ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗ್ರೇಯಂ,ರಾಬರ್ಟ್-ಗ್ರೇವಿಲ್,ಚಾರ್ಲ್ಸ್ ಕ್ಯಾವೆಂಡಿಷ್ ಫಲ್ಕ್

ಅಳೆದು ಗ್ರೇಯನಮನ ಅನಿಲ ವಿಸರಣ ನಿಯಮ ಎಂದು ಈಗ ಪ್ರಸಿದ್ದವಾಗಿರುವ ನಿಯಮವನ್ನು ಕಂಡುಹಿಡಿದ .ಕಲಿಲ ರಸಾಯನ ಇಂದು ಬಳಕೆಯಲ್ಲಿರುವ,ಮುಖ್ಯವಾಗಿ ಪಾರಿಭಾಷಿಕಾ ಪದಗಳಲ್ಲಿ ಈತ ಸೃಷ್ಟಿಸಿದಂಥವೇ. ಸ್ಕಾಟ್ಲೆಂಡಿನ ಗ್ಯಾಸ್ಗೋ ನಗರದಲ್ಲಿ ೧೮೦೫ರ ಡಿಸೆಂಬರ್ ೨೦ ರಮ್ದು ಗ್ರೇಯಂ ಜನಿಸಿದ.ತಂದೆ ಐಶ್ವರ್ಯವಂತನಾಗಿದ್ದ ಒಬ್ಬ ವಾಣಿಜ್ಯೋದ್ಯಮಿ.ತಮ್ಮ ಮಗ ಇಗರ್ಜಿಯಲ್ಲಿ ಪಾದ್ರಿಯಾಗಬೇಕೆಂದು ಆತನ ಆಶಯ .ಆದರೆ ಮಗ ಅಭ್ಯಾಸ ಮಾಡುವುದಾಗಿ ಹಟ ಹಿಡುದುದರಿಂದ ತಂದೆ ಆರ್ಥಿಕ ನೆರವು ನೀಡಲು ನಿರಾಕರಿಸಿದ.ಗ್ರೇಯಂ ಎದೆಗುಂದಲಿಲ್ಲ.ಉಪಾಧ್ಯಾಯನಾಗಿ ಮತ್ತು ಲೇಖಕನಾಗಿ ಜೀವನ ಸಾಗಿಸಿಕೊಂಡು ತನ್ನ ಅಧ್ಯಯನವನ್ನು ಮುಂದುವರಿಸಿದ.ಈಗ ರಾಯಲ್ ಟೆಕ್ನಿಕಲ್ ಕಾಲೇಜ್ ಎಂಬ ಹೆಸರು ಪಡೆದಿರುವ ಸಂಸ್ಥೆಯಲ್ಲಿ ಥಾಮಸ್ ಥಾಮ್ಸನ್ ಎಂಬಾತನಲ್ಲಿಯೂ ಅನಂತರ ಎಡಿನ್ಬರಾದಲ್ಲಿ ಥಾಮಸ್ ಹೋಪ್ ಎಂಬಾತನಲ್ಲಿಯೂ ವ್ಯಾಸಂಗ ಮಾಡಿ ಗ್ಲಾಸ್ಕೋವಿಶ್ವವಿದ್ಯಾಲಯದ ಪದವೀಧರನಾದ೧೮೨೬.ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಎಡಿನ್ ಬರಾದಲ್ಲಿರುವಾಅಂಡರ್ಸನ್ ಇನ್ಸ್ಟಿಟ್ಯೂಷನಿನಲ್ಲಿ ,ರಸಾಯನ ಪ್ರಾಧ್ಯಾಪಕನಾದ ೧೮೩೦.