ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾರ್ಡಿಯನ್, ದಿ - ಗಾರ್ಡ್ನರ್ ಅಲೆ‍ಗ್ಸಾಂಡರ್

ಆಳ್ವಿಕೆಗೆ ಬಂದವನು ಮೈದಾಸ್. ಗಾರ್ಡಿಯಂನ ಪ್ರಜೆಗಳು ತಮ್ಮ ಅರಸರನ್ನು ಅನುಕ್ರಮವಾಗಿ ಈ ಎರಡು ಹೆಸರುಗಳಿಂದಲೇ ಕರೆದರು.

ಇಂದಿನ ಯಸ್ಸಿಹಾಯುಕ್ ನಗರಪ್ರದೇಶ ಹಿಂದಿನ ಗಾರ್ಡಿಯಂನ ನಿವೇಶನವಾಗಿತ್ತೆಂದು ೧೮೮೯ರಲ್ಲಿ ಕಾರ್ಟೆ ಸೋದರರು ಗುರುತಿಸಿದರಾದರೂ ಇತ್ತೀಚಿನವರೆಗೂ ಆ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ. ಆರ್. ಎಸ್. ಯಂಗ್ ಎಂಬ ಪುರಾತತ್ತ್ವ ಶೋಧಕ ೧೯೫೦ರಲ್ಲಿ ಇಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಿ ಈ ನಗರದ ಪ್ರಾಚೀನ ಇತಿಹಾಸದಲ್ಲಿ ಮೂರು ಘಟ್ಟಗಳನ್ನು ಯಶಸ್ವಿಯಾಗಿ ಗುರುತಿಸಿದ. ಫ್ರಿಜಿಯನ್ನರಿಗೂ ಹಿಂದೆ ಹಿಟ್ಟೈಟ್ ಜನಾಂಗ ಇಲ್ಲಿ ನೆಲಸಿದ್ದರ ಗುರುತುಗಳು ಕೆಳಗಿನ ಪದರದಲ್ಲಿ ದೊರಕಿದವು. ಮಧ್ಯದ ಪದರ ಫ್ರಿಜಿಯನ್ನರ ಕಾಲದ್ದು. ಪರ್ಷಿಯ ದೇಶ ಪ್ರಬಲವಾದಾಗ ಸೈರಸ್ ಈ ನಗರದ ಪ್ರಾಶಸ್ತ್ಯವನ್ನು ಅರಿತು ಕೊಂಡ. ಪರ್ಷಿಯನ್ ಸಾಮ್ರಾಜ್ಯದ ಕಾಲದಲ್ಲಿ ಗಾರ್ಡಿಯಂ ನಗರದ ಮೇಲೆ ದಾಳಿ ಮಾಡಿದ (೩೩೩). ಆ ಸಂದರ್ಭದಲ್ಲಿ ಆತ ಇಲ್ಲಿಯ ಗಾರ್ಡಿಯನ್ ಗಂಟನ್ನು ತನ್ನ ಕತ್ತಿಯನ್ನು ಕತ್ತರಿಸದನೆಂದು ಪ್ರತೀತಿ. ಪರ್ಶಿಯನ್ನರು ಮತ್ತು ಗ್ರೀಕರು ಈ ನಗರದೊಡನೆ ಹೊಂದಿದ್ದ ಸಂಪರ್ಕದ ಬಗ್ಗೆ ಊಹೆಗಳು ಗಾರ್ಡಿಯಂ ಪ್ರದೇಶದಲ್ಲಿ ಉತ್ಖನನ ಮಾಡಿದಾಗ ಮೇಲ್ಪದರದಲ್ಲಿ ದೊರೆತ ಅವಶೇಷಗಳಿಂದ ದೃಡಪಟ್ಟಿವೆ.

