ಈ ಪುಟವನ್ನು ಪರಿಶೀಲಿಸಲಾಗಿದೆ

________________

57

ಹೆಸರನ್ನಿಟ್ಟ ಅವರಾರು? ಸುಗ್ರೀವನು ನಿನಗೆ ಗೆಳೆಯನಾಗುವುದು ಹೆಚ್ಚಿನ ದಲ್ಲ; ಇಬ್ಬರೂ ತಮ್ಮ ಹೆಂಡಿರನ್ನು ಕಾಪಾಡಲಾರದವರು; ಆದರೆ ರಾವಣ ನನ್ನು ದಂಡಿಸಬೇಕೆಂದು ಈ ಮಿತ್ರತ್ವವೆ? ನನಗೆ ತಿಳಿಸಿದ್ದರೆ, ಹಿಂದೆ ನನ್ನ ಬಾಲಕ್ಕೆ ತೂಗಿಸಿ ಬಿಗಿದುತಂದ ಆ ರಾವಣನನ್ನು, ನೀನು ನಿನ್ನ ಕಥೆ ತಿಳಿಸಿ ಮುಗಿಸುವುದರೊಳಗೆ ನಾನಿತ್ತ ತಂದೊಪ್ಪಿಸುತ್ತಿರಲಿಲ್ಲವೆ ! ನನ್ನನ್ನು ಕೊಲ್ಲು ವೆಯೇಕೆ? ರವಿಕುಲದ ವೀರನಾದರೆ ಉತ್ತರಕೊಡು ” ಎಂದು ಮೂರ್ಛಿ ತನಾಗುವ ವಾಲಿಯು ಅವನನ್ನು ಮೂದಲಿಸಿದನು.

ರಾಮನು ' ವಾನರವೀರನೆ! ಧರ್ನು ತತ್ವವನ್ನು ನೀನಷ್ಟು ಚೆನ್ನಾಗಿ ತಿಳಿದಿರುವೆಯಂತೆ! ಬಾಹುಬಲದಿಂದ ಮದಾಂಧನಾಗಿ, ನಿರ್ದೋಷಿಯಾದ ತಮ್ಮನನ್ನು ಊರಹೊರಗಟ್ಟಿ, ಅವನ ಧರ್ಮಪತ್ನಿಯನ್ನು ಬಲಪೂರ್ವಕ ವಾಗಿ ನಿನ್ನ ಅಂತಃಪುರದಲ್ಲಿ ಸೆರೆಯಿಟ್ಟಿರುವೆ, ನಿನ್ನಂತಹ ಮಹಾ ಪಾಪಿಗಳು ಇಷ್ಟು ದಿನ ಬದುಕಿದ್ದು ದೇ ಅನ್ಯಾಯವು, ನಿನ್ನಂತಹದೊಡನೆ ಧರ್ಮ ಯುದ್ಧವೆ, ಸುರಂಗವೆ? ದುಷ್ಟರನ್ನು ಕೊಲ್ಲುವುದೇ ಕ್ಷತ್ರಿಯ ರಾದ ನನ್ನ ಧರ್ಮವು, ದುಷ್ಟ ಪಶುಗಳನ್ನು ಕೊಲ್ಲಬೇಕಾದರೆ, ಅವುಗಳನ್ನು ಯುದ್ಧಕ್ಕೆ ಬನ್ನಿರೆಂದು ಕರೆದು ಸಮರಂಗದಲ್ಲಿ ನಿಂದು ಕೊಲ್ಲುವುದುಂಟೇ? ನೀನು ಮಾಡಿದ ಪಾಪವು ನಿನ್ನನ್ನು ಪಶುವೆಂದೇ ಮಾಡಿಟ್ಟಿರುವಾಗ, ಪಶುವನ್ನು ಕೊಲ್ಲುವಂತೆ ನಿನ್ನನ್ನು ಕೊಂದಿರುವೆನು, ನಿನ್ನ ಪಾಪನೆ ನಿನ್ನನ್ನು ಕೊಂದಿತಲ್ಲದೆ, ನಾನು ನಿನ್ನ ಇಂತಹ ಮರಣಕ್ಕೆ ಕಾರಣನಲ್ಲ' ಎಂದು ಹೇಳಲು, ವಾಲಿಯು ಒಂದೂ ಉತ್ತರವಿಲ್ಲದೆ ರಾಮುವಾಕ್ಯಗಳಿಗೆ ಸೋತು, ವಿವೇಕಕ್ಕೆ ಸೋತು, ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಗೊಂಡನು. ಶ್ರೀರಾಮನನ್ನು ಮೂದಲಿಸಿದುದಕ್ಕೆ ಕ್ಷಮೆ ಬೇಡಿಕೊಂಡನು. ತಮ್ಮನನ್ನು ಕರೆದು ತಾನು ಆತನಿಗೆ ಮಾಡಿದ ವಿರೋಧ ಅಪರಾಧಗಳನ್ನು ಮರೆಯಬೇಕೆಂದನ, ಅಂಗದನಿಗೆ ಆಶ್ರಯ ಕೊಡಬೇಕಾಗಿಯೂ, ತಾರೆಯನ್ನು ಪರಿಗ್ರಹಿಸಬೇಕಾಗಿಯೂ ಸುಗ್ರೀವನೊಪ್ಪುವಂತೆ ಶ್ರೀರಾಮನು ಬೋಧಿಸಬೇಕೆಂದು ಪ್ರಾರ್ಥಿಸುತ್ತ ವಾಲಿಯು ಪ್ರಾಣ ಬಿಟ್ಟನು. ವಾಲಿಯ ಬಂಧುಬಳಗದವರೆಲ್ಲರ ದುಃಖವನ್ನು ರಾಮನು ಶಾಂತಗೊಳಿಸಿದನು, ಸುಗ್ರೀವನೂ ಅತ್ತುಕೊಂಡನು. ' ಇದು ಅತ್ತು ಕೊಳ್ಳುವ ಸಮಯವಲ್ಲ.