ಅಲ್ಲಿ ಏಳು ವರ್ಷ ಕೆಲಸ ಮಾಡಿ ಲಂಡನಿಗೆ ತೆರಳಿ ೧೮೩೭ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ.ತರುವಾಯ ನ್ಯೂಟನ್ ಮತ್ತು ಸರ್ ಜಾನ್ ಹರ್ಷೆಲ್ ರವರಂತೆ ಟಂಕಸಾಲೆಯ ಮುಖ್ಯಾಧಿಕಾರಿಯಾದ೧೮೫೫.೧೮೬೯ರ ಸೆಪ್ಟಂಬರ್ ೧೧ರಂದು ನಿಧನ ಹೊಂದುವವರೆಗೂ ಅದೇ ಹುದ್ದೆಯಲ್ಲೇ ಮುಂದುವರಿದ . ಗ್ರೇಯಮನ ಆಸಕ್ತಿಯನ್ನು ಕೆರಳಿಸಿದ ಮೊಟ್ಟಮೊದಲ ವೈ ವಿಷಯವೆಂದರೆ ಅನಿಲಗಳ ವಿಸರಣಶೀಲತೆ (ಅಂದರೆ ವ್ಯಾಪನ ಶೀಲತೆ ).ಒಂದು ಪಾತ್ರೆಯ ಕೆಲಗಿನ ಅರ್ಧ ಭಾಗದಲ್ಲಿ ಆಕ್ಸಿಜನನ್ನೂ ಮೇಲಿನ ಅರ್ಧ ಭಾಗದಲ್ಲಿ ಹೈಡ್ರೊಜನನ್ನೂ (ಜಲಜನಕ)ಇಟ್ಟು ಕೆಲಕಾಲ ಬಿಟ್ಟರೆ ಎರಡೂ ಅನಿಲಗಳೂ ಚೆನ್ನಾಗಿ ಬೆರೆತು ಒಂದೇ ಸಮವಾಗಿ ಪಾತ್ರೆಯಲೆಲ್ಲಾ ವ್ಯಾಪಿಸುತ್ತದೆ .ಆಕ್ಸಿಜನ್ ಭಾರವಾದ ಅನಿಲವಾದರೂ ಅದು ಕೆಳಗಡೆಯೇ ಉಳಿಯದೆ ಸಮವಾಗಿ ಪಾತ್ರೆಯಳೆಲ್ಲಾ ಹರಡಿ ಹೋಗುವುದಕ್ಕೂ ಅದೇ ರೀತಿ ಹಗುರವಾದ ಹೈಡ್ರೊಜನ್ ಪಾತ್ರೆಯಳೆಲ್ಲಾ ಒಂದೇ ಸಮವಾಗಿ ಹರಡಿಕೊಲ್ಲುವುದಕ್ಕೂ ಅನಿಲ ಚಲನ ಸಿದ್ಧಾಂತ ವಿವರಣೆಯನ್ನೂ ನೀಡಬಲ್ಲದು.ಆದರೆ ಗ್ರೇಯಮ್ ಅನಿಲಗಳ ವಿಸರಣಶೀಲತೆಯ ಬಗ್ಗೆ ಸಂಶೋಧನೆ ಕೈಗೊಂಡಾಗ ಅನಿಲ ಚಲನ ಸಿದ್ಧಾಂತ ಇನ್ನೂ ಜನ್ಮ ತಾಳಿರಲಿಲ್ಲ .ಅನಿಲಗಳು ಯಾವ ದರದಲ್ಲಿ ವಿಸರಿಸುವುವೆಂಬುದನ್ನು ಪರೀಕ್ಷಿಸುವುದಕ್ಕಾಗಿ ಗ್ರೇಯಮ್ ಪ್ಯಾರೀಸ್ ಪ್ಲಾಸ್ಟರಿನ ಬೆಣೆಯ ಮೂಲಕ ,ಸಪುರವಾದ ನಾಳಗಳ ಮೂಲಕ,ಪ್ಲಾಸ್ಟಿನಮ್ ತಗಡಿನಲ್ಲಿ ಕೊರೆದ ಒಂದು