ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋಕುಲಾಷ್ಟಮಿ

ಇಂದು ಗೋಕುಲಾಷ್ಟಮಿ. ಪುರಾಣ ಪುರುಷನೂ ಮಹಾಭಾರತ ವ್ಯಕ್ತಿಯೂ ಆದ ಗೀತಾಚಾರ್ಯನವತರಿಸಿದ ಪವಿತ್ರತಮವಾದ ದಿನವಿಂದು. ನಮಗಂತೂ ದೊಡ್ಡ ಹಬ್ಬ. ಅರ್ಧರಾತ್ರಿಯಾಗದೆ. ಅಷ್ಟಮಿಚಂದ್ರನು ಈಗ ತಾನೆ ಮೂಡಲಿಲ್ಲ ಮೈದೋರಿದ್ದಾನೆ. ಬಾನಿನಲ್ಲಿ ಮೋಡವಾಡಿ ಹನಿಯುತ್ತಿದೆ. ಸಾವಿರಾರು ವರ್ಷಗಳ ಹಿಂದೆ ಇಂಥ ವೇಳೆಯಲ್ಲೇ ಲೋಕೋದ್ಧಾರಕ್ಕಾಗಿ ಸೆರೆಮನೆಯಲ್ಲಿ ಪರಮಾತ್ಮನುದಿಸಿದನಂತೆ. ಅಂದು ಮೊದಲು ಇಂದಿನವರೆಗೂ ಪೂತಿ ವರ್ಷದಲ್ಲೂ ಪೂತಿ ಮನೆಯಲ್ಲೂ, ಪೂತಿ ಕುಟುಂಬದಲ್ಲೂ ಕೃಷ್ಣ ಹುಟ್ಟುತ್ತಿರುತ್ತಾನೆ. ಇದು ಸುಳ್ಳಲ್ಲ, ನಿಜ. ಇಂದು ನಮ್ಮ ಮನೆಯಲ್ಲೂ ಕೃಷ್ಣ ಹುಟ್ಟಿದನು. ನನಗೆ ಈ ವಿಚಾರದಲ್ಲಿ ಮೊದಲು ಅಷ್ಟು ನಂಬಿಕೆ ಇರಲಿಲ್ಲ. ಐದಾರು ವರ್ಷಗಳ ಹಿಂದೆ ನಮ್ಮ ಕಿಟ್ಟುವನ್ನು ``ಕೃಷ್ಣ ಎಲ್ಲಿ ಹುಟ್ಟಿದ, ಮಗು? ಎಂದು ಕೇಳಿದೆ. ``ಅಲ್ಲಿ ಎಂದು ಅದು `ಫಲ ವಸ್ತ್ರ'ದ ಕಡೆಗೆ ಕೈ ತೋರಿಸಿತು. ಅದರ ಆಟದ ತೊಟ್ಟಿಲನ್ನು ನಾವು `ಫಲ ವಸ್ತ್ರ'ದ ಚಪ್ಪರಕ್ಕೆ ಒಂದು ಹಣ್ಣಿನಂತೆಯೇ ಕಟ್ಟಿತೂಗುಬಿಟ್ಟಿದ್ದೆವು. ಆ ತೊಟ್ಟಿಲಿನಲ್ಲಿ ಅದರ ಅಂಬೆಗಾಲು ಕೃಷ್ಣನನ್ನು ಕುಳ್ಳಿರಿಸಿದ್ದೆವು. ಕೆಳಗೆ ಇನ್ನೊಂದು ತೂಗುತೊಟ್ಟಿಲಲ್ಲಿ ನಮ್ಮ ಮನೆಯ ಮಡಿ ಕೃಷ್ಣನನ್ನು ಅಲಂಕರಿಸಿ ತಂದೆಯವರು ಬಿಜಯ ಮಾಡಿಸಿದ್ದರು. ಹಣತೆಯೊಂದರ ಬೆಳಕು ಈ ಮಡಿ ಕೃಷ್ಣನ ಮೇಲೆ ಬಿದ್ದು ಮೂರ್ತಿಯನ್ನು ಬೆಳಗಿತ್ತು. ಆದರೆ ಆ ಪೂಭೆ ಮೇಲೆ ತೊಂಗುತ್ತಿದ್ದ ಮಗುವಿನ ಕೈ ತೊಟ್ಟಿಲಿನ ತಳವನ್ನು ಮಾತ್ರ ಮುಟ್ಟಿ ಅದರ ಬಾಲಕೃಷ್ಣನ ಮೇಲೆ ನೆಳಲನ್ನು ಚೆಲ್ಲಿತ್ತು. ಚಪ್ಪರದ ಮೇಲೆ ಬಿದ್ದು, `ಫಲವಸ್ತ್ರ'ದ ನೆಳಲುಗಳೊಡನೆ ಹಾಸುಹೊಕ್ಕಾಗಿ ಬೆರೆದಿದ್ದ ಹಣತೆಯ ಮಾಸುಬೆಳಕು, ತೊಟ್ಟಿಲನ್ನು ಆವರಿಸಿದ್ದ ಮಸುಕುಮಸಕಾದ ಕತ್ತಲು, ಅದರ ಹೊರಗಡೆಯಲ್ಲೂ ತಳಭಾಗದಲ್ಲೂ ಹರಡಿದ್ದ ಪೂಭೆ, ಮಗುವಿನ ಅಂಬೆಗಾಲು ಕೃಷ್ಣ, ಅದರ ಭಾವಗರ್ಭಿತವಾದ ಮಾತು, ಇವೆಲ್ಲಾ ಒಟ್ಟಿಗೆ ಕಲೆತು ನನಗೊಂದು ನವೀನ ಭಾವವನ್ನು ತಂದುವು; ಆ ಸನ್ನಿವೇಶಕ್ಕೆ ಒಂದು ಹೊಸ ಬೆಳಕನ್ನು ಬೀರಿದವು-ಒಂದು ಸೂತಿಕಾ ಗೃಹವನ್ನೂ ಅದರಲ್ಲಿ ದಿವ್ಯ ಶಿಶುವೊಂದರ ಪ್ರಾದುರ್ಭಾವವನ್ನೂ ಕಂಡೆ. ``ಹೌದು, ಕೃಷ್ಣ