ಈ ಪುಟವನ್ನು ಪ್ರಕಟಿಸಲಾಗಿದೆ

2

ಸೇತುವೆ

ಹುಟ್ಟಿದ್ದ ನಾಲ್ಕು ಮಕ್ಕಳನ್ನೂ ಕಳೆದುಕೊಂಡಿದ್ದ ಬಡ ಹೆಂಗಸೊಬ್ಬಳು, ಒಳೆ

ಹೋದ ಆ ಯುವತಿಯನ್ನು ತನ್ನ ದೃಷ್ಟಿಯಿಂದ ಹಿಂಬಾಲಿಸಿ, ಹೂಂ ಎಂದು ನಿಟ್ಟುಸಿರುಬಿಟ್ಟಳು.

ಆತ ಇದಾರೋ?

ಇಲ್ದೇನು ಮಾಡ್ತಾರೆ ಪಾಪ! ಹುಡುಗರಿಗೆ ಗಂಜಿ ಬೇಯಿಸಿಯಾದರೂ

ಹಾಕೋದು ಬೇಡ್ವೆ?

ಇಲ್ಲ ಕಣ್ರೀ. ಆತ ಒಲೆ ಹಚ್ಚೇ ಇಲ್ಲ. ಬೆಳಗ್ಗೆ ನಾನೇ ಒಂದಿಷ್ಟು ದೋಸ

ಹುಯ್ದು ಹುಡುಗರಿಗೆ ಕೊಟ್ಟೆ.

ಹಾಗೆ ಹೇಳಿದ ಹೆಂಗಸು ಮೂರು ಮಕ್ಕಳ ತಾಯಿ. ಆಕೆಗೂ ನಾರಾಯಣಣಿಗೂ

ಹೇಳಿಕೊಳ್ಳುವಂತಹ ಸ್ನೇಹವೇನೂ ಇರಲಿಲ್ಲ. ವಾಸ್ತವವಾಗಿ, ಅವರೊಳಗೆ ಒಂದು ಬಗೆಯ ವೈಮನಸ್ಸಿತ್ತು. ನಾರಾಯಣಿಯ ಎಂತು ವರ್ಷದ ಹಿರಿಯ ಮಗ ಮಹಾ ತುಂಟ. ಆತನ ದಾಳಿಯಿಂದ ತ್ನ್ನ ಗುಬ್ಬಚ್ಚಿಗಳನ್ನು ಕಾಪಾಡುವುದು ಆ ಹೆಂಗಸಿನ ಪಾಲಿಗೊಂದು ಸಾಹಸವಾಗಿತ್ತು. ಹೀಗಿದ್ದರೂ, ಮರಣಶಯ್ಯೆಯಲ್ಲಿ ಮಲಗಿದ್ದ ನಾರಾಯಣಿಯ ಮಕ್ಕಳಿಗೆ ಆಕೆ ಈ ದಿನ ತಿನಿಸು ಕೊಟ್ಟಿದ್ದಳು.

ಅದು ಹೆಮ್ಮೆಪಡುವಂತಹ ಔದಾರ್ಯವೆಂದು ಭಾವಿಸಿ ಆಕೆ ಆ ವಿಶಯ ಪ್ರಸ್ತಾ

ಪಿಸಿರಲಿಲ್ಲ. ಹಾಗೆ ಮಾಡಿದುದು ಆಡಿದುದು ಅಸ್ವಾಭಾವಿಕವಾಗಿಯೂ ಇತರರಿಗೆ

ತೋರಲಿಲ್ಲ.

ಸದ್ಗುಣ ಸಂಪನ್ನೆಯಾಗಿರಲಿಲ್ಲ ನಾರಾಯಣಿ_ಮಹಾ ಸಾಧ್ವಿಯಾಗಿರಲಿಲ್ಲ. ಆ

ವಠಾರಕ್ಕೆ ಆಕೆ ಬಂದುದು ಚೊಚ್ಚಲ ಬಾಣಂತಿಯಾಗಿ. ಯುದ್ಧ ನಡೆಯುತ್ತಿದ್ದ ಕಾಲ. ವಿಮಾನ ಕಾರಖಾನೆಯಲ್ಲಿ ಗಂಡನಿಗೆ ಕೆಲಸವಿತ್ತು. ಸ್ವಲ್ಪ ದಿನ ಅವರು, ನಾಲ್ಕು ಜನ ಅಸೂಯೆಪಡುವ ಹಾಗೆಯೇ ಇದ್ದರೆನ್ನಬಹುದು. ಯುದ್ಧ ಮುಗಿಯಿತು. ನಾರಾಯಣಿಯ ಗಂಡ ಕೆಲಸ ಕಳೆದುಕೊಂಡ ಸಹಸ್ರ ಸಹಸ್ರ ಜನರಲ್ಲಿ ಒಬ್ಬನಾದ. ನಿರುದ್ಯೋಗ, ಆ ಬಳಿಕ ಸಣ್ಣ ಪುಟ್ಟ ಕೆಲಸ, ಮತ್ತೆ ನಿರುದ್ಯೋಗ, ಮತ್ತೊಮ್ಮೆ ಎಲ್ಲಾದರೂ ಕೆಲಸ. ಸಾಕಷ್ಟು ಸಂಪಾದನೆಯಿಲ್ಲದೆ ಬಾಳು ಸಂಕಟಮಯವಾಯಿತು. ಹೀಗಿದ್ದರೂ ಮಕ್ಕಳಾಗುವುದು ನಿಲ್ಲಲಿಲ್ಲ. ಈ ಏಳು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು. ಪ್ರತಿಯೊಂದು ಹೆರಿಗೆಯಾದಂತೆ ನಾರಾಯಣಿ ಹೆಚ್ಚು ಹೆಚ್ಚು ಬಡವಾಗುತ್ತ ನಡೆದಳು. ಈ ಸಲ ಬಾಣಂತಿಯಾಗಿ ಒಂದು ವರ್ಷವಾದರೂ ಆಕೆ ಚೇತರಿಸಿಕೊಳ್ಳುವ ಚಿಹ್ನೆ ತೋರಲಿಲ್ಲ ...ಶೀಷೆ ಶೀಷೆ ತುಂಬ ಬಣ್ಣಬಣ್ಣದ ಔಷಧಿ_ಒಂದೆರಡು ಸೂಜಿ ಮದ್ದು ಕೂಡ. ಧರ್ಮಾಸ್ಪತ್ರೆಗೆ ಹತ್ತಾರು ಸಾರಿ ಅಲೆದಾಟ...ಇಷ್ಟೇ ಆಗಿದ್ದರೆ ನಾರಾಯಣಿ 'ಕೆಟ್ಟವಳು' ಎನ್ನಿಸಿಕೊಳ್ಳಬೇಕಾದ್ದಿರಲಿಲ್ಲ. ಆದರೆ ಆ ಏಳು ವರ್ಷಗಳಲ್ಲಿ ನಾರಾಯಣಿ ಏನೋ ಆಗಿ ಹೋಗಿದ್ದಳು. ಆಗಿನ ಮಾತಿನ ಮಲ್ಲಿ, ಸ್ನೇಹಮಯಿ, ಈಗ ಮಹಾ ಮುಂಗೋಪಿ. ನಿಷ್ಕಾರಣವಾಗಿ ರೇಗಿ, ಸಿಕ್ಕವರೊಡನೆಲ್ಲ ಜಗಳ.