ಚಿಕ್ಕ ರಂದ್ರದ ಮೂಲಕ ಅನಿಲಗಳು ಪಸರಿಸುವುದನ್ನು ಅಧ್ಯಯನ ಮಾಡಿ ಅನಿಲಗಲ ಈ ವಿಸರಣೆಯ ದರ ಅವುಗಲ ಸಾಂದ್ರತೆಯ ವರ್ಗಮೂಲಕ್ಕೆ ವ್ಯಸ್ತ ಅನುಪಾತದಲ್ಲಿರುವುದೆಂಬ ನಿಯಮವನ್ನು ಕಂಡುಹಿಡಿದ.ಇದೇ ಗ್ರೇಯಮನ ಅನಿಲ ವಿಸರಣೆಯ ನಿಯಮ (ಗ್ರೇಯಮ್ಸ್ ಲಾ ಆಫ್ ಡಿಫ಼್ಯೂಷನ್).ತರುವಾಯ ಈತ ದ್ರಾವ್ಯ ಪದಾರ್ಥಗಳ ಅಣುಗಳು ಅಯಾನುಗಳೂ ದ್ರಾವನಗಳಲ್ಲಿ ವ್ಯಾಪಿಸಿಕೊಳ್ಳುವ ರೀತಿಯನ್ನೂ ಅಧ್ಯಯನ ಮಾಡತೊಡಗಿದ .ನೀರು ತುಂಬಿದ ಸಿಲಿಂಡರಿನ ತಳದಲ್ಲಿ ತಾಮ್ರದ ಸಲ್ಫೇಟಿನ ಒಂದು ಹರಳನ್ನು ಇಟ್ಟರೆ ಅದರ ಆಯಾನುಗಳೂ ಕಾಲಕ್ರಮದಲ್ಲಿ ಸಿಲಿಂಡರಿನ ಮೇಲ್ಭಾಗದಲ್ಲೆಲ್ಲಾ ಹರಡಿಕೊಂಡು ಬಣ್ಣ ಒಂದೇ ಸಮವಾಗಿರುವ ಒಂದು ದ್ರಾವಣ ಫಲಿಸುತ್ತದೆ.ಇಲ್ಲಿ ಸಹ ಕೆಲವು ಪದಾರ್ಥಗಳು ಇನ್ನು ಕೆಲವಕ್ಕಿಂತ ಬೇಗನೇ ವ್ಯಾಪಿಸುವುವೆಂಬುದು ಗ್ರೇಯಮನ ಗಮನಕ್ಕೆ ಬಂತು .ಈ ಪ್ರಯೂಗಗಳಲ್ಲಿ ತೊಡಗಿದ್ದಾಗ ಇವನು ಒಂದು ಸ್ವಾರಸ್ಯಕರ ವಿಷಯವನ್ನು ಕಂಡ ;ದ್ರಾವ್ಯ ಪಧಾರ್ಥಗಳು ವ್ಯಾಪಿಸಿಕೊಳ್ಳುವಾಗ ಅವಕ್ಕೆ ಅಡಚಣೆ ಮಾಡುವಂತೆ ಒಂದು ಪಾರ್ಚ್ಮೆಂಟ್ ಹಾಳೆಯನ್ನಿಟ್ಟರೆ ಸ್ವಭಾವತಃಬೇಗ ವ್ಯಾಪಿಸಿಕೊಳ್ಳಬಲ್ಲ ವಿವಿಧ ಲವಣಗಳು ,ಸಕ್ಕರೆ ಮುಂತಾದವು ಆ ಹಾಳೆಯನ್ನು ತೂರಿಕೊಂಡು ಹೋಗುವುದನ್ನುನಿಧಾನವಾಗಿ ವ್ಯಾಪಿಸುವ ಅಂಟು ,ಜಿಲೆಟಿನ್ ಮುಂತಾದ ಪದಾರ್ಥಗಳು ಅದನ್ನು ತೂರಿಕೊಂಡು ಹೋಗಲಾರದೆ ಅದರ ಒಂದು ಪಕ್ಕದಲ್ಲೇ ಉಳಿದುಬಿಡುವುದನ್ನೂ ಗಮನಿಸಿದ .