ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಡಿಬಂಡೆ ಕಟ್ಟಿಗೆ,ಹಸ್ತಿದಂತ, ಉಸುಕಿನ ಕಾಗದ ,ಮೇಣದ ಪಾಲೀಷು -ಇವುಗಳ ಗುಡಿಗಾರರ ಕಚ್ಚಾಸಾಮಗ್ರಿಗಳು .ತಮ್ಮ ಕೆಲಸದಲ್ಲಿವರು ಗರಗಸ ,ಉಜ್ಜುಗೊರಡು ,ನಾನಾತರದ ಚಾಣ ,ಮೊಳೆ ,ಮರಡುಗಳನ್ನು (ಹಿಂಜಸ್)ಬಳಸುತ್ತಾರೆ.ಮೊದಲು ತಾವು ಮಾಡಬಯಸಿದ ಕಲಾಕೃತಿಗೆ ಅಳತೆಗನುಗುಣವಾಗಿ ಕಟ್ಟಿಗೆಯನ್ನು ಕತ್ತರಿಸಿಕೊಳ್ಳುತ್ತಾರೆ.ಆಮೇಲೆ ಆ ತುಂಡಿಗೆ ಸಾಮಾನ್ಯ ಕಲಾಕೃತಿಯ ರೂಪಕೊಟ್ಟು ತದನಂತರ ಅದನ್ನು ಸೂಕ್ಷ್ಮ ಕೆತ್ತನೆಯಿಂದ ತಿದ್ದುತ್ತಾರೆ.ಕೊನೆಯಲ್ಲಿ ಉಸುಕಿನ ಕಾಗದ ಮತ್ತು ಮೇಣದ ಪಾಲೀಷಿನಿಂದ ಹೊಳಪು ಕೊಡುತ್ತಾರೆ. ಗುಡೀಗಾರ ಕೃತಿಗಳು ವಾಸ್ಥು ಮತ್ತು ಶಿಲ್ಪದ ಸಾಂಪ್ರದಾಯಿಕ ಶೈಲಿಯನ್ನು ಹೋಲುತ್ತದೆ.ರಾಮಾಯಣ ,ಮಹಾಭಾರತ,ಹಿಂದೂ ಪುರಾಣಗಳೂ ಇವರ ಆಕಾರಗಳು,ದೇವರ ಮೂರ್ತಿಗಳು ,ಒಡವೆಯ ಪೆಟ್ಟಿಗೆಗಳು,ಫೋಟೋ ಚೌಕಟ್ಟುಗಳು,ವ್ಯಾಸಪೀಠ,ಕಾಗದವನ್ನು ಕತ್ತರಿಸುವ ಚಾಕುಗಳು,ಬೀಸಣಿಕೆಗಳು,ವಿಸಿಟಿಂಗ್ ಕಾರ್ಡುಗಳು,ಆನೆ,ಹೂಮಾಲೆ ಇತ್ಯಾದಿಗಳನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.ಈಗೀಗ ಆಧುನಿಕ ಬೇಡಿಕೆಗಳನ್ನು ಗಮನಿಸಿ ಹೊಸ ಹೊಸ ವಸ್ತುಗಳನ್ನು ಸಿದ್ದಪಡಿಸಿಕೊಡುತ್ತಿದ್ದಾರೆ.ಗುಡಿಗಾರಿಕೆಯಲ್ಲಿ ಕಚ್ಚಾವಸ್ತುವಿನ ಕಿಮ್ಮತ್ತಿಗೂ ಕಲಾಕೃತಿಯ ಬೆಲೆಗೂ ನೇರವಾದ ಸಂಬಂಧವಿಲ್ಲ . ಗುಡಿಗಾರರು ಸ್ವತಂತ್ರ ವೃತಿಯವರು.ಕೇವಲ ಕೆಲಸಗಾರರನ್ನು ನಿಯಮಿಸಿಕೊಳ್ಳುತ್ತಾರೆ.ಬೆಂಗಳೂರು,ಮೈಸೂರು,ತಮಿಳುನಾಡು, ಮುಂಬೈ,ಕೋಲ್ಕತ ದೆಹಲಿಗಳು ಗುಡಿಗಾರರ ಮಾರುಕಟ್ಟೆಗಳು.ನೊರಕ್ಕೆ ಅರವತ್ತರಷ್ಟು ಗುಡಿಗಾರರಿಗೆ ಜಮೀನಿದ್ದು ಕೃಷಿ ಮಾಡುತ್ತಾರೆ.