಾಲಯವನ್ನೂ ಅಕ್ಬರ್ ವಶಪಡಿಸಿಕೊಂಡು ತನ್ನ ಗ್ರಂಥಾಲಯಕ್ಕೆ ಸೇರಿಸಿಕೊಂಡ.ಹಜ್ ಯಾತ್ರಿಕರು ದಾರಿಯಲ್ಲಿ ತಮಗೆ ಕಂಡುಬಂದ ಉತ್ತಮ ಗ್ರಂಥಗಳನ್ನು ಕೊಂಡುತಂದು ಅರಮನೆಯ ಗ್ರಂಥಾಲಯಕ್ಕೆ ನೀಡಿದರೆ ಅವುಗಳ ಬೆಲೆಯನ್ನಲ್ಲದೆ ಅವರ ಶ್ರಮದ ಬೆಲೆಯನ್ನೂ ಕೊಡಲಾಗುತ್ತಿತ್ತು.ಇವನ ಆಳಿಕೆಯ ಕಾಲದಲ್ಲಿಯೇ ಅಂದವಾಗಿ ಪ್ರತಿಮಾಡುವ ಕಲೆ ,ಪುಸ್ತಕಕ್ಕೆ ರಟ್ಟು ಕಟ್ಟುವ ಕಲೆ ಹಾಗೂ ಹಸ್ತಪ್ರತಿಗಳಿಗೆ ಬಣ್ನದ ಚಿತ್ರಗಳನ್ನೊದಗಿಸುವ ಕಲೆಗಳು ವೃದ್ಧಿಗೊಂಡವು. ಹೀಗೆ ಆಕ್ಬರನಿಂದ ಘನತೆಗೇರಿದ ಪರಂಪರೆ ವಿಲಾಸಪ್ರಿಯನಾದ ಜಹಂಗೀರನ ಕಾಲದಲ್ಲಿ ಅವನ ರಸಿಕತೆಯಿಂದಾಗಿ ಇನ್ನೂ ಚೆನ್ನಾಗಿ ಮುಂದುವರೆಯಿತು.ಗ್ರಂಥಾಲಯಗಳು ಬಾಹ್ಯ ಸೌಂದರ್ಯವನ್ನೂ ಪಡೆದವು. ಮಹತ್ತ್ವದ ಗ್ರಂಥಗಳನ್ನು ಕಲೆಹಾಕುವಲ್ಲಿ ಆತ ಅಪಾರ ಹಣ್ಣ ವೆಚ್ಚ ಮಾಡುತ್ತಿದ್ದ. ಯುಸುಫ್-ಎ-ಜುಲೇಖಾ ಎಂಬ ಗ್ರಂಥದ ಪ್ರತಿಯನ್ನು ಕೊಳ್ಲಲು ಆತ ೧೦೦೦ ಬಂಗಾರದ ಮೊಹರುಗಳನ್ನು ನೀಡಿದನಂತೆ. ಆತನ ಪತ್ನಿ ನೊರಜಹಾನ್ ಕೊಡ ಗ್ರಂಥಪ್ರೇಮಿ, ಹಣ ಸೊರಮಾಡಿ ಗ್ರಂಥ ಕೊಳ್ಳುತ್ತಿದ್ದಳು. ಮಿರ್ಜ ಕಾಮರಾನನ ದಿವಾನ ಗ್ರಂಥವನ್ನು ಮೊರು ಬಂಗಾರದ ಮೊಹರುಗಳಿಗೆ ಖರೀದಿಸಿದ ಉಲೇಖವಿದೆ. ಇಂದಿಗೊ ಖುದಾಭಕ್ಷ ವ್ರಾಚ್ಯ ಸಾರ್ವಜನಿಕ ಗ್ರಂಥಲಯದಲ್ಲಿ ಜಹಂಗೀರನ ಜ್ಯೋತಿಷ್ಯಶಾಸ್ತ್ರದ ಗ್ರಂಥಾಲಯಕ್ಕೆ ವರ್ಣಾಚಿತ್ರಗಳ ಶ್ರೇಣಿಯೊಂದನ್ನು ಜಹಂಗೀರ್ ಜೋಡಿಸಿದನೆನ್ನಲಾಗಿದೆ.