ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||ವಂದೇ ಮಾತರಂ||

ಪ್ರಾಂತಭಾಷೆ-ರಾಷ್ಟ್ರಭಾಷೆ

೧. ಪ್ರಾಂತ ಭಾಷೆ

ಒಂದು ನೆನಪು

೧೯೨೮ರಲ್ಲಿ ಒಂದು ಮಾತು. ಇಡೀ ದಕ್ಷಿಣ ಹಿಂದುಸ್ತಾನದಲ್ಲಿ ಅತ್ಯುಚ್ಚವಾದ ನೀಲಗಿರಿ ಪರತ್ವದ ತಪ್ಪಲಲ್ಲಿರುವ ಉದಕ ಮಂಡಲಕ್ಕೆ ಹೋದ ಪ್ರಸಂಗವದು. ಅಲ್ಲಿಯ ದೊಡ್ಡ ಬೆಟ್ಟ ಎಂಬ ೮೬೦೦ ಅಡಿ ಇರುವ ಶಿಖರವನ್ನು, ಸಾಲು ಗಟ್ಟಿ ಶಿಸ್ತಿನಿಂದ ನಿಂತಿರುವ ೨೦೦-೨೫೦ ಅಡಿ ಎತ್ತರದ ನೀಲಗಿರಿ ಎಣ್ಣೆಯ ಗಿಡಗಳನ್ನು, ಅತ್ಯಂತ ರಮ್ಯ. ಚಹಾ ತೋಟಗಳನ್ನು, ಹಚ್ಚ ಹಸಿರು ದುಂಡ ದುಂಡ ದಿನ್ನಿಗಳನ್ನು ನೋಡಿದೆನು. ಅವೆಲ್ಲವುಗಳಿಗಿಂತ ಅಲ್ಲಿರುವ ಬಡಗರತ್ತ ನನ್ನ ಮನಸು ಹೆಚ್ಚು ಎಳೆಯಿತು. ಬಡಗು ಭಾಷೆ ಮಾತಾಡುವ ಜನ ಅವರು, ಅವರನ್ನು ನೋಡಿ ಮಾತಾಡಿಸಿದೊಡನೆ ಅವರು ನನ್ನ ಬಾಂಧವರೆಂಬ ಭಾವನೆ ನನ್ನಲ್ಲಿ ಒಡಮೂಡಿತು. ಆ ಜಿಲ್ಲೆಯಲ್ಲಿ ನೂರಕ್ಕೆ ಸುಮಾರು ಅರುವತ್ತು ಜನ ಬಡಗರು. ಆದರೆ ಅಲ್ಲಿಯ ಪ್ರಾಥ ಮಿಕ ಶಾಲೆಗಳಲ್ಲಿ ತಮಿಳು, ಮಾಧ್ಯಮಿಕ ಶಾಲೆಗಳ ಬೋಧ ಭಾಷೆ ತಮಿಳು, ಕೋ‌ರ್ಟು ಕಛೇರಿಗಳಲ್ಲಿ ತಮಿಳು. ಅನೇಕ ವರುಷ ಹೀಗೆಯೆ ನಡೆಯುತ್ತ ಬಂದಿತು. ಆದರೂ ಇನ್ನೂ ಕನ್ನಡದ ಅಭಿಮಾನಿಗಳು ಆ ಬಡಗು ಬಾಂಧ ವರಲ್ಲ ಇನ್ನು ಅನೇಕರಿದ್ದಾರು. ಅರೇಗೌಡರ ಎಂಬವರು ಸ್ವಂತ ಖರ್ಚಿ ನಿಂದ ಕನ್ನಡ ಶಾಲೆ ಮುಂತಾದವುಗಳನ್ನು ನಡೆಸಿದ್ದರು. ಅಷ್ಟರಿಂದ ನನ್ನ ಸಮಾಧಾನವಾಗಲಿಲ್ಲ. ನಾನು ಸಂತೆ ಪೇಟೆಗಳಲ್ಲಿ ಅಡ್ಡಾಡಿದೆನು. ಹಲವು ಹಳ್ಳಿಗಳಿಗೆ ಹೋಗಿ ಹಳ್ಳೀಗರೊಡನೆ ಮಾತಾಡಿದೆನು. ನನ್ನ ವಿಷಯ ಒಂದೇ-ಕನ್ನಡ, ಕನ್ನಡ ಶಾಳೆ, ಕನ್ನಡ ಮಾಧ್ಯಮ, ಕನ್ನಡದ ಪ್ರಸಾರ.

ನಾನು ಆ ಬಗ್ಗೆ ಮಾತಾಡಲಾರಂಭಿಸಿದೊಡನೆ ಆ ಬಡ ಸಾದಾ ವೃತ್ತಿಯ ಒಡಗರ ಅಂತಃಕರಣಗಳು ಉಕ್ಕಿ ಬರುತಿದ್ದುವು, ಅವರ ಚಿತ್ತಹ