ಈ ಪುಟವನ್ನು ಪರಿಶೀಲಿಸಲಾಗಿದೆ

________________

12

ಧಾರಾಳವಾಗಿ ಉಪಚರಿಸಿದರು. ಅವಳು ಮಾತ್ರ ಒಂದನ್ನೂ ಒಲ್ಲದೆ, ಪ್ರತಿ ಸಿರಿಗೂ ಹಾ, ರಾಮ! ಹಾ, ರಾಮ!' ಎಂದು ಧ್ಯಾನ ಮಾಡುತ್ತಲೇ ಇದ್ದಳು, ನಂದಿಗ್ರಾಮದಲ್ಲಿ ಭರತನು ಸನ್ಯಾಸವನ್ನು ವಹಿಸಿಕೊಂಡು ರಾಜ ಪುತಿನಿಧಿಯಾಗಿ, ಒಂದು ಕೈಯಿಂದ ಅಪ್ಪಣೆಕೊಡುತ್ತಲೂ ಮತ್ತೊಂದು ಕೈಯಿಂದ ಜಪಮಾಲೆಯ ಮಣಿಗಳನ್ನು ಎಣಿಸುತ್ತಲೂ, ' ಸೀತಾರಾಮು' ಸೀತಾರಾಮ' ಎನ್ನುತ್ತ, ಆ ಹದಿನಾಲ್ಕು ವರ್ಷಗಳ ಅವಧಿಯು ಎಂದಿಗೆ ಕೊನೆಗಾಣುವುದೊ ಎಂದೇ ಹಂಬಲಿಸಿ, ಕಾದು ಇದ್ದನು.

೪. ಕಿಂಧಾಕಾಂಡ

ಇದಿರಿಗೆ ಕಾಣುತಿದ್ದ ಋಷ್ಯಮೂಕ ಪರ್ವತದಲ್ಲಿ ಕಪಿಧ್ವಜರಾದ ವಾನರ ರೆಷ್ಟೋ ಮಂದಿ ಕುಳಿತುಕೊಂಡು, ನಾನಾ ಮಾತುಕಥೆ ಬೆಳೆಸುತ್ತಿದ್ದರು. ವಾನರವೀರರು ಕೆಲವು ಚಿಕ್ಕ ಚಿನ್ನದ ಆಭರಣಗಳನ್ನು ತೋರಿಸಿ, ಪರಾಂಬರಿಸಿ, ' ಅವೆಲ್ಲಿಯುವು?' ಎನ್ನುತಿದ್ದರು. ಅಂತಹವನ್ನು ಅವರೆಂದೂ ಮೊದಲು ನೋಡಿರಲಿಲ್ಲ, ಸುಗ್ರೀವನೆ ಅವರಿಗೆ ನಾಯಕನು, ಸುಗ್ರೀವನು ಸಭೆಗೆ ಬಂದು ದನ್ನು ದೂರದಿಂದ ರಾಮಲಕ್ಷ್ಮಣರೂ, ಇಬ್ಬರು ಮನುಷ್ಯರು ಬಂದುದನ್ನು ಸುಗ್ರೀವನ, ಒಂದೇ ಕಾಲದಲ್ಲಿ ನೋಡಿದರು. ತಮಗೆ ಬೇಕಾದ ಸುಗ್ರಿವನೆ ಇದಿರಾಗಿದ್ದರೂ, ಇವರಿಗೆ ಅವನ ಪರಿಚಯ ತಿಳಿಯಲಿಲ್ಲ; ಇವರು ಯಾರೆಂದು ಅವನಿಗೆ ತಿಳಿಯಲಿಲ್ಲ. ಇವರನ್ನು ಕಂಡು ಅವನು ಬೆದರಿದನು. ಧನುರ್ಧಾರಿಯರಾದ ಇಬ್ಬರು ವೀರ ರಾಜಪುತ್ರರು ತನ್ನ ಕಡೆಗೆ ಏತಕ್ಕೆ ತಾನೆ ಬರುವರು? ಅವರ ಆಕಾರ, ರಾಜಲಕ್ಷಣ, ವೀರಲಕ್ಷಣ ಮೊವ ಲಾದುವನ್ನು ಕಂಡು, ಸುಗ್ರೀವನು ಇವರಾರೆಂದು ತಿಳಿದು ಬರಲು, ಅಂಜನಾದೇವಿಗೆ ಮಗನಾದ ಹನುಮಂತನನ್ನು ಕಳುಹಿದನು. ಹನು ಮಂತನು ಬುದ್ದಿಶಾಲಿ, ವಿವೇಕಿ, ಅವನು ಬ್ರಾಹ್ಮಣವಟುವಿನಂತೆ ಇವರನ್ನು