ಇವನ ಹ ಸ್ತಾಕ್ಷರವನ್ನುಳ್ಲ ಗ್ರಂಥಗಳು ಇಂದಿಗೂ ದೇಶದಲ್ಲಿಯ ಕೆಲವು ಗ್ರಂಥಾಲಯಗಳಲ್ಲಿ ಲಭ್ಯವಿವೆ.ಇವನ ಕಾಲದಲ್ಲೇ ದಿಲ್ಲಿಯಲ್ಲಿ ಇಂಪೀರಿಯಲ್ ಕಾಲೇಜು ಸ್ಥಾಪನೆಗೊಂಡಿತು.ಷಹಜಹ್ಹನನಾಮಾದ ಕತೃ೯ವೂ ಕಾಶ್ಮೀರದ ರಾಜ್ಯಪಾಲನೂ ಆಗಿದ್ದ ಆಶಾನಾ ಮಕಹಮ್ಮದ್ ತಾಹೀರ್ ಇವನ ಗ್ರಂಥಪಾಲನಾಗಿದ್ದ.ಈ ಕಾಲದಲ್ಲೇ ಜೆಸುಯಿಟರು ಆಗ್ರ ದೆಹಲಿಳಲ್ಲಿ ಗ್ರಂಥಲಯವನ್ನು ಸ್ಥಾಪಿಸಿದರು.ಆಗ ಪ್ರಮುಖ ಗ್ರಂಥಪಾಲನಿಗೆ ಕಿತಾಬದಾರ ಅಥವಾ ನಿಜಾಮ ಎಂದೂ ಸಹಾಯಕನಿಗೆ ದರೋಗಾ ಮುಹತಮಿನ್ ಎಂದು ಕರೆಯುತ್ತಿದ್ದರು.ಷಹಜಹಾನನ ಹಿರಿಯ ಮಗ ದಾರಾ ಗ್ರಂಥಾಲಯ ಬೆಳೆವಣಿಗೆಗೆ ಅಮೂಲ್ಯ ಕಾಣಿಕೆ ನೀಡಿದ್ದಾನೆ.ಅವನ ಕಾಲದಲ್ಲಿ ಉಪನಿಷತ್ತುಗಳು,ಭಗವದ್ಗೀತೆ,ಯೋಗವಾಸಿಷ್ಟ,ಪ್ರಬೋಧ ಚಂದ್ರೋದಯಗಳು ಪಾರಿಸಿ ಭಾಷೆಗೆ ತಜು೯ಮೆಗೊಂಡವು. ಸ್ವತ ದಾರಾ ಆರು ತಿಂಗಳಲ್ಲಿ ೫೨ ಉಪನಿಷತ್ತುಗಳನ್ನು ತಜು೯ಮೆ ಮಾಡಿದನಂತೆ. ಧಾಮಿ೯ಕ ನಿಷ್ಠೆಯುಳ್ಳ ಜರಂಗಜೇಬ್ ಕುರಾನಿನ ಪ್ರತಿ ಮಾಡುತ್ತಿದ್ದ.ದಾಳಿಗಳ ಕಾಲದಲ್ಲಿ ಈತ ಗ್ರಂಥಾಲಯಗಳನ್ನು ನಾಶಮಾಡಲ್ಲಿಲ್ಲ.ಬೀದರ್ ನ ಮಹಮೂದ್ ಗಾವಾನನ ಗ್ರಂಥಾಲಯವನ್ನು ಆತ ಅರಮನೆ ಗ್ರಂಥಾಲಯಕ್ಕೆ ಸೇರಿಸಿದ.

ಆದರೆ ನಾದಿರ್ ಷಹನ ದಾಳಿಯ ಕಾಲದಲ್ಲಿ ಭಾರತದ ಆಥಿ೯ಕ ಸಂಪತ್ತಿನ ಜೊತೆಗೆ ಗ್ರಂಥ ಸಂಪತ್ತೂ ದೇಶಾಂತರಗೊಂಡಿತು.ಅನೇಕ ಗ್ರಂಥಾಲಯಗಳು ನಾಮಾವಶೇಷವಾದವು.

