ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೀಕ್ ಕಲೆ, ವಾಸ್ತು, ಶಿಲ್ಪ

ಡೊಂಕಾದ ಗೆರೆಗಳು, ಸಂಮಾತರ ಗೆರೆಗಳು ಮುಂತಾದ ಜ್ಯಾಮಿತೀಯ ರೂಪಗಳನ್ನು ತಾಳಿವೆ. ಶವಯಾತ್ರೆ, ನೌಕಾಯುದ್ಧ ಇತ್ಯಾದಿಗಳ ಚಿತ್ರಗಳನ್ನು ಸಾಮಾನ್ಯವಾಗಿ ಈ ಕಾಲದ ಬಟ್ಟುಲುಗಳ ಮೇಲೆ (ಪಾನಪಾತ್ರೆಗಳ ಮೇಲೆ) ಬಿಡಿಸಲಾಗಿದೆ. ಪ್ರ.ಶ.ಪೂ. 7ನೆಯ ಶತಮಾನದಲ್ಲಿ ಗ್ರೀಕರ ಕಲೆ ಪೌರಸ್ತ್ಯರ, ಹೆಚ್ಚಾಗಿ ಪರ್ಷಿಯನ್ನರ ಪ್ರಭಾವಕ್ಕೊಳಗಾಯಿತು. ವಿಕಟಾಲಂಕಾರದ ಭೀಭತ್ಸಗಳು, ಗುಲಾಬಿಯ ಆಕಾರದ ಅಲಂಕಾರಗಳು, ಪಕ್ಷಿಗಳು- ಇವು ಕಲೆಗೆ ಸಾಮಗ್ರಿಗಳು. ರಂಗುರಂಗಿನ ಚಿತ್ರಮಯ ಬಟ್ಟೆಗಳನ್ನು ನೇಯುವ ಕಲೆಯಲ್ಲಿ ಪರ್ಷಿಯ ಪರಿಣತಿ ಪಡೆದಿತ್ತು. ಆದ್ದರಿಂದ ಅಲ್ಲಿ ನಿಶ್ಚಿಲ ಚಿತ್ರಗಳಿಗೆ ಪ್ರಾಧಾನ್ಯವಿತ್ತು. ಗ್ರೀಕರು ಪರ್ಷಿಯನರಿಂದ ಈ ವಿನ್ಯಾಸವನ್ನು ಎರವಲು ಪಡೆದು ಪಾನಪಾತ್ರೆಗಳ ಮೇಲೆ ರೂಪಿಸಿದಾಗ ಅವು ನೀರಸವೂ ನಿಸ್ಸತ್ತ್ವವೂ ಆದವು. ಗ್ರೀಕ್ ಕಲೆಯ ಶೇಷ್ಠಕಾಲ ಉದಯವಾದ್ದು ಇಂಥ ಹಿನ್ನೆಲೆಯಲ್ಲಿ. ಇಲ್ಲಿ ಸಾಮಾನ್ಯವಾಗಿ ಐದು ಘಟ್ಟಗಳನ್ನು ಗರತಿಸಬಹುದು. ಮೊದಲನೆಯದು ಆರ್ಷೇಯ. ಈ ಕಾಲದಲ್ಲಿ ರೊಪಿತವಾದ ಮನುಷ್ಯಾಕೃತಿಗಳಲ್ಲಿ ಸಾಮಾನ್ಯವಾದ ಅಂಗ ರಚನೆಯ ದೋಶಗಳನ್ನು, ಭಾವಪ್ರದರ್ಶನದಲ್ಲಿ ಅನೌಚಿತ್ಯವನ್ನು, ಭೀರುವಾದ ತಂತ್ರಗಳನ್ನು ನೋಡಬಹುದು. ಈ ಕೊರತೆಗಳನ್ನು ಪರಿವರ್ತನ ಕಾಲದಲ್ಲಿ ಸ್ವಲ್ಪಮಟ್ಟಿಗೆ ನಿವಾರಿಸಿಕೊಳ್ಳಲಾಯಿತು. ಆದರೆ ಭಂಗಿಯಲ್ಲಿ ಇನ್ನೂ ಸ್ವಲ್ಪ ಗಡುಸು ತುಂಬಿಕೊಂಡಿತ್ತು. ಇದೂ ಆ ಕಾಲದ ಕೊನೆಯ ವರ್ಷಗಳಲ್ಲಿ ಪರಿವರ್ತಿತವಾಯಿತು. ಪ್ರ.ಶ.ಪೂ. 