ಗಾರ್ಡಿಯನ್, ದಿ: ಲಂಡನ್ ಮತ್ತು ಮ್ಯಾಂಚೆಸ್ಟರ್ನಿಂದ ಪ್ರಕಟವಾಗುತ್ತಿರುವ ರಾಷ್ಟ್ರೀಯ ದಿನ ಪತ್ರಿಕೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. ಪ್ರಾರಂಭದಲ್ಲಿ ಇದು ಮ್ಯಾಂಚೆಸ್ಟರ್ ಗಾರ್ಡಿಯನ್ ಎಂಬ ಹೆಸರಿನಿಂದ ಸಾಪ್ತಾಯಿಕವಾಗಿ ಪ್ರಕಟವಾಗುತಿತ್ತು. ಸಂಸದೀಯ ಸುಧಾರಣೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ಕೆಲವು ಪ್ರಗತಿಶೀಲರು ೧೮೨೧ರಲ್ಲಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅವರು ಹೂಡಿದ ಬಂಡವಾಳ ಕೇವಲ ೪೦೦ ಪೌಂಡ್. ೧೮೫೫ರಿಂದ ದಿನಪತ್ರಿಕೆಯಾಯಿತು. ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಾಗ ಪತ್ರಿಕೆಯ ಹೆಸರನ್ನು ಗಾರ್ಡಿಯನ್ ದಿ ಎಂದಷ್ಟಕ್ಕೆ ಮೊಟಕುಗೊಳಿಸಲಾಯಿತು. ೧೯೭೧ರ ಮೇ ೫ರಂದು ಪತ್ರಿಕೆಯ ೧೫೦ನೆಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಈ ಪತ್ರಿಕೆ ಪ್ರಾರಂಭವಾದಂದಿನಿಂದಲೂ ನಿರ್ಭಯ ವಿಚಾರಧಾರೆಗೆ ಹೆಸರುವಾಸಿಯಾಗಿದೆ. ೧೯೩೬ರಲ್ಲಿ ಪತ್ರಿಕೆಯ ಪ್ರಭಾವಿ ಸಂಪಾದಕರಲ್ಲಿ ಒಬ್ಬರಾದ ಸಿ.ಪಿ.ಸ್ಕಾಟ್ ವಿಶ್ವಸ್ಥ ಮಂಡಲಿಯನ್ನು ರಚಿಸಿದ. ಪತ್ರಿಕೆಯ ಸ್ವಾಮ್ಯ ಆ ಮಂಡಲಿಗೆ ಸೇರಿದೆ. ಅದು ಸಂಪಾದಕ ವರ್ಗಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿರುವರಲ್ಲದೆ ಈ ಸತ್ಸಂಪ್ರದಾಯವನ್ನು ಸತತವಾಗಿ ಉಳಿಸಿಕೊಂಡು ಬಂದಿದ್ದಾರೆ. ಪತ್ರಿಕೆಯ ಸಂಪಾದಕೀಯಗಳು ಇದಕ್ಕೆ ಸಾಕ್ಷಿ.

ಗಾರ್ಡಿಯನ್ ನ್ಯೂಸ್ ಪೇಪರ್ಸ್ ಲಿಮಿಟೆಡ್ ಸಂಸ್ಠೆ ಈ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಈ ಸಂಸ್ಠೆಯ ಮಾತೃಸಂಸ್ಥೆ ಮ್ಯಾಂಚೆಸ್ಟರ್ ಗಾರ್ಡಿಯನ್ ಅಂಡ್ ಈವ್ನಿಂಗ್ ನ್ಯೂಸ್ ಲಿಮಿಟೆಡ್. ಸಿ.ಪಿ ಸ್ಕಾಟ್ ೨೫ನೆಯ ವಯಸ್ಸಿನಲ್ಲಿ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ೮೨ನೆಯ ವಯಸ್ಸಿನವರೆಗೂ ಸಂಪಾದಕರಾಗಿದ್ದರು. ಈಚಿನ ವರ್ಷಗಳಲ್ಲಿ ದಿ ಗಾರ್ಡಿಯನ್ ಅನೇಕ ಪ್ರಶಸ್ತಿಗಳನ್ನು ಗಳಿಸಿದೆ. ೧೯೭೦ರಲ್ಲಿ ಇದು ವರ್ಷದ ಪತ್ರಿಕೆಯಾಗಿ ಆಯ್ಕೆಯಾಗಿತ್ತು. ಸಂಪಾದಕರಾದ ಆಲೆಸ್ಟೇರ್ ಹೆದರಿಂಗ್ಟನ್ ೧೯೭೧ರಲ್ಲಿ ವರ್ಷದ ಅತ್ಯುತ್ತಮ ಪತ್ರಕರ್ತರಾಗಿ ಆಯ್ಕೆಗೊಂಡಿದ್ದರು.