ಶೇ.೮೦ ಗುಡಿಗಾರ ಉತ್ಪನ್ನ ಸಾಮಾನ್ಯವಾಗಿ ೫೦೦-೧೦೦೦ ರೂಪಾಯಿಗಳವರೆಗೆ ಇದೆ. ಶೇ.೩೦ ಭಾಗ ವ್ಯಾಪಾರ ಸಹಕಾರಿ ಸಂಘಗಳ ಮುಖಾಂತರವೂ,ಉಳಿದದು ನೇರವಾಗೂ ಆಗುತ್ತದೆ. ಶಿವಮೊಗ್ಗ.ಕುಮಟಗಳಲ್ಲಿ ಗುಡಿಗಾರರ ತರಬೇತಿಗಾಗಿ ಆರ್ಟಿಸಾನ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಗಳಿರುವವಲ್ಲದೆ, ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಮತ್ತು ಮುಂಬೈಯಿನ ಜೆ.ಜೆ.ಸ್ಕೂಲ್ ಆಫ್ ಅರ್ಟ್ಸ್ ಸಂಸ್ಥೆಗಳಲ್ಲೂ ತರಬೇತಿಯ ಅವಕಾಶವುಂಟು.ಗುಡಿಗಾರರ ಕಲಾಕೌಶಲ ಜಗತ್ಪ್ರಸಿದ್ದವಾಗಿದೆ.೧೮೭೧ರಲ್ಲಿ ಅಂತಾರಾಷ್ಟ್ರೀಯ ವಾರ್ಷಿಕ ಪ್ರದರ್ಶನದಲ್ಲಿ ಇವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.ಪ್ಯಾರಿಸ್ನಲ್ಲಿ ನಡೆದ ಜಾಗತಿಕ ವಸ್ಥುಪ್ರದರ್ಶನದಲ್ಲಿ ಕೆಲವು ಕೃತಿಗಳು ಬೆಳ್ಳಿಯ ಪದಕಗಳನ್ನು ಪಡೆದಿವೆ.ಈ ಉದ್ಯೋಗ ಲಾಭಾದಾಯಕವಲ್ಲದ್ದರಿಂದ ಹೊಸ ಪೀಳಿಗೆ ನೌಕರಿಯನ್ನು ಸೇರತೊಡಗಿದೆ.ಇಂದು ಈ ಉದ್ಯೋಗದಲ್ಲಿರುವವರು ಜಾತಿಯ ವೈಶಿಷ್ಟ್ಯವೆಂಬ ಅಭಿಮಾನದಿಂದ ಮಾತ್ರ ಈ ಕಲೆಯನ್ನು ನಡೆಯಿಸಿಕೊಂಡು ಹೋಗುತ್ತಿದ್ದಾರೆ. ಈಚೆಗೆ ಅಲ್ ಇಂಡಿಯ ಹ್ಯಾಂಡಿಕ್ರಾಫ್ಟ್ ಬೋರ್ಡ್ ಈ ಕೈಕಸಬನ್ನು ಸಂರಕ್ಷಿಸುವುದಕ್ಕಾಗಿ ಶ್ರಮಿಸುತ್ತಿದೆ.ಹೊನ್ನಾವರದ ಎಸ್.ವೆಂಕಪ್ಪ, ಸೊರಬದ ಹಿರಿಯಣ್ಣಪ್ಪಾ,ಕುಮಟದ ವಾಮನ ಸುಬ್ರಾಯ ಸೇಟ್,ಅದೇ ಊರಿನ ಸುಬ್ರಾಯ ರಾಮಚಂದ್ರ ಸೇಟ್ ಮತ್ತು ಶಂಬಾ ಅನಂತ ಶೇಟ್,ಸಿದ್ದಾಪುರದ ವೆಂಕಟಗಿರಿ ಚಿದಂಬರ ಚಿತ್ರಕ್ ಮೊದಲಾದವರು ಗುಡಿಗಾರಿಕೆಯಲ್ಲಿ ಪ್ರಸಿದ್ದರಾದವರು(ನೋಡಿ-ಕೆತ್ತನೆ ಕೆಲಸ;ಗಂಧದಮರ;ತೇರು;ದಂತದ ಕೆತ್ತನೆ). (ಅರ್.