ಈ ಪುಟವನ್ನು ಪರಿಶೀಲಿಸಲಾಗಿದೆ

________________

58 

ಯಥಾವಿಧಿಯಾಗಿ ವಾಲಿಗೆ ಅಗ್ನಿ ಸಂಸ್ಕಾರವನ್ನು ಮಾಡುವನಾಗು, ಮುಂದೆ, ನೀನೆ ರಾಜನಾಗಿ ಕಿಕ್ಕಿಂಧೆಯಲ್ಲಿ ರಾಜ್ಯಭಾರವನ್ನು ನಡೆಸು, ವಾಲೀಪುತ್ರನಾದ ಅಂಗದನೆ ಯುವರಾಜನಾಗಲಿ!' ಎಂದು ರಾಮನು ಸುಗ್ರೀವನಿಗೆ ಆಜ್ಞಾಪಿಸಿದನು,

ಸುಗ್ರೀವನು ರಾಮನ ಅಪ್ಪಣೆಯಂತೆ ಎಲ್ಲವನ್ನೂ ಮಾಡಿದನು. ಬಳಿಕ ಒಂದು ದಿನ, ' ಮುತ್ತುರೆ?, ಇನ್ನು ಮಳೆಗಾಲವು ಸವಿಾಪಿಸಿರುವುದು, ಮಳೆಯ ದಿನಗಳು ಮುಗಿವಪರ್ಯಂತವೂ ನೀವು ಇಲ್ಲೇ ಇರತಕ್ಕುದಾಗಿದೆ. ನಾನು ಎಲ್ಲ ಪರ್ವತಗಳಲ್ಲೂ ವನಗಳಲ್ಲೂ ವಾಸಮಾಡಿರುವ ವಾನರರಿಗೂ ಭಲಕರಿಗೂ ಈ ಪುರಕ್ಕೆ ಬರುವ ಹಾಗೆ ಕರೆಯಕಳುಹುವೆನು. ಅವರೆ ಲ್ಲರೂ ಇಲ್ಲಿಗೆ ಬರಲಿ!' ಅನಂತರ ಕೂಡಲೆ ಸೀತಾದೇವಿಯನ್ನು ರಾವಣನಿಂದ ತರುವುದಕ್ಕಾಗಿ ನಾವೆಲ್ಲರೂ ಹೊರಡುವೆವು.' ಎಂದು ಸುಗ್ರೀವನು ಹೇಳಿದನು, * ನಾನು ತಂದೆಯ ಸತ್ಯವಾಕ್ಯವನ್ನು ಪರಿಪಾಲಿಸುವುದಕ್ಕಾಗಿ ವನವಾಸವನ್ನು ಮಾಡಲು ಬಂದೆನು. ಅದುಕಾರಣ ನಿನ್ನ ಈ ನಗರದಲ್ಲಿ ಇರಲಾರೆನು ಆ ವನದಲ್ಲಿ ವಾಸಮಾಡುವೆನು. ಇವೇ ಕೆಲವು ತಿಂಗಳುಗಳಲ್ಲಿ ಸೀತೆ ಯನ್ನು ತರುವುದಕ್ಕಾಗಿ ಬೇಕಾಗಿರುವ ಎಲ್ಲ ಸನ್ನಾಹವನ್ನೂ ನೀನು ಸಿದ್ದ ಗೊಳಿಸುವನಾಗು' ಎಂದು ರಾಮನೆನ್ನಲು, ಸುಗ್ರೀವನು ರಾಮುವಾಕ್ಯವನ್ನು ಶಿರಸಾವಹಿಸಿಕೊಂಡು ತನ್ನ ರಾಜಧಾನಿಗೆ ತೆರಳಿದನು, ಸುಗ್ರೀವನ ಅಪ್ಪಣೆಯಂತ ವಾನರರೂ ಭಲ್ಯಕರೂ ದಿನೇ ದಿನೇ ಅಲ್ಲಿಗೆ ಬಂದು. ನೆರೆಯಲಾರಂಭಿಸಿದರು.

ಅತ್ಯ, ಸೀತೆ ಏನಾದಳು ? ರಾವಣನ ಉದ್ಯಾನವನದಲ್ಲಿ, ಅಶೋಕ ವನದಲ್ಲಿ, ಸೀತೆಗೆ ಸೆರೆ, ಸುತ್ತಲೂ ರಾಕ್ಷಸಿಯರು ವಿವಿಧ ಉಪಚಾರ ಗಳನ್ನು ಮಾಡುತ್ತಿರುವರು. ಇವಳೊಂದನ್ನೂ ಮುಟ್ಟಳು. “ರಾಮಾ, ರಾಮಾ' ಎನ್ನು ತಿರುವಳು. ಮಂಡೋದರಿಯು ರಾವಣನ ಪತ್ನಿ, ಅವಳೇ ಸೀತೆಯ ಪರಿಚಾರಿಣಿಯಾಗಿರುವಳು, ರಾಕ್ಷಸಿಯರು ರಾವಣನ ಗುಣಾತಿ ಶಯಗಳನ್ನು ಹೊಗಳಿ, ಸೀತೆಯ ಮನಸ್ಸನ್ನು ಅವನ ಕಡೆಗೆ ಸೆಳೆಯಲು ಯತ್ನಿಸುತ್ತಿರುವರು, ಸೀತೆಯ ಸಿಟ್ಟಿನಿಂದಲೂ, ದುಃಖದಿಂದಲೂ ' ಈ