ಈ ಪುಟವನ್ನು ಪ್ರಕಟಿಸಲಾಗಿದೆ

ಏನು ಸಂಬಂಧ? ಉತ್ತರಗಳು 'ಬಣ್ಣದ ಬಯಲು' ಲೇಖನಕ್ಕೆ ಪೂರಕ ವಾಗಿರುವ ಇನ್ನೊ೦ದು ಪುಟ್ಟ ಲೇಖನದಲ್ಲಿ ಅಡಕಗೊಂಡಿವೆ.ಓದಿ ನೋಡು ವಿರಂತೆ.

ಒಂದು ಮಾತು ಮೊದಲೇ ಹೇಳಿಬಿಡುವುದು ಮೇಲು. ಮೇಲೆ ಪ್ರಸ್ಥಾಫಿತವಾದ ಎರಡು ಸಂಘಟನೆಗಳಿಗೂ ಆ ಕಾಲದ ಏಕ ಕಮ್ಯೂನಿಸ್ಟ್ ಪಕ್ಷವೇ ಪ್ರೇರಕಶಕ್ತಿಯಾಗಿತ್ತು. ಆ ವೇಳೆಗೆ ನಾನು ಕಮೂನಿಸ್ಟ್ ಸೇರಿದ್ದೆನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ?

ಮಂಗಳೂರು ನನ್ನ ಕಾರ್ಯರಂಗ. ಪ್ರಗತಿಶೀಲ ಲೇಖಕರ ಸಂಘಕ್ಕೂ ಜನತಾರಂಗಭೂಮಿ ಸಮಿತಿಗೂ ನಾನೇ ಕಾರ್ಯದರ್ಶಿ. ಮೊದಲಿನದಕ್ಕೆ ಕೆ.ಕೆ.ಶೆಟ್ಟರು ಅಧ್ಯಕ್ಷರು; ಎರಡನೆಯದರ ಅಧ್ಯಕ್ಷರು ತಲಚೇರಿ ರ೦ಗ ರಾಯರು.ಜನತಾರಂಗಭೂಮಿಯ ಉದ್ಘಾಟನೆಯಲ್ಲಿದ್ದದು ಬರೇ ಭಾಷಣ ಗళు ಮಾತ್ರ!

ಜಪಾನಿನಲ್ಲಿ ಎರಡು ವಿಶಿಷ್ಟ ನಾಟಕ ಶೈಲಿಗಳಿವೆ: 'ನೊ' ಮತ್ತು 'ಕಬುಕಿ'. ನನ್ನ ಮೊದಲ ಯತ್ನ NO ಆಯಿತು! ಹೀಗೆ ಕಾಳಸಂತೆಯವ ರನ್ನು ಹೀಗಳೆಯುವ ಅಭಿನಯಕ್ಕೆ ಒಂದು ಗಂಟೆ ಬೇಕಾಗುವ ನಾಟಕ ರಚಿಸಿದೆ.ಅನುಮತಿ ನೀಡುವವರು ಜಿಲ್ಲಾ,ಪೋಲೀಸ್ ಸೂಪರಿ೦ಟೆ೦ಡೆ೦ಟರು. ಕಾಗದ ಬರೆದೆ. ಮೂರನೆಯ ದಿನ ಪೋಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಸನ್ಯಾಸಿಗುಡ್ಡೆ ರಸ್ತೆಗೆ ಬಂದರು. ಸೈಕಲಿನಲ್ಲಿ. ರಸ್ತೆಗೆ ತಗಲಿಕೊಂಡೇ ನನ್ನ ಕಿಟಿಕಿ. ಸೈಕಲಿನಿಂದಿಳಿದು, ಅತ್ತ ಬಂದು, ಕೇಳಿದರು:

"ಇಲ್ಲಿ ಪೀಪ್‍ಲ್ಸ್ ಥೀಯೇಟರ್ ಎಲ್ಲಿದೆ?"

“ಥಯೇಟರ್‍ಗೆ ಕಟ್ಟಡ ಇಲ್ಲ. ಸಮಿತಿ ಮಾತ್ರ. ನಾನು ಕಾರ್ಯದರ್ಶಿ," ಎಂದೆ.

"ನಿಮ್ಮ ನಾಟಕದ, ಹಸ್ತಪ್ರತಿ ಬ೦ದಿದೆ. ಡಿ.ಎಸ್.ಪಿ.ಬರ ಹೇಳಿ ಧಾರೆ. ಚರ್ಚ್ಚಿಗೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಬನ್ನಿ.”

"ಸರಿ."