ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮

ವೈಲ್ ಮಾಳಿಗೆ ಉತ್ಸವ

ನೇಹಿಗ, ಭವಿಷ್ಯ ಹೇಳುವುದರಲ್ಲಿ ನೀನು ಗಟ್ಟಿಗ. ನಿನ್ನ ನಾಲಗೆಯಲ್ಲಿ ಮತ್ತಿ ಇರಬೇಕು. ನೀನು ಹೇಳಿದಂತೆಯೇ ನಾನು ಈ ದಿನ ಎರಡು ಗಂಟೆ ಅವಧಿಯ ಪ್ರಯಾಣವನ್ನು ಆರು ಗಂಟೆಗೆ ಮುಗಿಸಿದೆ. ಬಸ್ಸಿನಲ್ಲಿ ಕೂತು ಕೂತು ಉಸ್ಸೆಂದೆ ಬುಸ್ಸೆಂದೆ. ಈ ದಿನ ಅಮಾವಾಸ್ಯೆ ಎಂದು ನೀನು ಹೇಳಬೇಡವೆ? ಪುಣ್ಯಕ್ಷೇತ್ರ; ತರ್ಪಣವನ್ನಾದರೂ ಬಿಡಬಹುದಾಗಿತ್ತು. ಅದಕ್ಕೆ ಬದಲು ದಾರಿಯ ಒಂದು ಹೋಟೆಲಿನಲ್ಲಿ ಎಂಜಲು ದೋಸೆ ಗಸಿ ಕಾಫಿ ಕುಡಿದು ಮೈಲಿಗೆಯಾದುದಾಯಿತು. ತಿಂಡಿ ಕೊಟ್ಟವಳು ಹುಡುಗಿ. ಅದೊಂದೇ ಚೆನ್ನು ಆ ಹೋಟೆಲಿನಲ್ಲಿ. ಮನೆ ತಪ್ಪಿದವಳೆಂದು ಕಾಣುತ್ತದೆ, ಪಾಪ. ಆಕೆ ಚೆನ್ನೆಂಬುದು ನನಗೆ ತಿರುಗಿ ಬಸ್ಸಿನಲ್ಲಿ ಕುಳಿತುಕೊಂಡಾಗ ಹೊಳೆಯಿತು ನೋಡು. ಇನ್ನೂ ಸ್ವಲ್ಪ ಹೊತ್ತು ಇದ್ದು ಇನ್ನೆರಡು ದೋಸೆ ತಿನ್ನಲಿಲ್ಲವಲ್ಲಾ ಎಂಬ ಪಶ್ಚಿಮಬುದ್ಧಿಯ ಆತ್ಮಾನುತಾಪದೊಡನೆ ಒಂದು ಗಂಟೆಯ ಕಾಲ ಬಸ್ಸಿನಲ್ಲೆ ಕುಳಿತಿದ್ದೆ. ಆ ಹೋಟೆಲಿನ ಚಾವಡಿಯ ಮೇಲಾದರೂ ಕುಳಿತಿರಬಹುದಾಗಿತ್ತು, ನನ್ನ ಜೊತೆಯ ಪೂಯಾಣಿಕರಂತೆ. ಏನೋ ಒಂದು ತೆರದ ಬಿಗುಮಾನ, ನಾಚಿಕೆ, ಹೊರತನ. ಈ ನಾಚಿಕೆ ಏಕೆ ಎಂದು ನಾನು ಅನೇಕ ಸಲ ನನಗೇ ಪೂಶ್ನೆ ಹಾಕಿಕೊಂಡಿದ್ದೇನೆ. ಈ ದಿನ ಹೀಗೆ ಹೊಳೆಯುತ್ತದೆ-ಪ್ರಪಂಚವೆಲ್ಲಾ ನನ್ನಲ್ಲಿ ಕುತೂಹಲಗೊಂಡಿದೆ ಎಂಬ ಒಂದು ತೆರದ ಪೆಚ್ಚು ತಿಳಿವಳಿಕೆ. ನನ್ನಲ್ಲಿ ಏನೋ ಒಂದು ಅನಘರ್ಯ್ವಾದದ್ದು ಇದೆ, ಅದನ್ನು ಬಚ್ಚಿಟ್ಟುಕೊಳ್ಳುವುದಕ್ಕೆ ಭದ್ರವಾದ ಜಾಗ ಎಲ್ಲೂ ಇಲ್ಲವೆ, ಪೆಟ್ಟಿಗೆ ತೆರೆದೇ ಇದೆಯಲ್ಲಾ, ಎಲ್ಲರಿಗೂ ಇದರಮೇಲೆಯೇ ಕಣ್ಣಲ್ಲವೆ ಎಂದು. ಹುಟ್ಟಿನಿಂದ ಸಾಯುವವರೆಗೂ ಈ ಮೆರವಣಿಗೆ-ಬರುವ ಮೈನೆರೆದ- ಹುಡುಗಿತನ ನನಗೆ ಏಕೆ ತಗಲಿಕೊಂಡಿದೆಯಯ್ಯಾ-ಸರಿ, ಹೀಗೆ ನನ್ನನ್ನೂ ನನ್ನ ಈ ಪ್ರಯಾಣವನ್ನೂ ಬಣ್ಣಿಸುತ್ತಾ ಕುಳಿತುಕೊಂಡರೆ ಈ ಕಾಗದವು ಈ ಪ್ರಯಾಣದಂತೆಯೇ ಆಗುತ್ತದೆ.

ಅಂತು ಮೂರು ಗಂಟೆಯ ಹೊತ್ತಿಗೆ ಊರು ಮುಟ್ಟಿದೆ. ನಾಣಿಗೂ ಬಸ್ಸಿನ ನಿಲ್ದಾಣದಲ್ಲಿ ನಿಂತು ನಿಂತು ಸಾಕಾಗಿ ಹೋಗಿತ್ತು. ಎಂಥ ಮೂರ್ಖ, ಊಟ ಮಾಡದೆ ಕಾದಿದ್ದನಲ್ಲ. ನಾನು ಬೈದುದಕ್ಕೆ ಅಮಾವಾಸ್ಯೆಯ ದಿನ