ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಚಲು ಮರದ ಕೆಳಗೆ

೬೯


``ನಿನ್ನನ್ನು ಅರಸಿಕೊಂಡು ನಾನು ಬರಲಿಲ್ಲ. ನನ್ನನ್ನು ಅರಸಿಕೊಂಡು ನೀನು ಬಂದಿದೀಯೆ. ಆದರೆ ನನಗೆ ಕೆಡುಕನ್ನು ಯೋಚಿಸುತ್ತಿದ್ದೀಯೆ. ನನಗೆ ಯಾರ ಆಶ್ರಯವೂ ಬೇಕಿಲ್ಲ. ನನಗೆ ಇಷ್ಟಬಂದ ಕಡೆ ನಾನು ಬೆಳೆಯುತ್ತೇನೆ. ನನಗೆ ಸರ್ಕಾರದ ಬೆಂಬಲವಿದೆ ಎಂದು ನೀನು ತಿಳಿದುಕೊಂಡಿರಬಹುದು. ಯಾವ ಫಾರೆಸ್ಟು ಡಿಪಾರ್ಟಮೆಂಟ್ ಎಷ್ಟು ಖರ್ಚುಮಾಡಿ ನನ್ನನ್ನು ಹುಟ್ಟುಹಾಕಿ ಬೆಳೆಸಿದೆ? ಬೆರಳು ಮಡಿಸು. ಅಷ್ಟಕ್ಕೂ ಸರಕಾರಕ್ಕೇ ಅಲ್ಲವೆ ನನ್ನ ಬೆಂಬಲ? ನನ್ನ ರಸದಿಂದ ತಾನೆ ನಿಮಗೆ ಜ್ಞಾನ, ಮಿಕ್ಕವರಿಗೆ ಅಜ್ಞಾನ? ನಿಮ್ಮ ಜ್ಞಾನವೇ ಲೇಸೋ, ಅವರ ಅಜ್ಞಾನವೇ ಲೇಸೋ ಯಾರು ಹೇಳಬಲ್ಲರು? ಎರಡೂ ಒಂದೇ ನಾಣ್ಯದ ಎರಡು ಮುಖಗಳು. ತಲೆ ನೀವು, ತಳ ಅವರು. ನಿಮ್ಮಿಬ್ಬರ ಬುದ್ಧಿಯ ಟಂಕಸಾಲಿಗ ನಾನು. ನನ್ನ ವಿಷಯದಲ್ಲಿ ನೀನು ಗೌರವದಿಂದಿರಬೇಕು. ಆದರೆ ಮನುಷ್ಯ ಸ್ವಭಾವವೇ ಹೀಗೆ. ಹಾ-``ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ ಎಂದು ನಿಡುಸುಯ್ಯುತ್ತಾ ಮೌನವಾಯಿತು ಈ ಕೌಶಿಕಕಲ್ಪದ್ರುಮ.

ಬಿಸಿಲ ದಗೆ ಹೆಚ್ಚಿತ್ತು. ಅದನ್ನು ಸ್ಪರ್ಧಿಸುವಂತೆ ಹೊಟ್ಟೆಯಲ್ಲಿ ಹಸಿವು. ಈ ಸ್ಥಿತಿಯಲ್ಲಿ ಬುದ್ಧಿಮಾಂದ್ಯ ಸಹಜ.

ನಾತ್ಯಶ್ನತಸ್ತು ಯೋಗೋಸ್ತಿ

ನಚ್ಯೆಕಾನ್ತಮನಶ್ನತಃ|

ಬುದ್ಧ ದೇವನಿಗೆ ಪ್ರಜ್ಞೆ ಬಂದದ್ದು ಸುಜಾತೆಯು ತಂದಿದ್ದ ಹಾಲನ್ನು ಕುಡಿದ ಮೇಲೆ ತಾನೆ. ನನಗೆ ಬರುವ ಬುತ್ತಿ ಇನ್ನೂ ಬಂದಿಲ್ಲ. ಗೆಳೆಯರು ಮರೆತರೋ ಇಲ್ಲ ದಾರಿತಪ್ಪಿದರೋ ಕಾಣೆ. ಈ ಮರ ಜಾಣಮರ. ಇದರೊಡನೆ ಸಂಭಾಷಣೆ ನಡೆಸುವಷ್ಟು ಚೈತನ್ಯ ನನ್ನಲ್ಲಿ ಇಲ್ಲ. ಸೌಜನ್ಯಕ್ಕೋಸ್ಕರ ಅದು ಆಡುವುದನ್ನೆ ನಾನು ಲಾಲಿಸಬೇಕಾಯಿತು.

``ನಿನ್ನ ಬುದ್ಧಿ ಈಗ ನೆಟ್ಟಗಿಲ್ಲ, ದಿಟ. ನಾನು ಏನು ಮಾಡಲಿ? ಅದು ಯಾವಾಗ ತಾನೆ ನೆಟ್ಟಗಿದೆ? ನಿಮ್ಮ ಜೀವ ಮೂರು ಸ್ಥಾಯಿಗಳಲ್ಲಿ ನಡೆಯುತ್ತಿದೆ-ನಿದ್ರಾ, ಸ್ವಪ್ನ, ಜಾಗೃತಿ. ಈ ಮೂರನ್ನೂ ಒಟ್ಟಿಗೆ ಒಂದೇ ಕಾಲದಲ್ಲಿ ಹೊಂದಿಸಿ ಅನುಭವಿಸಬೇಕೆಂದೇ ನಿಮ್ಮ ಜಾತಿಯ ಸತತ ಪ್ರಯತ್ನ. ಸ್ವಪ್ನ ಜಾಗೃತಿ ಇವುಗಳನ್ನು ಬೆರೆಸಿ ಅನುಭವಿಸುವುದು ಅಷ್ಟು ದುಷ್ಕರವಲ್ಲ. ಇದಕ್ಕೆ ನಿದ್ರೆಯನ್ನು ಬೆರೆಸಿಕೊಳ್ಳುವುದು-ಅದು ರಾಮಕೃಷ್ಣರಂಥ ಮಹಾ ಯೋಗಿಗಳಿಗೆ ಮಾತ್ರ