ಸಮವಾಗಿ ಪಾತ್ರೆಯಲೆಲ್ಲಾ ವ್ಯಾಪಿಸುತ್ತದೆ .ಆಕ್ಸಿಜನ್ ಭಾರವಾದ ಅನಿಲವಾದರೂ.ಅಳೆದು ಗ್ರೇಯನಮನ ಅನಿಲ ವಿಸರಣ ನಿಯಮ ಎಂದು ಈಗ ಪ್ರಸಿದ್ದವಾಗಿರುವ ನಿಯಮವನ್ನು ಕಂಡುಹಿಡಿದ .ಕಲಿಲ ರಸಾಯನ ಇಂದು ಬಳಕೆಯಲ್ಲಿರುವ,ಮುಖ್ಯವಾಗಿ ಪಾರಿಭಾಷಿಕಾ ಪದಗಳಲ್ಲಿ ಈತ ಸೃಷ್ಟಿಸಿದಂಥವೇ. ಸ್ಕಾಟ್ಲೆಂಡಿನ ಗ್ಯಾಸ್ಗೋ ನಗರದಲ್ಲಿ ೧೮೦೫ರ ಡಿಸೆಂಬರ್ ೨೦ ರಮ್ದು ಗ್ರೇಯಂ ಜನಿಸಿದ.ತಂದೆ ಐಶ್ವರ್ಯವಂತನಾಗಿದ್ದ ಒಬ್ಬ ವಾಣಿಜ್ಯೋದ್ಯಮಿ.ತಮ್ಮ ಮಗ ಇಗರ್ಜಿಯಲ್ಲಿ ಪಾದ್ರಿಯಾಗಬೇಕೆಂದು ಆತನ ಆಶಯ.ಟೆಕ್ನಿಕಲ್ ಕಾಲೇಜ್ ಎಂಬ ಹೆಸರು ಪಡೆದಿರುವ ಸಂಸ್ಥೆಯಲ್ಲಿ ಥಾಮಸ್ ಥಾಮ್ಸನ್ ಎಂಬಾತನಲ್ಲಿಯೂ ಅನಂತರ ಎಡಿನ್ಬರಾದಲ್ಲಿ ಥಾಮಸ್ ಹೋಪ್ ಎಂಬಾತನಲ್ಲಿಯೂ ವ್ಯಾಸಂಗ ಮಾಡಿ ಗ್ಲಾಸ್ಕೋವಿಶ್ವವಿದ್ಯಾಲಯದ ಪದವೀಧರನಾದ೧೮೨೬.ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಎಡಿನ್ ಬರಾದಲ್ಲಿರುವಾಅಂಡರ್ಸನ್ ಇನ್ಸ್ಟಿಟ್ಯೂಷನಿನಲ್ಲಿ ,ರಸಾಯನ ಪ್ರಾಧ್ಯಾಪಕನಾದ ೧೮೩೦.ಅಲ್ಲಿ ಏಳು ವರ್ಷ ಕೆಲಸ ಮಾಡಿ ಲಂಡನಿಗೆ ತೆರಳಿ ೧೮೩೭ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ.ತರುವಾಯ ನ್ಯೂಟನ್ ಮತ್ತು ಸರ್ ಜಾನ್ ಹರ್ಷೆಲ್ ರವರಂತೆ ಟಂಕಸಾಲೆಯ ಮುಖ್ಯಾಧಿಕಾರಿಯಾದ೧೮೫೫.೧೮೬೯ರ ಸೆಪ್ಟಂಬರ್ ೧೧ರಂದು ನಿಧನ ಹೊಂದುವವರೆಗೂ ಅದೇ ಹುದ್ದೆಯಲ್ಲೇ ಮುಂದುವರಿದ .