ಈ ಪುಟವನ್ನು ಪರಿಶೀಲಿಸಲಾಗಿದೆ

೮೪೪

  ಧಾರ್ಮಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಸೂಕ್ಷ್ಮ್ವವಾದ ನೈತಿಕ ವಿಷಯಗಳನ್ನೋ ಆಧ್ಯಾತ್ಮಿಕ ತತ್ತ್ವಗಳನ್ನೋ ತನ್ನ ಕೃತಿಗಳಲ್ಲಿ ಅಳವಡಿಸುವ ಸಾಹಸವನ್ನು ಈತ ಮಾಡಿದ್ದಾನೆ. ಗ್ರೀಕ್ ದುರಂತನಾಟಕಗಳಲ್ಲಿ ಕಾಣುವ ಪ್ರಧಾನಾಂಶವನ್ನು, ಹಿಂಸಾಚಾರದಿಂದ ಹೊರಹೊಮ್ಮುವ ವಿಧಿಪ್ರಾಬಲ್ಯವನ್ನು ಈತನ ಕೆಲವು ಕಾದಂಬರಿಗಳಲ್ಲಿ ಕಾಣುತ್ತೇವೆ.
  ಈತ ನಿಷ್ಠಾವಂತ ರೋಮನ್ ಕೆಥೊಲಿಕ್ ಸಂಪ್ರದಾಯದವ. ದೈವ ನಿಯಮದಂತೆ ಎಲ್ಲವೂ ನಡೆಯುತ್ತದೆ; ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಪಾಪಿಗೂ ದೈವ ರಕ್ಷಣೆಯಿದೆ ಎಂಬ ತತ್ವಕ್ಕೆ ಅಂಟಿದವ. ಆದ್ದರಿಂದಲೆ ದಿ ಪವರ್ ಅಂಡ್ ದಿ ಗ್ಲೋರಿಯಲ್ಲಿ ಕುಡುಕನೂ ವ್ಯಭಿಚಾರಿಯೂ ಆದ ಪಾದ್ರಿ ಪಾಪದಿಂದ ಪಾಪಕ್ಕೆ ಜಿಗಿಯುತ್ತ ಹೋಗುತ್ತಿದ್ದರೂ ಅಂತಿಮವಾಗಿ ಹುತಾತ್ಮರ ದಿವ್ಯವಲಯದಲ್ಲಿ ವಿರಾಜಿಸುತ್ತಾನೆ; ದಿ ಹಾರ್ಟ್ ಆಫ್ ದಿ ಮ್ಯಾಟರ್ ಕಾದಂಬರಿಯಲ್ಲಿ ತನ್ನ ಸರ್ವಸ್ವವನ್ನೂ ಕಳೆದುಕೊಂಡ ಸ್ಕೋಬಿ ಕೊನೆಯ ಗಳಿಗೆಯಲ್ಲಿ ರಕ್ಷಣೆ ಪಡೆಯುತ್ತಾನೆ. 
  ಈತನ ಕಾದಂಬರಿಗಳಲ್ಲಿ ಬರುವ ಘಟನಾವಳಿಗಳು ಮತ್ತು ಪಾತ್ರಗಳು ಒಂದು ವಿಶಿಷ್ಟವಾದ ಇಂಗ್ಲಿಷ್ ಸಂಪ್ರದಾಯ ಹಾಗೂ ವಿದೇಶಗಳ ಹಿನ್ನೆಲೆಯನ್ನು ಪಡೆದಿವೆ. ಮೆಕ್ಸಿಕೋದಲ್ಲಿಯ ಮತೀಯ ಕಿರುಕುಳಗಳು, ಇಂಡೋ-ಚೀನದಲ್ಲಿಯ ಯುದ್ಧ, ಆಫ್ರಿಕದ ಕುಷ್ಠರೋಗಪೀಡಿತ ಪ್ರದೇಶಗಳು, ಹೈತಿಯಲ್ಲಿನ ರಾಜಕೀಯ ದಬ್ಬಾಳಿಕೆ - ಇವು ಕೆಲವು ಕಾದಂಬರಿಗಳಲ್ಲಿ ಹಿನ್ನೆಲೆಯಾಗಿ ಬಂದು ಕಥೆಗಳಿಗೆ ಅವರ್ಣನೀಯ ಸೌಂದರ್ಯವನ್ನು ನೀಡುತ್ತವೆ. ಕಥಾನಾಯಕನ ಕಷ್ಟನಷ್ಟ, ಧೈರ್ಯಸ್ಥೈರ್ಯಗಳು, ಜನರ ಡಂಭಾಚಾರ, ನೀಚತನ, ಸ್ವಾರ್ಥ ಜನರಿಂದ ಸುತ್ತುವರಿಯಲ್ಪಟ್ಟ ಮಾನವ ಹೇಗೆ ಜೀವನದಲ್ಲಿ ಹೋರಾಡಿ, ಬದುಕಿ ಬಾಳುತ್ತನೆ ಎಂಬ ವಿಚಾರಗಳು ಈತನ ಕಾದಂಬರಿಗಳಲ್ಲಿ ವಸ್ತುನಿಷ್ಠವಾಗಿ ಮೂಡಿವೆ. 
