ಈ ಪುಟವನ್ನು ಪರಿಶೀಲಿಸಲಾಗಿದೆ

________________

62

ಒಳಿತಲ್ಲ, ಅವನು ಪ್ರಾಣವನ್ನೂ ಕಳೆದುಕೊಳ್ಳಬಹುದು; ಮಾನ ಉಳಿ ಯದು; ರಾಜ್ಯವು ಸಿಗದು' ಎಂದು ಸಭೆಯಲ್ಲಿ ಹೇಳಿದನು.

ಸಭಿಕರಲ್ಲಿ ಹನುಮಂತನು, ಲಕ್ಷ್ಮಣನನ್ನು ಕುಳ್ಳಿರಿಸಿ, ತಾನೆ ಸುಗ್ರೀವನನ್ನು ಅವನ ಅಂತಃಪುರದಲ್ಲಿ ಕಂಡು ನಾನಾ ಬಗೆಯಾಗಿ ಬೋಧಿಸಿದನು. ಬೇಡಿ, ಬೆದರಿಸಿ, ಅವನಲ್ಲಿ ಜಾಗೃತಿಯನ್ನು ಉಂಟು ಮಾಡಿದನು. ಅವನು ಹೀಗೂ ಹೊರಬರಲಿಲ್ಲ. ಲಕ್ಷ್ಮಣನನ್ನು ಕಾಣು ವುದಕ್ಕೆ ಇಷ್ಟು ಅಸಡ್ಡೆ ! ಅವನು ಆಗಲೆ ಧನುರ್ಬಾಣಗಳನ್ನು ಹಿಡಿದು ಕೊಂಡು ಎದ್ದು ನಿಂತನು. ಇನ್ನು ಸುಗ್ರೀವನನ್ನು ಕಾಪಾಡುವರಾರು ? ಆಗ ಸುಗ್ರೀವನು ಪ್ರಾಣಭಯದಿಂದ ಓಡೋಡಿ ಬಂದು, ಅವನ ಕಾಲಿಗೆರಗಿ ದನು. ವಿನಯಪೂರ್ವಕವಾಗಿ ಕ್ಷಮೆ ಬೇಡಿದನು, ಲಕ್ಷ್ಮಣನು ಬೇಗನೆ ಶಾಂತನಾಗಲಿಲ್ಲ; ಅವನು ಕೋಪದಿಂದ ಕೆಂಡದಂತೆ ಉರಿಯುತ್ತಿದ್ದನು. ಅಂದಿನಿಂದ ಇನ್ನೋಂದು ತಿಂಗಳೊಳಗೆ ಸೀತೆಯನ್ನು ಹುಡುಕಿಸುವೆನು ಎಂದು ಆಣೆಯಿಟ್ಟುಕೊಂಡು ಅವನು ಹೇಳಿದ ಬಳಿಕ ಮಾತ್ರವೆ,- ಆಗ ನೋಡುವೆನು' ಎಂದು ಲಕ್ಷ್ಮಣನು ಸಮಾಧಾನಗೊಂಡು, ಅಲ್ಲಿಂದ ರಾಮನೆಡೆಗೆ ಬಂದು, ಎಲ್ಲವನ್ನೂ ತಿಳುಹಿದನು.

ಸುಗ್ರೀವನು ಇನ್ನು ಸ್ವಲ್ಪ ಚಟುವಟಿಕೆಗೆ ಪ್ರಾರಂಭಿಸಿದನು. ಮಂತ್ರಿ 'ಯಾದ ಹನುಮಂತನು ಸೈನ್ಯಗಳನ್ನು ಕೂಡಿಸುವುದರಲ್ಲಿ ಆಸಕ್ತನಾದನು. ಬಳಿಕ ರಾಮಲಕ್ಷ್ಮಣರನ್ನು ಅರಮನೆಗೆ ಕರೆಯಿಸಿಕೊಂಡು ವಾನರಸೇನೆಯ ಸನ್ನಾಹವನ್ನು ತೋರಿಸಿದನು. ನಂತರ ಸೀತಾದೇವಿಯನ್ನು ಹುಡುಕಿ ಬರಲು ವಾನರವೀರರಿಗೆ ಅಪ್ಪಣೆಯಾಯಿತು, ಗುಡ್ಡ ಬೆಟ್ಟ, ಹೊಳೆ, ಕೆರೆ, ವನ ಉದ್ಯಾನ ಒಂದನ್ನೂ ಬಿಡದೆ ಅವರು ಎಲ್ಲೆಲ್ಲಿಯೂ ಹುಡುಕಲಾರಂಭಿಸಿ ದರು. ರಾವಣನು ದೇವಿಯನ್ನು ಲಂಕೆಗೆ ಒಯ್ದಿ ರಬೇಕೆಂದೇ ಅವರು ನಿಶ್ಚಯಮಾಡಿದರು. ಹಾಗಾದರೆ, ಈ ಸಾಗರವನ್ನು ದಾಟುವುದಾರು ? ಇದೊಂದು ದೊಡ್ಡ ಚಿಂತೆ, ಈ ಕಾರ್ಯವನ್ನು ಸಾಧಿಸುವವನು ಹನು ಮಂತನೇ ಒಬ್ಬನೆಂದು, ಎಲ್ಲರೂ ಅವನನ್ನೆ ಈ ಸಾಗರ ದಾಟಲು ಕೇಳಿ ಕೊಂಡರು. ಸುಗ್ರೀವನನ್ನು ನಂದಿಸಿ, ರಾಮಲಕ್ಷ್ಮಣರ ಆಶೀರ್ವಾದವನ್ನು ಪಡೆದು, ಸೀತೆಗೆ ಹೇಳತಕ್ಕುದನ್ನು ರಾಮನಿಂದ ತಿಳಿದುಕೊಂಡು, ಮಹಾ