ಈ ಪುಟವನ್ನು ಪರಿಶೀಲಿಸಲಾಗಿದೆ

________________

56

ತಾರೆಯ, ಪತಿಯನ್ನು ಕುರಿತು, ಸುಗ್ರೀವನಲ್ಲಿಗೆ ರಾಮಲಕ್ಷ್ಮಣರೆಂಬ ಸಾಹಸಿಗಳು ಬಂದಿರುವರೆಂದು ನಾನು ಅಂಗದನಿಂದ ಈಗಲೆ ಕೇಳಿರುವೆನು. ಅವರು ಸುಗ್ರೀವನೊಡನೆ ಸಖ್ಯವನ್ನು ಬೆಳಸಿರುವರು. ಇಷ್ಟರಲ್ಲೆ ಪಲಾಯನ ಮಾಡಿದ ಸುಗ್ರೀವನು ಪುನಃ ಯುದ್ಧಕ್ಕೆ ಬಂದನೆಂದರೇನು? ಅವನಿಗೆ ಜಯವು ನಿಶ್ಚಿತವಾಗಿದೆ. ಅದು ಕಾರಣ ಸುಗ್ರೀವನೊಡನೆ ಸಂಧಿಯಾದರೆ ಉತ್ತಮವಲ್ಲವೆ? ಹಾಗಾಗಲೆಂದು ಬೇಡುವೆನು' ಎಂದು ಕಾಲಿಗೆರಗಿ ನುಡಿದಳು, ವಾಲಿಯು ಮಾತ್ರ ಇದನ್ನೊಪ್ಪಿಕೊಳ್ಳದೆ, ಸುಗ್ರೀವನೊಡನೆ ಯುದ್ಧವನ್ನೆ ಮಾಡಿದನು. ಯುದ್ಧವು ಬಲವಾಗಿ ನಡೆವುದರೊಳಗಾಗಿಯೆ, ಬಾಣವೊಂದು ವನಮಧ್ಯದಿಂದ ಬಂದು ವಾಲಿಯನ್ನು ಗಾಯಪಡಿಸಿ ಅವನನ್ನು ಕೆಡೆಬೀಳಿಸಿತು. ಅವನು ಚೀತ್ಕರಿಸಿದನು, ತಾರೆಯ ಮಾತು ನಿಜವಾದುದೆಂದು ಅವನು ಆಗ ತಿಳಿದನು, ಇನ್ನಷ್ಟರೊಳಗೆ ರಾಮನೂ ಅತ್ತ ಬಂದನು, “ ನಿನ್ನ ವಿಷಯವಾಗಿ ನಾನು ಮೊದಲೇ ತಿಳಿದಿದ್ದೆನು. ಆದರೆ ಕೃತಿಯವೀರನಾದ ನೀನು ಹೀಗೆ ಮರೆಯಲ್ಲಿ೦ದ ಬಾಣವನ್ನು ಹೂಡಿ, ನನ್ನನ್ನು ಕೊಲ್ಲು ವೆಯೆಂದು ನಾನು ಭಾವಿಸಿರಲಿಲ್ಲ. ಆದರೆ ಎಂತಹ ವೀರಧರ್ಮವನ್ನು ಮೆರೆಯಿಸಿದೆ ! ನನ್ನನ್ನು ಕೊಲ್ಲಿಸಲು ನಿನ್ನನ್ನು ಜತೆಗೆ ಕರೆತಂದ ನನ್ನ ತಮ್ಮನಾಣೆ! ತನ್ನ ಕೈವಿಡಿದ ಅಬಲೆಯನ್ನು ಕಾಪಾಡಲಾರದೆ ಕಳೆದುಕೊಂಡು ಇತ್ತ ಬಂದಿರುವ ವೀರನೆ ! ಅರಸುಗಳು ಬೇಟೆಯಾಡುವರಾದರೂ ಮೃಗಮಾಂಸವನ್ನುಣ್ಣು ವರಾದರೂ ವಾನರ ಮಾಂಸಕ್ಕಾಗಿ ಜೊಲ್ಲು ಸುರಿಸುವ ರಾಜರನ್ನು ನಾನು ಕಂಡುದಿಲ್ಲ. ತಾನೂ ವೀರನು, ಇವನ ವೀರತ್ವವನ್ನು ನೋಡೋಣವೆಂದು ಹಂತಕ್ಕಾಗಿ ಬಂದೆಯಾದರೆ, ಧರ್ಮಯುದ್ಧ ಪ್ರಕಾರವಾಗಿ ಸಮ್ಮುಖವಾಗಿರದೆ, ತಲೆಮರೆಸಿ ಬಾಣಬಿಟ್ಟು ದೇಕೆ ! ನಾನು ನಿನ್ನನ್ನು ಕೆಣಕಿದವನೇ ಅಲ್ಲ, ನೀನು ಸೂರ್ಯವಂಶದಲ್ಲಿ ಹುಟ್ಟಿದ ಯಾವ ಅರಸುಗಳ ಸಲ್ಲಕ್ಷಣಗಳನ್ನೂ ಉಳ್ಳವ ನಲ್ಲವಲ್ಲ! ತಾನು ದಶರಥನ ಮಗನೆಂದುಕೊಳುವೆ ಏತಕ್ಕೆ? ನೋಡಿದರೆ, ಸನ್ಯಾಸಿವೇಷವನ್ನು ಧರಿಸಿಕೊಂಡಿರುವೆ; ಈ ನಿನ್ನ ವೇಷವಾದರೂ, ನೀನು ಕುಲಕಲಂಕತೆಯನ್ನು ಸೂಚಿಸುವಂತೆ, ಕಪಟವೇಷವಲ್ಲವಷ್ಟೆ ! ಹಸರು ರಾಮನೆಂದಾದರೂ, ನಡತೆಯು ರಮಣೀಯವಲ್ಲ; ನಿನಗೆ ಇಂತಹ ತಪ್ಪು