  ಭೌಗೋಳಿಕ ಹಿನ್ನೆಲೆ ಈತನ ರಚನಾತಂತ್ರದ ಒಂದು ವಿಶಿಷ್ಟ ಅಂಶವಾದರೆ ಮಾರ್ಮಿಕ ಸಂಭಾಷಣೆ, ಪ್ರತಿಮೆಗಳು ಮತ್ತು ಸಾಂಕೇತಿಕ ಶಬ್ದಗಳ ಬಳಕೆ ಈತನ ತಂತ್ರದ ಮತ್ತೊಂದು ಅಂಶ. ಕೆಲವು ಕಡೆ ಬರುವ ರೂಪಕಾಲಂಕಾರ ಕಾದಂಬರಿಗಳಿಗೆ ಸ್ಥಳೀಯ ಬಣ್ಣವನ್ನು ನೀಡುವುದರ ಜೊತೆಗೆ ಕೇಂದ್ರತತ್ವಕ್ಕೆ ಬಲವನ್ನೂ ನೀಡುತ್ತದೆ. ಈತನ ಕಾದಂಬರಿಗಳೆಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿದರೆ ಮೂರು ದಶಕಗಳ (1930-60) ಸಾಮಾಜಿಕ ಜೀವನ ಅಂತರಷ್ಟ್ರೀಯ ಪರಿಸ್ಥಿತಿ, ರಾಜಕೀಯ ಬದಲಾವಣೆಗಳು-ಇವು ಓದುಗರ ಕಣ್ಣಮುಂದೆ ನಿಲ್ಲುತ್ತವೆ.
  ಈತನ ಕಾದಂಬರಿಗಳಲ್ಲಿ ಬರುವ ಕೆಲವು ಪದಗಳು ಸಾಂಕೇತಿಕ ಅರ್ಥವನ್ನು ಕೊಡುತ್ತವೆಂದು ವಿಮರ್ಶಕರ ಅಭಿಪ್ರಾಯ. ಉದಾ: ಬ್ರೈಟನ್ ರಾಕ್ (1938) ಕಾದಂಬರಿಯಲ್ಲಿ ಲಂಚಕೋರ ವಕೀಲ ಡ್ರೂಯಿಟ್ಟಿನ ಮಾತುಗಳು ಆ ಕಾಲದ ಒಟ್ಟು ಜೀವನದ ಸ್ಥಿತಿ, ಬ್ರೈಟನ್ ಊರಿನ ಪರಿಸ್ಥಿತಿ, ಕಾದಂಬರಿಯ ಮುಖ್ಯ ವ್ಯಕ್ತಿಯಾದ ಪಿಂಕಿಯ ಅವಸ್ಥೆಯ ಚಿತ್ರವನ್ನು ಕಣ್ಣಿನ ಮುಂದೆ ತಂದು ನಿಲ್ಲಿಸುತ್ತವೆ. ಗ್ರೀನನ ಪ್ರಸಿದ್ಧ ಕಾದಂಬರಿ ದಿ ಹಾರ್ಟ್ ಆಫ್ ದಿ ಮ್ಯಾಟರ್ ನ ಕಥೆ ಪಶ್ಚಿಮ ಆಫ್ರಿಕದ ಬ್ರಿಟಿಷ್ ನೆಲಸುನಾಡಿನಲ್ಲಿ ನಡೆಯುತ್ತದೆ. ಇದು ಈತನ ಅತ್ಯುತ್ತಮ ಕಾದಂಬರಿ. ಈ ಕಾದಂಬರಿ ಈತನ ರಚನಾಕೌಶಲ, ಪಾತ್ರಸೃಷ್ಟಿ, ಮೋಹಕಗದ್ಯ ಶೈಲಿ-ಎಲ್ಲಕ್ಕು ಉತ್ಕೃಷ್ಟ ನಿದರ್ಶನವಾಗಿದೆ. ಈ ಕೃತಿಗೆ ಈತ 1948ರಲ್ಲಿ ಜೇಮ್ ಟೈಟ್ ಬ್ಲಾಕ್ ಮೆಮೊರಿಯಲ್ ಪ್ರಶಸ್ತಿಯನ್ನು ಪಡೆದ. 
  ಈತ ಕಾದಂಬರಿಗಳನ್ನಲ್ಲದೆ ದಿ ಲಿವಿಂಗ್ ರೂಮ್ (1953) ಎಂಬ ಜನಪ್ರಿಯ ನಾಟಕವನ್ನೂ ರಚಿಸಿದ್ದಾನೆ. ನಾರ್ವೇಜಿಯನ್ ನಾಟಕಕಾರ ಹೆನ್ರಿಕ್ ಇಬ್ಸೆನನ ತಂತ್ರವನ್ನು ಪ್ರಯೋಗಿಸಿ ಬರೆದ ಈ ನಾಟಕ ಬಹು ಜನರ ಮೆಚ್ಚುಗೆ ಪಡೆದಿದೆ. ದಿ ಪಾಟಿಂಗ್ ಷೆಡ್ (1957), ದಿ ಕಾಂಪ್ಲೇಸೆಂಟ್ ಲವರ್ (1959) ಎಂಬ ಮತ್ತೆರಡು ನಾಟಕಗಳಿಂದಲೂ ಈತನ ಕೀರ್ತಿ ಹೆಚ್ಚಿದೆ.
