ಈ ಪುಟವನ್ನು ಪ್ರಕಟಿಸಲಾಗಿದೆ



   ೧೪ | ನಾವೂ ಮನುಷ್ಯರು!
          
          ಸಾಯಂಕಾಲ ಮರತೇ ಹೋಯಿತು.ಮೆರವಣಿಗೆ ಒಟ್ಟಿಗೆ  
          ಓಡಿದ್ದೇ. ಪುನಃ ತಂದುಬಿಟ್ಟೆ .
         (ರುಕ್ಕು ಬುಟ್ಟಿಯನ್ನು ಎತ್ತಿಟ್ಟು, ಮಗನನ್ನು ತಬ್ಬಿಕೊಳ್ಳು
          ವಳು.)

ರಾಮಣ್ಣ : ನಮ್ಮ ಹಸಿ ಬಂಗುಡೆ ಈ ದಿನ ಬಿಸಿಯಾದೀತು....

ಕಿಟ್ಟು  : (ತಾಯಿಯಿಂದ ಬಿಡಿಸಿಕೊಂಡು)

        ಹೇಯ್! ನನಗೊಂದು ಪದ್ಯ ಗೊತ್ತುಂಟು:
        ಕಾಸಿಗೆ ಎರಡು ಬೆಳ್ಳುಳ್ಳಿ
        ಬಂಗುಡೆಮಿನಿಗೆ 
        ಸಂಗಡವಾದ
        ಅಂಗಡಿಯೊಳಗಿನ ಬೆಳ್ಳುಳ್ಳಿ

ರುಕ್ಕು  : ಕಾಸಿಗೆ ಎರಡು ಬೆಳ್ಳುಳ್ಳಿ ಇಲ್ಲವೆ ಇಲ್ಲ. ಈಗ ಅದರ

        ಅಗತ್ಯವೂ ಇಲ್ಲ.
        ಈ ಪದ್ಯ ಹೇಳು ಕಿಟ್ಟ-ಮಿಟಿಂಗ್ನಲ್ಲಿ ಹೇಳಿದ್ರಲ್ಲ ಅದು....
        (ತಾಯಿ ಮೊದಲು,ಮತ್ತೆ ತಾಯಿ ಮಗ ಜತೆಯಾಗಿ)
        ಊರಿನಲ್ಲಿ ದುಡಿವ ನಮಗೆ ಹೊಟ್ಟೆಗಿಲ್ಲದಾಗಿದೆ
        ಊರಹಂಚು ಮಾಡುವೆಮಗೆ ಮನೆಯೆ ಇಲ್ಲವಾಗಿದೆ ೧
        ದುಡಿವುದೊಂದೆ ಗೊತ್ತು ನಮಗೆ, ನಮ್ಮ ಬೆವರ
                             ಫಲವನು
        ದುಡಿಯದೆಯೇ ಕುಡಿದು ತಿಂಬ ಜಡಧನಿಕನು ಸುಲಿವನು ೨
        ನಮ್ಮದು ಹೊಲ ನಮ್ಮದು ನೆಲ ನಮ್ಮದಿಡೀ ರಾಜ್ಯವು
        ನಮ್ಮದನ್ನು ನಾವು ಪಡೆಯೆ ನಮಗೆ ಯಾರ ವ್ಯಾಜ್ಯವು?  ೩
        ಊರ ಸುಲಿವ ಚೋರತನದ ಪಾರುಪತ್ಯ ಈಗಿದೆ
        ಊರಿಗಿಲ್ಲ ಸುಖವು ಇದನ್ನು ವೀರತನದಿ ನೀಗದೆ       ೪