ಗಾರ್ಡ್ನರ್, ಅರ್ಲ್ ಸ್ಟ್ಯಾನ್ಲೀ: ೧೮೮೯-೧೯೭೦. ಅಮೆರಿಕ ಸಂಯುಕ್ತಸಂಸ್ಥಾನದ ಪತ್ತೆದಾರಿ ಕಾದಂಬರಿಕಾರ. ಪೆರೀ ಮೇಸನ್ ಎಂಬ ಜನಪ್ರಿಯ ಪತ್ತೇದಾರ ಪಾತ್ರದ ಪ್ರವರ್ತಕ. ಮೆಸಾಚುಸೆಟ್ಸ್ನ ಮಾಲ್ಡನ್ನಲ್ಲಿ ೧೮೮೯ರ ಜುಲೈ೧೭ರಂದು ಹುಟ್ಟಿದ. ವೆಂಟ್ಯುರ ಕೌಂಟಿಯಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ(೧೯೧೧) ಸುಮಾರು ೨೦ ವರ್ಷಗಳ ಕಾಲ ಸಮರ್ಥವಾಗಿ ದುಡಿದ. ೧೯೨೧ರಲ್ಲಿ ಪತ್ತೇದಾರಿ ಕತೆಗಳಿಗೇ ಮೀಸಲಾದ ಪತ್ರಿಕೆಗಳಿಗೆ ಕತೆಗಳನ್ನು ಬರೆಯಲು ಪ್ರಾರಂಭಿಸಿದ. ಈತನ ಮೊದಲ ಕಾದಂಬರಿ ದಿ ಕೇಸ್ ಆಫ್ ದಿ ವೆಲ್ವೆಟ್ ಕ್ಲಾತ್ ೧೯೩೨ರಲ್ಲಿ ಪ್ರಕಟವಾಯಿತು. ಅನಂತರ ವಕೀಲವೃತ್ತಿಗೆ ತಿಲಾಂಜಲಿಯಿತ್ತು ಪೂರ್ಣಕಾಲಿಕ ಲೇಖಕನಾದ. ಲೇಖ್ನವೃತ್ತಿಯಲ್ಲಿ ಮೊದಲ ೨೫ ವರ್ಷಗಳಲ್ಲಿ ಈತ ಒಟ್ಟು ೫೪ ಕೃತಿಗಳನ್ನು ಹೊರತಂದ. ಎಡ್ಗರ್ ವ್ಯಾಲೆಸ್ನಂತೆ ಈತನೂ ಡಿಕ್ಟಪೋನ್ ಬಳಸಿಕೊಂಡು ತನ್ನ ಕತೆಗಳನ್ನು ಹೇಳಿ ರೆಕಾರ್ಡ್ ಮಾಡುತ್ತಿದ್ದನಂತೆ. ಇವುಗಳ ಒಟ್ಟು ೭ ಕೋಟಿ ೫೦ ಲಕ್ಷ ಪ್ರತಿಗಳು ಕೇವಲ ಉತ್ತರ ಅಮೇರಿಕದಲ್ಲಿಯೇ ಮಾರಾಟವಾದುವಂತೆ.

ಈತನ ಬಹುಪಾಲು ಕಾದಂಬರಿಗಳು ಪೆರೀ ಮೇಸನ್ ಎಂಬ ತೀಕ್ಷ್ಣಮತಿ ವಕೀಲನ ಪತ್ತೇದಾರಿ ಅದ್ಭುತಗಳಿಂದ ಕೂಡಿವೆ. ಕಥೆಯನ್ನು ತುಂಬ ವೇಗವಾಗಿ ಆದರೆ ಪ್ರತಿ ಹೆಜ್ಜೆಯಲ್ಲೂ ಕಾನೂನುಬದ್ಧವಾಗಿ ಹೇಳುವುದು ಗಾರ್ಡ್ನರನ ಕ್ರಮ. ಕಾದಂಬರಿಯ ಪ್ರಕರಣಗಳು ಹೆಚ್ಚು ಕುತೂಹಲ ಕೆರಳಿಸಿ ಕೋರ್ಟಿನಲ್ಲಿ ಮುಕ್ತಾಯವಾಗುತ್ತದೆ. ಎ.ಎ.ಫೇರ್ ಎಂದು ಹೆಸರಿಟ್ಟಕೊಂಡು ಈತ ಕೆಲವು ನಿಗೂಢ(ಮಿಸ್ಟರಿ) ಕಾದಂಬರಿಗಳನ್ನು ಬರೆದಿದ್ದಾನೆ.

