ಈ ಪುಟವನ್ನು ಪ್ರಕಟಿಸಲಾಗಿದೆ



ಬಣ್ಣದ ಬಯలు | xvii

ಜವಾಬುದಾರಿ ಹೊತ್ತವ್ಯಕ್ತಿ ಮೈಯೆಲ್ಲ ಕಣ್ಣಾಗಿರಬೇಕು. ನನ್ನ ಹಿಂದಿತ್ತು ಭಿನ್ನವೂ ಉಗ್ರವೂ ಆದ ಬದುಕಿನ ಛಾಯೆ. ಬಾನುಲಿ ನಾಟಕದ ಪ್ರಸ್ತಾಪ ಅವರು ಮಾಡಲಿಲ್ಲ. "ಪ್ರಸಾರಕ್ಕಾಗಿ ಒಂದು ಕತೆ ಬರೆಯಿರಿ," ಎಂದು ಹೇಳ ಲಿಲ್ಲ. ಚದುರಂಗ ಯಾವ ಸೂಚನೆಯನ್ನೂ ನನಗೆ ಕೊಟ್ಟಿರಲಿಲ್ಲವಾದ್ದರಿಂದ, ಬೇಸರದ ಪ್ರಶ್ನೆ ಇರಲಿಲ್ಲ.

೧೯೫೫ರಲ್ಲಿ ಕಾದಂಬರಿಕಾರ ನಿರಂಜನ ಮೈಸೂರಿನಲ್ಲಿ ಮನೆಮಾಡಿದ.

ಪ್ರದೇಶ ವಾಣಿವಿಲಾಸ ಮೊಹಲ್ಲಾ. ಅಲ್ಲಿ ಎಡವಿದರೆ ಸಾಕು, ಆಕಾಶವಾಣಿ ಯವರೋ ವಿಶ್ವವಿದ್ಯಾಲಯದವರೋ ಸಿಗುತ್ತಿದ್ದರು. ಇತ್ತ ಕವಿ ಇಟಗಿ ರಾಘವೇಂದ್ರ (ಆಕಾಶವಾಣಿಯ ಕಾರ್ಯಕ್ರಮ ಸಹಾಯಕರು): ಅತ್ತ ಶಿವಸ್ವಾಮಿ. ಸಣ್ಣ ಜಗತು. ಆಕಾಶವಾಣಿಗಾಗಿ ಕೆಲ ಪುಸ್ತಕಗಳನ್ನು ವಿಮರ್ಶೆ ಮಾಡಿದೆ. ನಿಮ್ಮ 'ರಂಗಮ್ಮನ ವಠಾರ' ಕಾದಂಬರಿಯನ್ನು ನಾಟಕ ರೂಪದಲ್ಲಿ ಬರೆದುಕೊಡಿ, ಆರು ಭಾಗಗಳಲ್ಲಿ" -ಎಂದರು ಶಿವಸ್ವಾಮಿ. ನಾಟಕ! ಬಾಗಿಲಲ್ಲಿ ಹೋದದ್ದು ಕಿಟಿಕಿಯಿಂದ ಬಂದಿತ್ತು!

ಮೈಸೂರು ಆಕಾಶವಾಣಿ ಬೆಂಗಳೂರಿಗೆ ಸ್ಟಳಾಂತರಗೊಂಡಿತು.

ರೂಪುಗೊಳ್ಳುತ್ತಿದ್ದ ಕರ್ನಾಟಕದ ರಾಜಧಾನಿಯ ಹೊಸನಿಲಯ. "ಇದು ಆಕಾಶವಾಣಿ, ಬೆಂಗಳೂರು.” ಅದರ ಉದ್ಘಾಟನೆಯ ಘಳಿಗೆಯಲ್ಲಿ 'ಪಾವನ ಪರಂಪರೆ' ಎಂಬ ನುಡಿಚಿತ್ರ ಬೇಂದ್ರೆ ಬರೆದದ್ದು. ರಾಜರತ್ನಂ, ನಿರಂಜನ; ಎಲ್.ಜಿ. ಸುಮಿತ್ರಾ....ಧ್ವನಿಗಳು (ಪಾತ್ರಗಳು). ಆಹ್ವಾನಿತ ಶ್ರೋತೃಗಳ ಎದುರಲ್ಲಿ ಕಾರ್ಯಕ್ರಮ ನಡೆಯಿತು. ರೂಪಕ ಪ್ರಸಾರ ಒಂದು ಬಗೆಯ ಧ್ವನಿ ಅಭಿನಯ.ಮುಂದೆ ಆ ನಿಲಯಕ್ಕೆ ಶ್ರೀರಂಗ, ವಿ.ಸೀ., ಕಸ್ತೂರಿ ಪ್ರೊಡ್ಯೂಸರುಗಳಾಗಿ ಬಂದರು.

ನಾನು ಸಕುಟುಂಬನಾಗಿ ಧಾರವಾಡಕ್ಕೆ ಸಾಗಿದೆ. ಬೆಂಗಳೂರು

ನಿಲಯಕ್ಕಾಗಿ ಭದ್ರಾವತಿ ಉಕ್ಕಿನ. ಕಾರಖಾನೆಯನ್ನು ಕುರಿತು ಒಂದು ರೂಪಕ-ನುಡಿಚಿತ್ರ-ಬರೆಯಲು ಓಡಾಡಿದೆ."ಮಣ್ಣು ಉಕ್ಕಾಯಿತು; ಕಾಡು ಊರಾಯಿತು!"ನನ್ನದೇ ನಿರ್ವಹಣೆ. ದಕ್ಷಿಣದ ನಾಲ್ಕು ಆಡು ಭಾಷೆಗಳಲ್ಲಿ ಪ್ರಸಾರವಾಯಿತು. ಧಾರವಾಡದಲ್ಲಿದ್ದಾಗ ರಂಗಸ್ಟಲದಲ್ಲಿ ಆಡುವ ಮತ್ತು