ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಜರಾತ್ ಅಂಗವಿಕಲರ ಮತ್ತು ಕುರುಡ ಕಿವುಡ-ಮೂಕರ ಶಿಕ್ಷಣ ಸಂಸ್ಥೆಗಳು ಸಮಾಜಕಲ್ಯಾಣ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರವಾಗಿದೆ. ಆರೋಗ್ಯ ; ಈ ರಾಜ್ಯದ ನಗರಗಳಲ್ಲಿ ಗ್ರಾಮಾಂತರ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ ೬೦-೮೦ಸಾವಿರ ಜನಕ್ಕೊ೦ದರ೦ತೆ ಪ್ರಾಥಮಿಕ ಆರೋಗ್ಯ ಕೇ೦ದ್ರಗಳನ್ನು ತೆರೆಯಲಾಗಿದೆ. ಒಟ್ಟು ೨೫೧ ಪ್ರಾಥಮಿಕ ಆರೋಗ್ಯ ಕೇ೦ದ್ರಗಳು ಈ ರಾಜ್ಯದಲ್ಲಿವೆ. ಅಹಮದಾಬಾದ್,ವಡೋದರ,ಜಾಮ್ ನಗರ ಮತ್ತು ಸೂರತ್ ಗಳಲ್ಲಿ ವೈದ್ಯಕೀಯ ಕಾಲೇಜುಗಳು ಜಾಮ್ ನಗರದಲ್ಲಿ ಗುಜರತ್ ಆಯುರ್ವೇದ ವಿಶ್ವವಿದ್ಯಾಲಯವೂ ಇವೆ. ಜಾಮ್ ನಗರದಲ್ಲಿರುವ ಸೂರ್ಯಕಿರಣ ಚಿಕಿತ್ಸಾ