ಈ ಪುಟವನ್ನು ಪ್ರಕಟಿಸಲಾಗಿದೆ

 ೧೬ / ನಾವೂ ಮನುಷ್ಯರು!

    ರಾಮಣ್ಣ : ನೋಡಿ-ನೋಡಿ. ವೆಂಕಟರಮಣನ ಮುಡಿಪಿಗಿಂತಲೂ
              ಹೆಚ್ಚು ಪವಿತ್ರ ಈ ಎರಡೆರಡಾಣೆ.
       ಕಿಟ್ಟು: ಅಪ್ಪಾ, ನನ್ನದೂ ಎರಡಾಣೆ ಕೊಡು, ನಾನೂ ಮೆಂಬ
              ರಾಗ್ಬೇಕು.
             (ಎಲ್ಲರೂ ನಗುವರು.) 
  ಕಾರ್ಯದರ್ಶಿ: ಈಗ ನೀನು ಕೆಲಸಕ್ಕೆ ಹೋಗುವುದಿಲ್ಲವಲ್ಲ. ಕೆಲಸಕ್ಕೆ
             ಹೋಗಲಿಕ್ಕೆ ಶುರುಮಾಡಿದ ಮೇಲೆ ನೀನೂ ಮೆಂಬರು. 
             ಈ ವರ್ಷ ಶಾಲೆಗೆ ಬಾ. ಯುನೂನಿಯನ್ ಶಾಲೆಗೆ
             ಕಲೀಲಿಕ್ಕೆ, ಬರ್ತೀಯೊ?
             
       ಕಿಟ್ಟು: ಓ!
            (ರಾಮಣ್ಣ-ರುಕ್ಕು ಸಂತೋಷದಿಂದ ಪರಸ್ಪರ ದೃಷ್ಟಿ
             ವಿನಿಮಯ ಮಾಡಿಕೊಳ್ಳುವರು)
 ಕಾರ್ಯದರ್ಶಿ: ಇನ್ನು ನಾನು ಚಂದಾ ವಸೂಲಿಗೆ ಬರಲಿಕ್ಕಿಲ್ಲ. ನೀವೇ
             ತಂದುಕೊಡಬೇಕು. 
            (ರಶೀದಿ ಬರೆಯುತ್ತ) 
             ಈ ಸಲದ ರಶೀದಿ ಇಲ್ಲಿಯೇ ಕೊಡ್ತೇನೆ.
   ರಾಮಣ್ಣ : ಇನ್ನೇನು-ಇನ್ನೊಂದು ವಾರ ಬಿಟ್ಟು ನಾನೂ ಕೆಲಸಲಕ್ಕೆ
             ಬರುವವನೇ! 
     ಆದಂ : ನಾಡ್ದು ಮಿಟಿಂಗಿಂದೂ ಹೇಳಿಬಿಡಿ.
 ಕಾರ್ಯದರ್ಶಿ: ಹಾಂ..ಮಂಗಳವಾರ ಸಾಯಂಕಾಲ ದೊಡ್ಡ ಮೈದಾನಿ
            ನಲ್ಲಿ ಭಾರಿ ದೊಡ್ಡ ಸಭೆ ಉಂಟು....ರಷ್ಯಾದ ಕ್ರಾಂತಿ 
            ದಿನದ ಆಚರಣೆ. 
            (ರಾಮಣ್ಣನತ್ತ ನೋಡಿ)