ಜಿ.ಅರ್.ಎ) ಗುಡಿಬಂಡೆ ; ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಒಂದು ತಾಲ್ಲೂಕು.ಜಿಲ್ಲೆಯ ಅತ್ಯಂತ ಚಿಕ್ಕ ತಾಲ್ಲೂಕು .ಹಿಂದೆ ಬಾಗೇಪಲ್ಲಿಯ ಉಪತಾಲ್ಲೂಕಾಗಿತ್ತು.ದಕ್ಷಿಣದಲ್ಲಿ ಚಿಕ್ಕಬಳ್ಳಾಪುರ,ಪೂರ್ವದಲ್ಲಿ ಶಿದ್ಲಘಟ್ಟ ಮತ್ತು ಬಾಗೇಪಲ್ಲಿ,ಪಶ್ಚಿಮದಲ್ಲಿ ಗೌರಿಬಿದನೂರು ತಾಲ್ಲೂಕುಗಳು,ಉತ್ತರದಲ್ಲಿ ಸ್ವಲ್ಪ ದೊರದವರೆಗೆ ಆಂಧ್ರಪ್ರದೇಶದ ಗಡಿ ಇವುಗಳಿಂದ ಸುತ್ತುವರಿಯಲ್ಪತ್ತಿದೆ.ತಾಲ್ಲೂಕಿನ ವಿಸ್ತೀರ್ಣ ೨೨೨ಕಿ.ಮೀ.ಕಸಬೆ ಮತ್ತು ಸೋಮೇನ ಹಳ್ಳಿ ಹೋಬಳಿಗಳು.ಒಟ್ಟು ಗ್ರಾಮಗಳು ೧೦೫.ಜನಸಂಖ್ಯೆ೫೫೬೧೮(೨೦೧೧). ತಾಲ್ಲೂಕು ಹೆಚ್ಚುಮತಟ್ಟಿಗೆ ಕಣಶಿಲೆಯ ಬೆಟ್ಟಗಳ ಪ್ರದೇಶ .ಭೂಮಿ ಉತ್ತರಕ್ಕೆ ಇಳಿಜಾರಗಿದ್ದು ಅನೇಕ ಏರು ತಗ್ಗುಗಳಿಂದ ಕೊಡಿದೆ.ನಂದಿಬೆಟ್ಟದ ಉತ್ತರದಲ್ಲಿ ಅವಲುಕೊಂಡು ಎಂಬಲ್ಲಿ ಹುಟ್ಟುವ ಕುಶಾವತಿ ನದಿ ಈ ತಾಲ್ಲೂಕಿನ ಮೂಲಕ ಉತ್ತರಕ್ಕೆ ಹರಿದು ಮುಂದೆ ಚಿತ್ರಾವತಿ ನದಿಯನ್ನು ಸೇರಿಕೊಳ್ಳುತ್ತದೆ.ತಾಲ್ಲೂಕಿನ ಮುಖ್ಯ ಕೆರೆಯಾಗಿರುವ ಬೈರಸಾಗರಕ್ಕೆ ಇದೇ ಮುಖ್ಯ ಆಸರೆ . ಈ ಕೆರೆಯ ಎರಡು ನಾಲೆಗಳಲ್ಲಿ ಸುಮಾರು ೨.೫ಕಿ.ಮೀ ದೂರದವರೆಗೂ ಮತ್ತೊಂದು ೬.೫ಕಿಮೀ ದೂರದವರೆಗೂ ಸಾಗುತ್ತದೆ. ಈ ತಾಲ್ಲೂಕಿನಲ್ಲಿ ನುರುಜುಗಲ್ಲಿನಿಂದ ,ಕಲ್ಲುಗಳಿಂದ ಕೂಡಿದ ಭೂಪ್ರದೇಶವೇ ಹೆಚ್ಚು .ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ೭೩೩.೮೪ಮಿಮೀ.ಮಳೆ ಕಡಿಮೆಯಾದರೂ ಕೆರೆ ಬಾವಿಗಳ ಆಸರೆಯಿಂದ ನೆಲಗಡಲೆ, ರಾಗಿ,ಬತ್ತ ,ಕಬ್ಬು,ಆಲೂಗಡ್ಡೆ,ಈರುಳ್ಳಿ,ಮೆಣಸಿನಕಾಯಿ ಮತ್ತು ದ್ವಿದಳ ಧಾನ್ಯಗಳನ್ನು