ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨

ಪು.ತಿ.ನ.ಸಮಗ್ರ


``ಅಲ್ಲಿನ ಸತ್ಯ ಇಲ್ಲಿನ ಬೆರಗು-ಇಲ್ಲಿನ ಸತ್ಯ ಅಲ್ಲಿನ ಬೆರಗು. ಇಕೊ ಇದೇ ಸಮಯಕ್ಕೆ ಸೂರ್ಯ ಈ ಕಡೆ ಕೆಂಪಗೆ ಮುಳುಗುತ್ತಲೂ ಇದ್ದಾನೆ. ಇಲ್ಲಿನ ಪರಿಸ್ಥಿತಿಯೇ ಬೇರೆ. ಇದನ್ನು ವರ್ಣಿಸುವುದು ಆತ್ಮಪ್ರಶಂಸೆ ಆಗುವುದರಿಂದ ನಿನ್ನ ಊಹೆಗೆ ಬಿಟ್ಟಿದ್ದೇನೆ. ಈಗ ಬೆಳಗ್ಗೆಯೊ ಮಧ್ಯಾಹ್ನವೋ ಸಂಜೆಯೋ ಸತ್ಯವಾಗಿ ಹೇಳು ನೋಡೋಣ. ಸೂರ್ಯನನ್ನೇ ಕೇಳೋಣವೇ? ಪಾಪ, ಅವನಿಗೂ ಭ್ರಮೆ. ಏಕೆಂದರೆ, ಆತ ಈ ಎರಡು ಸಂಧ್ಯೆಗಳನ್ನೂ ಎರಡು ಕಂಕುಳಲ್ಲಿಯೂ ಯಾವಾಗಲೂ ಇರುಕಿಕೊಂಡೇ ಇದ್ದಾನೆ, ಅರ್ಧನಾರೀಶ್ವರನಿಗಿಂತ ಒಂದು ಕೈ ಹೆಚ್ಚು ಈತ. ಆದರೆ ಆತನನ್ನು ಕೇಳಿದರೆ `ಇಲ್ಲ-ಹಾಗಂದರೇನು?' ಎಂದೇ ಹೇಳುತ್ತಾನೆ. ತನ್ನ ಮಾಯೆ ತನಗೇ ಗೊತ್ತಿಲ್ಲದ ದೇವರು ಇದು. ಒಂದು ನಿಲುವಿನಲ್ಲಿ ಎಲ್ಲವೂ ಸತ್ಯ. ಇನ್ನೊಂದರಲ್ಲಿ ಎಲ್ಲ ಭ್ರಮೆ. ಅನೇಕ ಭ್ರಮೆಗಳನ್ನು ಒಟ್ಟುಗೂಡಿಸು. ಈ ಸತ್ಯ ಸಮೂಹವೇ ಭ್ರಮೆ ಅಥವಾ ಬೆರಗು ಎನ್ನಿಸಿಕೊಳ್ಳುತ್ತದೆ. ಈ ಭ್ರಮಸಮಷ್ಟಿಯನ್ನು ವ್ಯಷ್ಟಿವ್ಯಷ್ಟಿಯಾಗಿ ದುರ್ಬೀನಿನಲ್ಲಿ ನೋಡುವಂತೆ ನೋಡು-ಆಗ ಒಂದೊಂದೂ ಸತ್ಯವೇ. ನನ್ನ ರಸದಿಂದ ತೇಜಸ್ವಿಯಾಗಿರುವವನ ನಡೆಯನ್ನೂ ನುಡಿಯನ್ನೂ ನಿರುಕಿಸು. ಆತ ಹೇಗೆ ನಡೆಯುತ್ತಾನೋ, ನುಡಿಯುತ್ತಾನೋ, ಅವುಗಳನ್ನೆಲ್ಲಾ ಯಾರೋ ಎಲ್ಲೋ ಅಂತೂ ಮಾಡುತ್ತಲೂ ಇದಾರೆ, ನುಡಿಯುತ್ತಲೂ ಇದ್ದಾರೆ. ಅವನ ಎಲ್ಲಾ ಸ್ಥಿತಿಗೂ ಲೋಕದಲ್ಲಿ ಸತ್ಯ ಪೂತೀಕವನ್ನು ಕಾಣಬಹುದು. ಹೀಗಿರುವಾಗ, ಆತ ಸತ್ಯಸ್ವರೂಪನಲ್ಲದೆ ಮತ್ತೇನು? ಅವನು ತೋರುವುದು ಸತ್ಯದ ಸಮಗ್ರ ದರ್ಶನವನ್ನಲ್ಲವೇ? ಈ ನಿಲುವಿಗೇರಲು ಯಾರು ಬಂiÀÄಸುವುದಿಲ್ಲ? ಬಲ್ಲವನಿಗೆ ಈ ಸಮಗ್ರ ದರ್ಶನದಲ್ಲಿಯೇ ಪ್ರೀತಿ ಮತ್ತು ಉತ್ಸಾಹ. ಯೋಗಿಗೆ ತನ್ನ ತುರೀಯಾವಸ್ಥೆಯಲ್ಲಿ ಈ ಸ್ಥಿತಿ ಮತ್ತು ಈ ದರ್ಶನ ಲಭಿಸುತ್ತದೆ.

ಕರ್ಮಣಬಿಪ್ರವೃತ್ತೋಪಿ ನೈವ ಕಿಂಚಿತ್ ಕರೋತಿ ಸಃ|

ಎನ್ನುವ ಸ್ಥಿತಿ ಅವನದು. ಆದರೆ ಆತ ಸಾಹಸಿ. ಆತನಿಗೆ ತೋಳು ತೀಟೆ ಇದೆ. ಈ ಕಡೆಯಿಂದ ಆ ಕಡೆಗೆ-ಪ್ರತ್ಯಕ್ಷದಿಂದ ಪರೋಕ್ಷಜ್ಞಾನದ ದಡಕ್ಕೆ-ಈಜಿಕೊಂಡು ಹೋಗುತ್ತಾನೆ. ನನ್ನ ರಸಸಿದ್ಧನೂ ಅಷ್ಟೆ. ತೆಪ್ಪವಿರುವಾಗ ಈಜುವ ಸಾಹಸವೇಕೆ? ಪ್ರತ್ಯಕ್ಷ ಬಹು ಅಸಮರ್ಪಕವಾದ ಸ್ಥಿತಿ ಎಂದೇ ನಮ್ಮಿಬ್ಬರದೂ ಮತ ಮತ್ತು ವಾದ. ಆದರೆ ನನ್ನ ರಸಾನುಭವ ಬೇಕು ಎಲ್ಲರಿಗೂ-ರಸ ಬೇಡ. ನಿಮ್ಮಿರವೇ ಹೀಗೆ-ಪುಣ್ಯಸ್ಯ ಫಲ....ಮಾನವಾಃ| ನಾವೇನು ಮಾಡೋಣ.