ಖುದಾಭಕ್ ಖಾನ್ ಎಂಬ ಪ್ರಸಿದ್ದ ವಕೀಲ ಪಾಟ್ನದಲ್ಲಿ ಸ್ಥಾಪಿಸಿದ೧೮೯೧] ಸಾವ೯ಜನಿಕ ಗ್ರಂಥಾಲಯವೊಂದು ಆಮುಲ್ಯವಾದ ಹಸ್ತಪ್ರತಿಗಳ ಸಂಗ್ರಹವೆನಿಸಿದೆ.

ಮುದ್ರಣ ಕಲೆಯ ಉಗಮ ಹಾಗೂ ಬೆಳೆವಣಿಗೆ ಮುದ್ರಣಕಲೆ ಗ್ರಂಥಾಲಯಗಳ ಬೆಳೆವಣಿಗೆಗೆ ಹೊಸ ಯತುಂಬಿತು.ಪೋಚು೯ಗೀಸರು ಸೇಂಟ್ ಪಾಲ್ ಕಾಲೇಜಿನಲ್ಲಿ ಒಂದು ಮುದ್ರಣಾಲಯ ಸ್ಥಾಪಿಸಿದರು.ಇಲ್ಲಿಂದ ಹೊರಬಂದ ಮೊದಲ ಗ್ರಂಥ ಕಾಂಕ್ಲುಸೋಸ್ ಪಬ್ಲಿಕಾಸ್. ಮೊದಮೊದಲು ಕರಾವಳಿಯಲ್ಲಿ ಮುದ್ರಣಾಲಯಗಳು ಕಂಡುಬಂದವು.ಅನಂತರ ಪೂವ೯ ಕರಾವಳಿಗೆ ವಿಸ್ತರಣೆಗೊಂಡವು. ೧೫೫೭ರ ಸುಮಾರಿಗೆ ಪೋಚು೯ಗೀಸ್ ಭಾಷೆಯಲ್ಲಿ ಮುದ್ರಣಗೊಂಡ ಡಾಕಿನ ಕ್ರಿಸ್ತವೊ ಗ್ರಂಥದ ಮಲಬಾರೀ ತಮಿಳು ಭಾಷೆಯ ಭಾಷಾಂತರ

ಇದರ ದ್ವಿತೀಯ ಮುದ್ರಣದ ಪ್ರತಿಯೊಂದು ಇಂದು ರಾಷ್ತ್ರಿಯ ಗ್ರಂಥಾಲಯದಲ್ಲಿದೆ.ಮುದ್ರಿತ ಗ್ರಂಥಗಳನ್ನು ಪ್ರಥಮವಾಗಿ ಹೊಂದಿದ ಭಾಷೆಗಳೆಂದರೆ ತಮಿಳು ಹಾಗೂ ಮಲೆಯಾಳಂ.ಇಗ್ಲೇಸಿಯನ್ ಕಾಮೋನಿ ಎಂಬವನು ತಮಿಳು ಭಾಷೆಯ ಮುದ್ರಣ ಮೊಳೆಗಳನ್ನು ತಯಾರಿಸುವವರೆಗೆ ಆ ಭಾಷೆಯ ಕ್ರುತಿಗಳೂ ಮಲಯಾಳಂ ಲಿಪಿಯಲ್ಲಿ ಅಚ್ಚಾಗುತ್ತಿದ್ದವು.ಈತನ ಮೊಳೆಗಳಿಂದ ಮುದ್ರಣಗೊಂಡು ಪ್ರಥಮ ಪೋಚು೯ಗೀಸ್ ತಮಿಳು ನಿಘಂಟು.೧೮೬೩ರಲ್ಲಿ ಮದ್ರಾಸಿನಲ್ಲಿ ೧೦ ಮುದ್ರಣಾಲಯ ಗಳಿದವು.೧೮೬೨ರಲ್ಲಿ ಹಂಟ್ ಎಂಬಾತ ಸುಧಾರಿತ ತಮಿಳು ಲಿಪಿಯ ಮೊಳೆಗಳನ್ನು ತಯಾರಿಸಿದ.ಇವುಗಳಿಂದ ಮುದ್ರಣಗೊಂಡ ತಮಿಳು-ಇಂಗ್ಲಿಷ್ ಶಬ್ದಕೋಶ ಮುದ್ರಣ ಎಂದಿಗೂ ಯಾವುದೆ ಮುದ್ರಿತ ಗ್ರಂಥದೊಂದಿಗೆ ಸ್ಪಧಿ೯ಸುವಂತಿದೆ.