ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉಪೋದ್ಘಾತ. ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿ ಬರೆಯಲ್ಪಟ್ಟ ಗ್ರಂಥಗಳಲ್ಲಿ ನೃಪತುಂಗನ ಕವಿರಾಜಮಾರ್ಗವೇ ಬಹಳ ಪುರಾತನ ಗ್ರಂಥವೆಂಬುದಾಗಿ ಇದುವರೆಗೆ ತಿಳಿಯ ಬಂದಿದೆ. ನೃಪತುಂಗನ ತರುವಾಯ ಕನ್ನಡದಲ್ಲಿ ಪ್ರಸಿದ್ದಿ ಪಡೆದ ವೈಯಾಕರಣ ರಲ್ಲಿ ನಾಗವರ್ಮ, ಕೇಶಿರಾಜ, ಭಟ್ಟಾಕಳಂಕದೇವ ಎಂಬಿವರೇ ಶ್ರೇಷ್ಠರು. ಈ ಕೇಶಿರಾಜನ ಶಬ್ದಮಣಿದರ್ಪಣವನ್ನು ಬರೆದನು. ಕೇಶಿರಾಜನನ್ನು ಕುರಿತು ಕನ್ನಡ ಕವಿಚರಿತೆಯಲ್ಲಿ ಹೀಗೆ ಹೇಳಿದೆ:- ಈತನು ಜೈನಮತದವನು. ಸೂಕ್ತಿಸುಧಾರ್ಣವವನ್ನು ಒರೆದ ಮಲ್ಲಿಕಾರ್ಜುನನ ಮಗನು; ಹೊಯ್ಸಳ ನಾರಸಿಂಹನಲ್ಲಿ ಕಟಕೋಪಾಧ್ಯಾಯನಾಗಿದ್ದ ಕವಿಸುಮನೋಬಾ ಣನ ದೌಹಿತ್ರನು; ಜನ್ನನ ಸೋದರಳಿಯನು. ಇವನ ತಂದೆ ೧೨೪೩ರಿಂದ ೧೨೫೪ರ ವರೆಗೆ ಹೊಯ್ಸಳ ಸೋಮೇಶ್ವರನ ಕಾಲದಲ್ಲಿ ಇದ್ದುದರಿಂದ, ಕೇಶಿ ರಾಜನು ಸುಮಾರು ೧೨೬೦ರಲ್ಲಿದ್ದಿರಬಹುದು.” ಕೇಶಿರಾಜನು ನಾಗವರ್ಮನಿಗಿಂತ ಈಚಿನವನಾಗಿದ್ದು ತನ್ನ ಗ್ರಂಥವನ್ನು ನಾಗವರ್ಮನ ಶಬ್ದ ಸ್ಮತಿ, ಭಾಷಾಭೂಷಣ ಎಂಬ ಕೃತಿಗಳನ್ನು ಅವಲಂಬಿಸಿ ಬರೆದನು, ಆದರೂ ಕನ್ನಡ ವ್ಯಾಕರಣಶಾಸ್ತ್ರವನ್ನು ಯಾರೊಬ್ಬರೂ ಇವನಿ ಗಿಂತ ಮುಂದಿನವರಾಗಲಿ ಹಿಂದಿನವರಾಗಲಿ ಇವನಷ್ಟು ವಿಸ್ತಾರವಾಗಿ ಪ್ರತಿ ಪಾದಿಸಿಲ್ಲ. - ಕೇಶಿರಾಜನ ಶಬ್ದ ಮಣಿದರ್ಪಣಕ್ಕೆ ಟೀಕೆಯನ್ನು ಬರೆದವನ ಹೆಸರು ನಿಟ್ಟರ ನಂಜಯ, ಮೂಲಗ್ರಂಥವನ್ನೂ ಟೀಕೆಯನ್ನೂ ಘನ ಎಫ್. ಕಿಟ್ಟೆಲ್ ಎಂಬವರು ಪರಿಷ್ಕರಿಸಿ ಪ್ರಕಾಶಪಡಿಸಿದರು, ಘನ ಕಿಟ್ಟಿಲು ಪ್ರಚುರಗೊಳಿಸಿದ ಮೂಲಗ್ರಂಥದ ಮೂರನೆಯ ಆವೃತ್ತಿಯೇ ಈ ಪುಸ್ತಕವ. ಕೇಶಿರಾಜನ ಸೂತ್ರಗಳಿಗೆ ಮೂಲವಾಗಿರುವ ನಾಗವರ್ಮನ ಪದ್ಯಗಳನ್ನೂ ಶ್ಲೋಕಗಳನ್ನೂ ಈ ಆವೃತ್ತಿಯಲ್ಲಿ ಕೊಟ್ಟಿರುತ್ತೇನೆ; ಸೂತ್ರಗಳನ್ನು ಉದಾಹರಿಸುವ ಪದ್ಯಭಾಗ ಗಳಿಗೆ ಒರಸೆಯಾಗಿ ಸಂಖ್ಯೆ ಹಾಕಿರುತ್ತೇನೆ. ಕೇಶಿರಾಜನು ತನ್ನ ಸೂತ್ರಗಳ ಉದಾಹರಣೆಗಳಿಗಾಗಿ ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಶ್ರೀವಿಜಯ, ರನ್ನ, ಹೊನ್ನ, ಪಂಪ, ಸುಜನೋತ್ತಂಸ, ನಾಗ 1 ) A