450 ರಿಂದ 323 ರ ವರೆಗಿನ ಕಾಲವನ್ನು ಪೆರಿಕ್ಲೀಸ್ ಯುಗವೆಂದೂ ಮಹಾಯುಗವೆಂದೂ ಕರೆಯಲಾಗಿದೆ.ಈ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಸರ್ವತೋಮುಖ ಪ್ರಗತಿ ಸಾಧಿಸಿತು.ಬೃಹತ್ತಾದ ಪೌರಕಟ್ಟಡಗಳ ನಿರ್ಮಾಣವಾದ್ದೂ ಗ್ರೀಕ್ ದೇತೆಗಳ ದೊಡ್ಡ ವಿಗ್ರಹಗಳನ್ನು ಕೆತ್ತಿದ್ದೂ ಈ ಕಾಲದಲ್ಲಿಯೇ. ವರ್ಗೇಕರಿಸಲಾದ ವಿಗ್ರಹಗಳು, ಕುಳಿತ ಭಂಗಿಯ ವಿಗ್ರಹಗಳು, ಹಾರುವ ಆಕೃತಿಗಳ, ನಿಂತಿರುವ ಪುರುಷ ಮತ್ತು ಸ್ತ್ರೀ ವಿಗ್ರಹಗಳ ಎಂದು ಆರ್ಷೇಯ ಕಾಲದ ವಿಗ್ರಹಗಳನ್ನು ನಾಲ್ಕು ತೆರನಾಗಿ ವಿಂಗಡಿಸಬಹುದು. ಚಿತ್ರ 4ರಲ್ಲಿ ತೋರುವ, ಅಮೃತಶಿಲೆಯಲ್ಲಿ ಕೆತ್ತಿದ, ನಿಂದ ಸ್ತ್ರೀ ವಿಗ್ರಹವನ್ನು ನೋಡಿದಾಗ ಅದು ಈಜಿಪ್ಪ್ ವಿಗ್ರಹಗಳಿಂದ ಪ್ರಭಾವಿತವಾದುದೆಂಬುದು ಸ್ಪಷ್ಟವಾಗುತ್ತದೆ. ಇದನ್ನು ನಿಕಾಂದ್ರ ಎಂಬವನ್ನು ಆರ್ಟೆಮಿಸನ ಗೌರವಾರ್ಥವಾಗಿ ಮುಡಿಪಿಟ್ಟನೆಂದು ಅಲ್ಲಿಯ ಶಾಸನವೊಂದು ತಿಳಿಸುತ್ತದೆ. ಈ ಹೆಣ್ಣಿನ ತಲೆಯ ಕೊದಲು ಎರಡು ಭಾಗಗಳಾಗಿ ಎರಡು ಭುಜಗಳ ಮುಂದೆಯೂ ಚೆಲ್ಲಾಡಿದೆ. ಕುತ್ತಿಗೆ ದೃಢವಾಗುವಂತೆ ಈಜಿಪ್ಪ್ ವಿಗ್ರಹಗಳ ಶಿಲ್ಪದಲ್ಲಿ ಅನುಸರಿಸುತ್ತಿದ್ದ ತಂತ್ರವಿದು. ಅಂತೆಯೇ ಇದೂ ಮುಮ್ಮುಖವಾಗಿದೆ. ಅನಂತರದ ಕಾಲದ ಒಂದು ವಿಗ್ರಹ ವರ್ತುಲಾಕೃತಿಯಲ್ಲಿದೆ. ಮರದಲ್ಲಿ ಕೆತ್ತಿದ ವಿಗ್ರಹಗಳಂತೆ ಪಡೆಸಾಗಿ ಕಾಣುವ ಈ ವಿಗ್ರಹದ ಕೆಳಭಾಗ ಮರದ ಕಾಂಡದಂತಿದೆ. ಕಾಲಿನ ಬೆರಳುಗಳನ್ನು ಮಾತ್ರ ಬಿಡಿಸಲಾಗಿದೆ. ಸಾಂಪ್ರದಾಯಿಕವಾಗಿ ಬಂದ ಅಮೂರ್ತ ಶೈಲಿಯ ಪ್ರತೀಕವಿದು. ಈ ಕಾಲದಲ್ಲಿ ಈಜಿಪ್ಪ್ ಶೈಲಿಯ ಅನುಕರಣೆಯಾಯಿತೆನ್ನಲು ಇನ್ನೊಂದು ಆಧಾರವೆಂದರೆ, ಅಪೋಲೊ ದೇವತೆಗಳದೆಂದು ಮೊದಲು ಪರಿಗಣಿತವಾಗಿದ್ದು ಅನಂತರ ನವಯುವಕರದೆಂದು ನಾಮಕರಣ ಮಾಡಲಾದ ವಿಗ್ರಹಗಳಲ್ಲಿಯ ಮುಂಚಾಚಿರುವ (ಚಿತ್ರ 6) ಎಡಗಾಲುಗಳು. ಆದರೂ ಗ್ರೀಕ್ ವಿಗ್ರಹಗಳಲ್ಲಿ ಎದ್ದು ಕಾಣುವ ವಿಶಿಷ್ಟತೆಯೆಂದರೆ ನಗ್ನತೆ. ಒಲಂಪಿಕ್ ಸ್ಪರ್ಧೆಯ (ನೋಡಿ- ಒಲಂಪಿಕ್ ಕ್ರೀಡಗಳು) ಸ್ಪರ್ಧಿಗಳಿಗೆ ಉಡುಗೆ ಚಲನೆಗೆ ಅಡ್ಡಿಯಾಗುವುದೆಂಬ ಭಾವನೆಯಿತ್ತು. ಇದೇ ಭಾವನ ಕಲೆಯಲ್ಲೂ ವ್ಯಕ್ತವಾಗಿದೆ. ತೃಪ್ತ ಮನೋಭಾವವನ್ನು ಚಿತ್ರಿಸಲು ನಗ್ನತೆ ಹೆಚ್ಚು ಪೋಷಕ. ದೇಹದ ಎಲ್ಲ ಅಂಗಗಗಳಲ್ಲಿ, ಮಾಂಸಖಂಡಗಳಲ್ಲಿ ಚಲನೆಯನ್ನು ಮೂಡಿಸುವುದು ನಗ್ನೆತೆಯ ಚಿತ್ರಣದಿಂದ ಹೆಚ್ಚು ಸಾಧ್ಯ ದೇಹವನ್ನು ವಸ್ತ್ರಗಳಿಂದ ಮುಚಿದಾಗ, ಇವನ್ನು ಮೂಡಿಸುವ ಅವಕಾಶ ಬಹಳವಾಗಿ ಮುಖಕ್ಕೆ ಸೀಮಿತವಾಗಿರುತ್ತದೆ. ನಗ್ನತೆಗೂ ಶೃಂಗಾರಕ್ಕೂ ಸಂಬಂಧವಿದ್ದರೂ ಶೃಗಾರ ಪ್ರಣಯವನ್ನು ಪ್ರಚೋದಿಸಲು ಮಾತ್ರವೇ ನಗ್ನತೆಯನ್ನು ಮಾಧ್ಯಮವಾಗಿ ಅವರು ಬಳಸಲಿಲ್ಲ. ಪರ್ಷಿಯನ್ ಕದನ ಪ್ರ.ಶ.ಪೂ. ಸು. 480 ರ ವೇಳೆಗೆ ಮುಗಿದಿತ್ತು. ಈ ಕದನಗಳು ಗ್ರೀಕರನ್ನು ವಿನಾಶಕ್ಕೆ ಒಯ್ಯಬಹುದಿತ್ತು. ಆದರೆ ಗ್ರೀಕರ ಆದರ್ಶವಾದ ಅವರನ್ನು ಅಳಿವಿನ ವಿರುದ್ಧ ಹೋರಾಡಾಲು ಪ್ರೇರೇಪಿಸಿತ್ತು. ಇದರ ಪರಿಣಾಮವಾಗಿ ಅವರಿಗೆ ವಿಜಯ ಲಭ್ಯವಾಯಿತು. ಜೀವನದಲ್ಲಿ ಅವರು ಹೊಸ ಮೌಲ್ಯಗಳನ್ನು ಕಾಣುವಂತೆ ಮಾಡಿತು. ಶತ್ರುವಿನ ದಾಳಿಗೆ ಸಿಕ್ಕಿ ಹಾಳಾಗಿದ್ದ ನಗರಗಳಲ್ಲಿ ನವ ಚೇತನ ಉಕ್ಕಿ ಹರಿಯಿತು. ಗ್ರೀಕ್ ಕಲೆ ಪೂರ್ಣವಾಗಿ ಅರಳಿತು. ಈ ನವಯುಗದ ಆರಂಭಕಾಲದ ಸೇರಿದ್ದು ಆಫ್ರೊಡೈಟಿ ದೇವತೆಯ ಜನನವನ್ನು ಸೂಚಿಸುವ ವಿಗ್ರಹ ಫಲಕ. ಈ ದೇವತೆ ಈಜಿಯನ್ ಸಮುದ್ರದ ನೊರೆಗಳಲ್ಲಿ ನವಯುವತಿಯಾಗಿ ಜನಿಸಿದಳೆಂಬ ಪ್ರಚಲಿತ ಕಥೆಯನ್ನು ಇಲ್ಲಿ ರೊಪಿಸಲಾಗಿದೆ. ಚಿತ್ರ