ಈ ಪುಟವನ್ನು ಪರಿಶೀಲಿಸಲಾಗಿದೆ

________________

60

*ಗುಣಹಾನಿಯಿಂದಧೋಗತಿ ಗುಣದಿಂ ಸ್ವರ್ಗಾಪವರ್ಗ ಸುಖಮಕ್ಕುಮೆನಲ್ ||

ಗುಣಹೀನಕ ಸಿರಿಯಿಂದಂ ಗುಣಗಳ ಬಡತನಮ ನಾಡೆಯುಂ ಲೇಸತ್ತೇ ? ||

ನುಡಿಯಲ್ಲಕ್ಕುದೆ ಪಾಳಿದಪ್ಪಿ ಪಳಿಗಂ ಪಾಪಕಮುಳ್ಳಳ್ಳದೀ | ನುಡಿಯಂ ? ಚಿಃ! ಪರದಾರ ವನ್ಯ ಶಯನಸ್ಥಾನಂ, ಪೆರರ್ಮಿಂದ

ನೀರ್

ಮುಡಿದುಕ್ಷುಲ್ಲಕದಂಬಕಂ, ತೊಡೆದ ಕಾಶ್ಮೀರಾಂಗರಾ

ಗಾದಿಗಳ, ಮಡಗೂಳಿ, ಬೆಳ್ಳುಡೆ, ಚಾಯತಂಬುಲಮಿವಪ್ಪಶ್ಯಂಗಳೇ

ನಲ್ಲವೇ?

ಇದಿರಲ್ಲಿ ಮೂರು ಲೋಕಗಳೇ ನಿಂತರೂ ಅನಂತಪರಾಕ್ರಮಿಯಾದ ರಾಮನು ಅನನ್ಯಸಹಾಯನಾಗಿರುವನು, ಅಂತಹನ ಪ್ರಾಣಯೆಯಾದ ನನ್ನನ್ನು ನೀನು ಇಲ್ಲಿಗೆ ಕದ್ದೊಯ್ದೆ ಯಾದುದರಿಂದ, ಅವರ ಬಾಣಕೋಟಿ ಗಳು ಆಕಾಶವನ್ನು ಮುಚ್ಚಿ, ಈ ಅಂಕೆಯೆಲ್ಲಾ ಸಂಜೆಯ ಮೋಡದ ಕತ್ತಲಲ್ಲಿದ್ದ೦ತಾಗುವುದು, ಆಗ ಸಂಧ್ಯಾರಾಗಕ್ಕಾಗಿ ಎಷ್ಟು ಮಂದಿಯ ನೆತ್ತರು ಹಾರಿ ಭೂಮ್ಯಾಕಾಶಗಳು ಕೆಂಪಾಗುವುವು! ನನ್ನಲ್ಲಿ ಪತಿವಿಯೋಗ ದಿಂದುಂಟಾಗುವ ದುಃಖದ ಜ್ವಾಲೆಯು ನಿನ್ನ ಕುಲವನ್ನೆ ಸುಡುವುದು, ನೀನಾಗಿ ಈ ಬೆಂಕಿಯ ಕಿಡಿಯನ್ನು ಪಂಚವಟಿಯಿಂದ ಕಷ್ಟಪಟ್ಟು ತಂದಿರುವೆ, ಇನ್ನೂ ನನ್ನ ಮಾನಕ್ಕೆ ಹಾನಿತರುವ ಮಾತುಗಳನ್ನಾಡಿ ನಿನ್ನ ದುರ್ಗ ತಿಯ ಪ್ರಕಾರಗಳನ್ನು ಹೆಚ್ಚಿಸಿಕೊಳ್ಳದಿರು, ನಡೆ!! ಎಂದಳು, ರಾವಣನು ಇನ್ನೊಂದು ದಿನ ಆಡಿಸಿ ನೋಡುವೆನೆಂದನು. ಅವಳು ' ರಾನು, ರಾಮ', ಎಂದು ಪುನಃ ರಾಮಧ್ಯಾನವನ್ನೆ ಕೈಕೊಂಡಳು.