ಗಾರ್ಡ್ನರ್ ಅಪರಾಧಶಾಸ್ತ್ರದಲ್ಲಿ ಬಹಳಷ್ಟು ಆಸ್ಥೆ ವಹಿಸಿ ಸಂಶೋಧನ ಕೆಲಸ ಮಾಡಿದ್ದಾನೆ. ಮಿಥ್ಯಾಪವಾದಕ್ಕೆ ಗುರಿಯಾಗಿ ಕಾರಾಗೃಹ ಸೇರಿದವರ ರಕ್ಷಣೆಗೆ ಈತ ೧೯೪೮ರಲ್ಲೊಂದು ಸಂಸ್ಥೆಯನ್ನು ಪ್ರಾರಂಭಿಸಿದ. ದಿ ಹೌಲಿಂಗ್ ಡಾಗ್(೧೯೩೪), ದಿ ಸ್ಟಟರಿಂಗ್ ಬಿಷಪ್(೧೯೩೬), ದಿ ಲೇಮ್ ಕ್ಯಾನರಿ(೧೯೩೭), ದಿ ಡ್ರೌನಿಂಗ್ ಡಕ್(೧೯೪೨), ದಿ ರನ್ಅವೇ ಕಾರ್ಪ್ಸ್(೧೯೫೪) ಮುಂತಾದವು ಪೆರೀ ಮೇಸನ್ನನನ್ನೇ ನಾಯಕನನ್ನಾಗುಳ್ಳ ಈತನ ಕೆಲವು ಪ್ರಸಿದ್ಧ ಕಾದಂಬರಿಗಳು. ಇವಲ್ಲದೆ ಈತ ಜಿಲ್ಲಾ ಅಟೋರ್ನಿ ಡಗ್ಲಾಸ್ ಸೆಲ್ಫಿಯನ್ನು ನಾಯಕನನ್ನಾಗುಳ್ಳ ದಿ ಡಿ. ಎ. ಕಾಲ್ಸ್ ಇಟ್ ಮರ್ಡರ್(೧೯೩೭) ದಿ ಡಿ.ಎ. ಕಾಲ್ಸ್ ಎ ಟರ್ನ್(೧೯೫೪) ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾನೆ. ಅಮೆರಿಕಾದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣ ಸಂಸ್ಥೆ ನಡೆಸಿದ ಒಂದು ಪ್ರಯೋಗದಿಂದ ಸಂಯ್ಯುಕ್ತಸಂಸ್ಥಾನದಲ್ಲಿ ಗಾರ್ಡ್ನರ್ ತನ್ನ ಕಾಲದ ಅತಿದೊಡ್ದ ಜನಪ್ರಿಯ ಪತ್ತೆದಾರಿ ಕತೆಗಾರನೆಂದು ತಿಳಿಯುತ್ತದೆ. ಇವನಿಗೆ ಎರಡನೆಯವನು ಷರ್ಲಾಕ್ ಹೋಮ್ಸಮ್ನನ್ನು ಸೃಷ್ಟಿಸಿದ ಕಾನನ್ ಡಾಯರ್.

ಗಾರ್ಡ್ನರ್ನ ಕಾದಂಬರಿಗಳಲ್ಲಿ ಪೆರೀ ಮೇಸನನ ಕಕ್ಷಿಗಾರ(ಅಥವಾ ಕಕ್ಷಿಗಳು) ಒಂದು ವ್ಯೂಹದಲ್ಲೇ ಸಿಕ್ಕಿಕೊಳ್ಳುತ್ತಾನೆ(ಳೆ). ಇನ್ನೇನು, ಅವನ(ಳ) ಅಪರಾಧ ಸಾಬೀತಾಯಿತು ಸೆರೆಮನೆಗೋ ಗಲ್ಲಿಗೋ ಹೋಗುವುದು ಅನಿವಾರ್ಯ ಎನ್ನುವ ಹಂತದಲ್ಲಿ ಪೆರೀ ಮೇಸನ್ಗೆ ಹೊಳೆದ ಉತ್ತರದಿಂದ ಕಕ್ಷಿಗಾರ(ಳು) ಪಾರಾಗುತ್ತಾನೆ(ಳೆ). ಮೊಕದ್ದಮೆಯು ಕೋಲಾಹಲಕರವಾಗಿ ಮುಕ್ತಾಯವಾಗುತ್ತದೆ. ಹಲವೊಮ್ಮೆ ಮೇಸನನಿಗೆತೆಜೊವಧೆ ಮಾಡುತ್ತೇವೆ ಎಂದು ಬೀಗುತ್ತಿರುವ ಪೊಲೀಸರಿಗೆ ತೇಜೋವಧೆಯಾಗುತ್ತದೆ. ಹಿಂದಿನ ಕಾಲದ ಸಾಹಸ ಕಥೆಗಳ ಅದ್ಭುತ ಶಕ್ತಿಯ ನಾಯಕ ಈ ಕಾದಂಬರಿಗಳಲ್ಲಿ ಆಧುನಿಕ ವಕೀಲನಾಗಿ ಕಾಣಿಸಿಕೊಳ್ಳುತ್ತಾನೆ. (ಲಾರ್ಜಿಕ್ ದೇನ್ ಟೈಫ್) ಅಸಾಧಾರಣ ವ್ಯಕ್ತಿಗಳನ್ನು ಕಾಣುವ ಓದುಗನ ಬಯಕೆ ಇಲ್ಲಿ ತೃಪ್ತಿಹೊಂದುತ್ತದೆ. ಗಾರ್ದ್ನರ್ ೧೯೭೦ರ ಮಾರ್ಚ್ ೧೧ರಂದು ನಿಧನನಾದ.

