ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೀಠಿಕೆ ಅಭಿಧೇಯಂ = ಅರ್ಧ; ಶಕ್ಯಾನುಷ್ಠಾನಂ= ಆ ಅರ್ಥವನ್ನು ಸಾಧಿಸಲಕ್ಕೆ ಉದ್ಯೋಗ; ನಿಜ = ತನ್ನ ; ಇಷ್ಟ ಸಿದ್ಧಿಗಳ್ = ಇಷ್ಟಾರ್ಥ ಸಿದ್ಧಿಗಳ; ನೆಟ್ಟನೆ = ವ್ಯಕ್ತವಾಗಿ; ನೆಲಸಿ = ನೆಲೆ ಗೊಂಡು; ನಿಂದ ಕಾರಣದೆ = ಇರ್ಪ ಕಾರಣದಿಂದ, ಶಬ್ದಮಣಿದರ್ಪಣಮಂ = ಶಬ್ದಮಣಿ ದರ್ಪಣವೆಂಬ ಶಾಸ್ತ್ರ ಮಂ; ಜನಂ = ವಿದ್ವಜ್ಜನಂ; ಅಂಗೀಕರಿಪುದು = ಸ್ವೀಕರಿಸುವುದು. ವೃತ್ತಿ-ಸಂಬಂಧವೆಂದು ಪೊರ್ದುಗೆ, ಅಭಿಧೇಯಮೆಂದರ್ಥ೦, ಶಕ್ಕಾ ನುಷ್ಠಾನಮಂದಾ ಪದಾರ್ಥಮಂ ಸಾಧಿಸಲ್ ತಕ್ಕುದ್ಯೋಗಂ, ಇಷ್ಟಸಿದ್ದಿ ಯೆಂದದ ಫಲಪ್ರಾಪ್ತಿ, ಇವು ಶಬ್ದಮಣಿದರ್ಪಣದೊಳ್ ನೆಲೆಗೊಂಡಿರ್ದು ದಂ ಸ್ವೀಕರಿಸದ ಲೋಕಮಿಲ್ಲ. ವ್ಯಾಕರಣ ಪ್ರಾರಂಭ Commencement of Grammar. ಮೂಲಂ. ಕ್ರಮದಿಂದ ಸಂಧಿ ನಾಮಂ | This work has ಸಮಾಸಮಾ ತದ್ಧಿತಂ ಮೊದಲೆಲ್ಲಾ ಖ್ಯಾತಂ || 8 Chapters. ಪ್ರಮುದಿತ ಧಾತುಮಪಭ್ರಂ- | ಶಮವಯಂ ಸಂಧಿ ಶಬ್ದಮಣಿದರ್ಪಣದೊಳ್ || ೮ || ಪದಚ್ಛೇದಂ-ಕ್ರಮದಿಂದ ಸಂಧಿ, ನಾಮ, ಸಮಾಸಂ, ಆ ತದ್ದಿ ತಂ, ಪೊದಲ್ಲಿ ಆಖ್ಯಾತಂ, ಪ್ರಮುದಿತ ಧಾತುಂ, ಅವಭ್ರ೦ಶಂ, ಅವ್ಯಯಂ-ಸಂಧಿ ಶಬ್ದಮಣಿದರ್ಪಣದೊಳ, ಅನ್ವಯಂ-ಶಬ್ದ ಮಣಿದರ್ಪಣದೊಳ ಕ್ರಮದಿಂದ ಸಂಧಿ, ನಾಮ, ಸಮಾಸ, ಆ ತದ್ದಿ ರ್ತ, ಪೊದಾ ಖ್ಯಾತಂ, ಪ್ರಮುದಿತಧಾತು, ಅವಭ್ರಂಶ, ಅವ್ಯಯಂ– ಸಂಧಿ, ಟೀಕು. ಶಬ್ದಮಣಿದರ್ಪಣದೊಳ್ = ಶಬ್ದಮಣಿದರ್ಪಣದಲ್ಲಿ ; ಕ್ರಮದಿಂದ = ತರುವಾ ಯಿಂದ; ಸಂಧಿ=ಸಂಧಿಪ್ರಕರಣವೆಂದು; ನಾಮ=ನಾಮಪ್ರಕರಣವೆಂದು; ಸಮಾಸc= ಸಮಾಸಪ್ರಕರಣವೆಂದು; ಆ ತದ್ಧಿ ತಂ=ಆ ಪ್ರಸಿದ್ದವಾದ ತದ್ಧಿತಪ್ರಕರಣವೆಂದು; ಪೊದಟ್ಟಿ= ಪ್ರಸಿದ್ಧವಡೆದ; ಆಖ್ಯಾತc=ಆಖ್ಯಾತಪ್ರಕರಣವೆಂದು; ಪ್ರಮುದಿತಧಾತುಂ = ವಿಶೇಷವಾಗಿ ಸಂತೋಷಿಸಲ್ಪಟ್ಟ ಧಾತುವ್ರಕರಣವೆಂದು; ಆದಭ್ರಂಶಂ = ಅಪಭ್ರಂಶಪ್ರಕರಣವೆಂದು; ಅನ್ಯ ಯಃ = ಅವ್ಯಯಪ್ರಕರಣವೆಂದು; ಸಾಧಿ= ಸಂಧಿಗಳೆ೦ಟು.