ಈ ಪುಟವನ್ನು ಪ್ರಕಟಿಸಲಾಗಿದೆ

ವಾಪಸು ಬರೋದು?'

"ಸಾಯಂಕಾಲ."

ಈ ಹೊಸ ಸಂಸಾರದ ರೀತಿ ನೀತಿಗಳ ವಿಷಯವಾಗಿ ವಠಾರದಲ್ಲಿ ಆ ದಿನವೆಲ್ಲಾ

ಗುಜುಗುಜು ಟೀಕೆ ಟಿಪ್ಪಣಿಗಳಾದುವು.


ಕಾಗದ ಬರೆದಿದ್ದಂತೆ ಜಯರಾಮುವಿನ ತಂದೆ ಆ ತಿಂಗಳ ಕೊನೆಯಲ್ಲಿ ಬಂದರು. ಪುಸ್ತಕ ತುಂಬಿದ್ದ ದೊಡ್ಡ ಪೆಟ್ಟಿಗೆಯೂ ಅವರ ಜತೆಯಲ್ಲೇ ಇತ್ತು. ತಂದೆ ಪ್ರಕಾಶ ಕರಲ್ಲಿಗೆ ಆದನ್ನೊಯ್ದು ಲೆಕ್ಕ ಒಪ್ಪಿಸುವುದರೊಳಗಾಗಿ ಯಾವ ಪುಸ್ತಕಗಳಿವೆ ಎಂದೆಲ್ಲ ನೋಡಿಬಿಡಬೇಕೆಂದು ಜಯರಾಮುಗೆ ಅಪೇಕ್ಷೆಯಾಯಿತು. ರಾಧೆಯಂತೂ ಕಾದಂಬ ರಿಗಳ ಹುಚ್ಚಿ. ಅಣ್ಣ ತಂಗಿ ಇಬ್ಬರೂ ಸೇರಿ ಪೆಟ್ಟಿಗೆಯನ್ನು ಪರೀಕ್ಷಿಸಲು ಅಪ್ಪನ ಸಮ್ಮತಿ ಕೇಳಿದರು. ಮನೆಯಲ್ಲೆ ಇದ್ದರೂ ಇಲ್ಲದವರಂತೆ ವರ್ತಿಸುತ್ತಿದ್ದ ತಂದೆಗೆ, ಮಕ್ಕಳು ಹಾಗೆಲ್ಲ ಸಮ್ಮತಿ ಕೇಳುವುದು ಅಗತ್ಯವೆಂದೇ ತೋರಲಿಲ್ಲ. ಆದರೊ ಆ ಮಕ್ಕಳು ಚಿಕ್ಕವರಿದ್ದಾಗ, ಪುಸ್ತಕವೆಳೆದುಕೊಂಡು ಕಿತ್ತಾಡದಂತೆ ಎಚ್ಚರ ವಹಿಸಿ ರೊಢಿ

ಯಾಗಿದ್ದ ತಂದೆ ಈಗಲೂ ಅದೇ ಸ್ವರದಲ್ಲಿ ಅಂದರು:

"ಪುಸ್ತಕಗಳನ್ನು ಹುಷಾರಾಗಿ ಹಿಡೀರೀಪ್ಪಾ...ಕೊಳೆಯಾದರೆ ನನ್ನ ತಲೆಗೇ ಕಟ್ತಾರೆ. ಈಗಾಗ್ಲೇ ಕೊಂಡುಕೊಳ್ಳೋರು ಮುಟ್ಟಿ ಮುಟ್ಟಿ ಎಷ್ಟೋ ಪುಸ್ತಕ ಜಜಿ

ಬಿಜಿಯಾಗಿವೆ."

ತಾವು ಎಚ್ಚರದಿಂದ ಇರದೇ ಇದ್ದರೆ ಸಂಪಾದನೆಗೆ ಕತ್ತರಿ ಬೀಳುವ ಪ್ರಮೇಯ. ಜಯರಾಮುಗೆ ಅದೆಲ್ಲ ಈಗ ಅರ್ಥವಾಗುತ್ತಿತ್ತು. ಹಿಂದಿನಿಂದಲೂ ಆತ ಪುಸ್ತಕಗಳನ್ನು ಕೂಡಿಡುತ್ತಿದ್ದ. ಹಿಂದೆ ಹೊಸ ಹೊಸ ಪುಸ್ತಕ ಹೊತ್ತು ಮಾರಾಟಕ್ಕೆಂದು ತಂದೆ ಹೊರಟಾಗ, ಭಾರಿ ಬೆಲೆಯ ಕೆಲವನ್ನು ಬಿಟ್ಟು ಉಳಿದ ಪುಸ್ತಕಗಳನ್ನೆಲ್ಲ ಒಂದೊಂದು ಪ್ರತಿ ಜಯರಾಮು ಎತ್ತಿ ಇಡುತ್ತಿದ್ದ. ಆಗ, ಆದರಿಂದ ತಮಗೇ ನಷ್ಟವಾಗುವುದೆಂದು ಆತನಿಗೆ ಗೊತ್ತಿರಲಿಲ್ಲ. ಕ್ರಮೇಣ "ಜನ ಪುಸ್ತಕ ಕೊಳ್ಳೋದೇ ಕಡಿಮೆ ಯಾಗ್ಬಿಟ್ಟಿದೆ" ಎಂಬ ಮಾತು ಅಪ್ಪನ ಬಾಯಿಯಿಂದ ಬರುತ್ತಿತ್ತು. ಬೇಸರದ ಆ ಧ್ವನಿ ಕೇಳಿದಾಗ ಜಯರಾಮುಗೆ ತಾನು ಆ ಪುಸ್ತಕಗಳನ್ನು ಮುಟ್ಟುವುದೇ ತಪ್ಪು ಎನಿಸುತ್ತಿತ್ತು. ಒಮ್ಮೊಮ್ಮೆ ತನಗೆ ಪ್ರೀತಿಪಾತ್ರವೆನಿಸಿದ ಯಾವುದಾದರೂ ಪುಸ್ತಕ ವನ್ನು ಕಂಡು ಆತ "ಅಪ್ಪಾ, ಇದೊಂದನ್ನ ಇಟ್ಕೊಳ್ಲೇ ಅಪ್ಪ ?" ಎಂದರೆ,ತಂದೆ,"ಆ ಪ್ರತಿ ಬೇಡವೋ. ಕೊಳೆಯಾಗಿರೋದು ತಗೊಳೋ" ಎನ್ನುತ್ತಿದ್ದರು. ಆ ಬಳಿಕ