  ಮೇ ವಿ ಬಾರೋ ಯುವರ್ ಹಸ್ಬೆಂಡ್? (1967) ಮತ್ತು ದಿ ಲಾಸ್ಟ ವರ್ಡ್ (1990) ಇವು ಈತನ ಕಿರುಕಥಾ ಸಂಕಲನಗಳು. ಎ ಸಾರ್ಟ್ ಆಫ್ ಲೈಫ್ (1971) ಹಾಗೂ ವೇಸ್ ಆಫ್ ಎಸ್ಕೇಪ್ (1980) ಎಂಬ ಶೀರ್ಷಿಕೆಗಳಡಿಯಲ್ಲಿ ಇವನ ಆತ್ಮಚರಿತ್ರೆ ಪ್ರಕಟವಾಗಿದೆ. ನೋ ಮ್ಯಾನ್ ಲ್ಯಾಂಡ್ ಎಂಬ ಈತನ ಮತ್ತೊಂದು ಕೃತಿ 2005ರಲ್ಲಿ ಪ್ರಕಟಗೊಂಡಿತು. 1986ರಲ್ಲಿ ಈತ ಬ್ರಿಟನಿನ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪಡೆದ. ಈತನ ಅನೇಕ ಕೃತಿಗಳು ಸಿನೆಮಾ ಹಾಗೂ ನಾಟಕಗಳಿಗೆ ವಸ್ತುವಾಗಿದೆ.
  ಮಕ್ಕಳು ಕಥೆಗಳನ್ನೂ ಪ್ರವಾಸಿ ಸಾಹಿತ್ಯವನ್ನೂ ಕೆಲವು ಪ್ರಭಂಧಗಳನ್ನೂ ರಚಿಸಿದ ಗ್ರೀನ್ ಕೆಲವು ಕಾಲ ಪತ್ರಿಕೋದ್ಯಮಿಯಾಗಿಯೂ ಇದ್ದ.
  ಗ್ರಹಾಂ ಗ್ರೀನನ ನೆನಪಿನಲ್ಲಿ,  ಗ್ರಹಾಂ ಗ್ರೀನ್ ಬರ್ತ್ ಪ್ಲೇಸ್ ಟ್ರಸ್ಟ್ ಎಂಬ ಸಂಘ ಪ್ರತಿವರ್ಷ ಇವನ ಜನ್ಮದಿನದ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಗ್ರಹಾಂ ಗ್ರೀನ್ ಅಂತಾರಾಷ್ಟ್ರೀಯ ಹಬ್ಬವನ್ನು (ಗ್ರಹಾಂ ಗ್ರೀನ್ ಇಂಟರ್ ನ್ಯಾಷನಲ್ ಫೆಸ್ಟಿವಲ್) ಆಚರಿಸುತ್ತದೆ.
  20ನೆಯ ಶತಮಾನದ ಪ್ರಭಾವಶಾಲಿ ಸಾಹಿತಿಗಳಲ್ಲಿ ಈತನ ಸ್ಥಾನ ವಿಶಿಷ್ಟವಾದುದು.
  
  ಗ್ರೀನನ ಪ್ರಮೇಯ: ಯಾವುದೇ ತಲಕ್ಕೆ (ಸರ್ಫೇಸ್) ಅನ್ವಯವಾಗುವ ಸ್ಟೋಕ್ಸನ ಪ್ರಮೇಯವನ್ನು (ನೋಡಿ) ಸಮತಲಕ್ಕೆ (ಪ್ಲೇನ್) ಅನ್ವಯಿಸಿದಾಗ ದೊರೆಯುವ ವಿಶೇಷ ರೂಪ. ಇದನ್ನು ಆವಿಷ್ಕರಿಸಿದವ ಜಾರ್ಜ್ ಗ್ರೀನ್ (ನೋಡಿ-ಗ್ರೀನ್, ಜಾರ್ಜ್). ಆದ್ದರಿಂದ ಆತನ ಹೆಸರಿನಿಂದಲೇ ಪ್ರಸಿದ್ದವಾಗಿದೆ. ಇದರ ನಿರೂಪಣೆ ಹೀಗಿದೆ. 

ಗ್ರೀನನ ಪ್ರಮೇಯ 1:L ಎಂಬ ಸಂವೃತ ಎಲ್ಲೆಯಿಂದ (ಕ್ಲೋಸ್ಡ್ ಕಾಂಟೂರ್) ಬಂಧಿತವಾದ ಒಂದು ಸಮತಲ ಉಂಟೆಂದು ಭಾವಿಸೋಣ. P(x1,x2),Q(x1,x2) ಎಂಬ ಎರಡು ಉತ್ಪನ್ನಗಳೂ P/Vx2,