ಗಾರ್ಡ್ನರ್, ಅಲೆಕ್ಸಾಂಡರ್: ೧೭೮೫-೧೮೭೭. ೧೭೮೫ರಲ್ಲಿ ಜನಿಸಿದ ಒಬ್ಬ ಐರಿಷ್ ಸೈನಿಕ. ಅದೃಷ್ಟವನ್ನರಸುತ್ತಾ ಆಫ್ಘಾನಿಸ್ತಾನಕ್ಕೆ ಬಂದ ಈತ ಹಬೀಬುಲ್ಲಾಖಾನನ ಆಶ್ರಯ ಪಡೆದ. ಮಾವನಾದ ಅಮೀರ್ ದೋಸ್ತ್ ಮಹಮ್ಮದನೊಡನೆ ಹಬೀಬುಲ್ಲಾ ಅಧಿಕಾರಕ್ಕಾಗಿ ನಡೆಸಿದ ಹೋರಾಟಗಳಲ್ಲಿ ಈತನೂ ಪಾಲ್ಗೊಂಡ. ಆದರೆ ಇವನು ಬಹಳ ಕಾಲ ಅದ್ದಿರಲಿಲ್ಲ. ೧೮೨೬ರ ಸುಮಾರಿಗೆ ಪಂಜಾಬಿಗೆ ಬಂದು ರಣಜಿತ್ ಸಿಂಗನ ಕೆಳಗೆ ಕರ್ನಲ್ ಹುದ್ದೆ ಪಡೆದ. ಸಿಖ್ ಸೈನಿಕರಿಗೆ ಯುದ್ಧದ ತರಬೇತು ನೀಡುತ್ತಿದ್ದ ಈತ, ರಣಜಿತ್ ಸಿಂಗ್ ಆಫ್ಘನ್ನರೊಡನೆಹೂಡಿದ ಕದನದಲ್ಲಿ ಅವನಿಗೆ ಬೆಂಬಲವಾಗಿದ್ದ, ರಣಜಿತ್ ಸಿಂಗ್ನ ಮರಣಾನಂತರ ಅವನ ಮಕ್ಕಳಲ್ಲಿ ಸಿಂಹಾಸನಕ್ಕಾಗಿ ನಡೆದ ಹೋರಾಟಗಳ ಪ್ರತ್ಯಕ್ಷದರ್ಶಿಯಾಗಿದ್ದ. ಬ್ರಿಟಿಷರು ಸಿಖ್ಖರೊಡನೆ ನಡೆಸಿದ ಮೊದಲನೆಯ ಕದನದಲ್ಲಿ ಇವನು ಯಾವ ಪಾತ್ರವನ್ನೂ ವಹಿಸದಿದ್ದರೂಅಂದಿನ ಘಟನೆಗಳ ಹಲವು ವಿವರಗಳನ್ನು ಬರೆದಿಟ್ಟಿದ್ದಾನೆ. ತದನಂತರ ಜಮ್ಮು-ಕಾಶ್ಮೀರದ ದೊರೆ ಗುಲಾಬ್ ಸಿಂಗ್ನ(ನೋಡಿ-ಗುಲಾಬ್-ಸಿಂಗ್) ಅಧೀನದಲ್ಲಿ ಕೆಲಕಾಲ ದುಡಿದ. ಈತ ಬರೆದಿಟ್ಟಿರುವ ಸಮಕಾಲೀನ ಘಟನಗಳ ವರದಿಗಳನ್ನು ಮೆಮ್ವಾರ್ಸ್ ಆಫ್ ಅಲೆಗ್ಸಾಂಡರ್ ಗಾರ್ಡ್ನರ್ ಎಂಬ ಗ್ರಂಥದಲ್ಲಿ ಹ್ಯೂ ಪಿಯರ್ಸ್ ಸ೦ಗ್ರಹಿಸಿದ್ದಾನೆ.