ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧

ಕೊಳದ ತಡಿಯಲ್ಲಿ


ಇವಳಾರು? ನಾನು ಭ್ರಾಂತನಾಗಿರಬೇಕೆಂದುಕೊಂಡುಕಣ್ಣುಗಳನ್ನುಜ್ಜಿಕೊಂಡೆ. ತಿರುಗಿ ಆ ಕಡೆ ನೋಡುವಲ್ಲಿ ಆ ದೇವಿ ಅಲ್ಲೆ ನಿಂತಿದ್ದಳು. ಈಗ ಹುಸಿನಗೆಯೊಂದು ಆ ತುಟಿಗಳಲ್ಲಿ ಮಿನುಗುತ್ತಿತ್ತು.

ಅವಳು ಹೀಗೆಂದಳು-ನೀನಿಂದು ಉದ್ವಿಗ್ನನಾಗಿರುವೆ. ನಿಜ! ನಿನಗೆ ಸಹಾನುಭೂತಿ ಬೇಕು. ನಾನು ನಿನ್ನ ಕೆಳದಿ. ನಿನ್ನ ಅಂತರಂಗವನ್ನು ಬಲ್ಲೆ. ಒಲುಮೆಯೆಂಬುದೇನೆಂಬುದನ್ನು ಅರಿತಿರುವೆಯಾ? ನಿನ್ನ ಅವ್ಯಕ್ತವಾದ ನಿರ್ವೇದನೆಯನ್ನು ನಾನು ನಿನಗೆ ಸ್ಪಷ್ಟಗೊಳಿಸಬೇಕೆಂದೇ ಇಂದು ಬಂದೆ. ಒಲುಮೆಯೆಂದರೇನು ಬಲ್ಲೆಯಾ? ಈ ಪೂಶ್ನೆಗೆ ನಾನು ನಿರುತ್ತರನಾದೆ. ಅಪ್ರತಿಭನಾದೆ. ವರ್ತಮಾನದ ಅರಿವಳಿದು ಬಾಳು ಎಲ್ಲಿಗೋ ತೇಲಿಹೋಗುವಂತಾಯಿತು. ದೃಷ್ಟಿಶೂನ್ಯವಾದ ಕಣ್ಣುಗಳನ್ನು ಅವಳ ಮುಖದ ಮೇಲೆ ನನಗೆ ತಿಳಿಯದಂತೆಯೇ ನೆಟ್ಟೆ. ಸ್ವಲ್ಪ ಹೊತ್ತಿನ ಮೇಲೆ ಅರಿವು ಮರಳಿತು. ನೆನಪು ಕುದುರಿತು. ಬಿಗಿದ ಕೊರಲಿನಲ್ಲಿ ``ಹಾಗಾದರೆ ನೀನು ಅವಳೆ? ಎಂದು ತೊದಲಿದೆ.

"ಅವಳೆಂದರೆ ?"

"ಹಿಂದೆ, ಬಹಳ ಹಿಂದೆ, ಒಂದು ಯುಗವಾಗಿರಬಹುದು-ಆಕೆ-ಅವಳಲ್ಲವೆ ನೀನು?"

"ಅವಳು, ಆಕೆ, ಯುಗ-ಏನಿದು ನಿನ್ನ ಪ್ರಲಾಪ? ನೀನು ಭ್ರಾಂತ, ಹುಚ್ಚ. ಅವಳಾರು, ನೀನಾರು? ಅವಳಿಗೆ ನಿನ್ನಲ್ಲೇನು ಕೆಲಸ? ಇಲ್ಲಿಗೇಕೆ ಬಂದಾಳು?"

"ಹೌದು, ಇಲ್ಲೇನು ಕೆಲಸ, ಇಲ್ಲಿಗೇಕೆ ಬಂದಾಳು" ಎಂದು ನನ್ನೆದೆ ಹೊಳಲುಗೊಟ್ಟಿತು. ತಾನು ನಿರುತ್ತರನಾಗಿ, ಕರಣಶೂನ್ಯನಾಗಿ, ಅರಿವು ಗೆಟ್ಟು, ಕಣ್ಣುಗಳನ್ನು ತಗ್ಗಿಸಿ ಸುಮ್ಮನೆ ಕುಳಿತುಬಿಟ್ಟೆ. ಹೀಗೆ ಎಷ್ಟು ಹೊತ್ತು ಕುಳಿತಿದ್ದೆನೋ ನನಗೆ ತಿಳಿಯದು. ಅರಿವು ಮರಳಿದಾಗ ದಿವ್ಯಗಾನವೊಂದು ಕಿವಿಗೆ ಸುಳಿಯಿತು. ಚಕಿತನಾಗಿ ಹಿಂದೆ ತಿರುಗಿ ನೋಡಿದೆ, ಆ ವನಕಿಶೋರಿಯು ಅಪೂರ್ವ ರಾಗವೊಂದನ್ನೆತ್ತಿ ಅಕಾರಾದಿ ಅಲಾಪನೆಗೆ ತೊಡಗಿದ್ದಳು. ಆ ರಾಗವು ವಿಪೂಲಂಭರಸಾತ್ಮಕವಾದುದು. ಕರುಣೆಯ ಮಾತೃಕೆಯೂ ಹೌದು. ಆಹಾ! ಆ ಗಾನದ ಸವಿಯನ್ನು ಏನು ಹೇಳಲಿ? ಆ ರೂಪ, ಆ ಗಾನದ ರೀತಿ, ಆ ರಾಗ, ಆ ದಿವ್ಯತೆ, ಆ ನವ್ಯತೆ, ಆ ರಸ ಪರಿಪೋಷಣ ಚಾತುರ್ಯ-ಏನು ಹೇಳಲಿ-ನಾನು ಮುಗ್ಧನಾದೆ. ಭಾವಾವಿಷ್ಟನಾದೆ. ರಾಗವನ್ನು ಮಂದ್ರ ಮಧ್ಯಮ ತಾರಕಗಳಲ್ಲಿ