ಈ ಪುಟವನ್ನು ಪರಿಶೀಲಿಸಲಾಗಿದೆ

________________

64

ಏಕದೇಣೀಧರೆಯ, ಅಶುಜ

ಲಾಕುಳಾಯತ ಲೋಚನೆಯ, ಉ

ದೇಕ ಶೋಕಾಸ್ಮಿತೆಯ ಅಂತಸ್ತಾಪವಿಹ್ನಲೆಯ||

ಶೋಕವನದಡಿ ಅಧಿಕಪುಣ್ಯ

ಶ್ಲೋಕಚರಿತೆಯ ಮನಪಟಪರಿ

ದಾಕೃತಿಯ ನವಿರಳಕೃಶಾಂಗಿಯ ಕಂಡನಾಹನುಮ.

ಪದ್ಮಗಂಧಿಯ, ಪದ್ಯವದನೆಯ |

ಪದ್ಯಸನಿವಾಸನೆಯ, ಪದ

ಪದ್ಮ ಕರಪದ್ಯಂಗಳೊಪ್ಪುವ ಪದ್ಯಲೋಚನೆಯ !

ಪದ್ಮಜಾಂಬಕಿ ಪದ್ವಿನಿಯ ಹೈ

ತ್ಸದ್ಯದೊಳು ರಘುರಾಮಚಂದ್ರನ

ಪದ್ಯಸಾದವ ನೆನೆವ ಸೀತೆಯ ಕಂಡನಾಹನುಮ.

ಹೊಗೆಯಲದ ಪುತ್ಥಳಿಯವೊಲು, ಹಿಮ

ವಗಿದ ತಾವರೆಯಂತೆ, ಬಿಚ್ಚದೆ

ಬಿಗಿದ ಮುತ್ತಿನ ಚಿಪ್ಪಿನಂದದಿ, ರಾಹುಲ೦ಬಿಸಿದ |

ಮಗಧರನವೊಲು, ಗೂಢದರ್ಥವ

ತೆಗೆಯಬಾರದ ಕೃತಿಯ ವೋಲಿ---

ರ್ದನಗಣಿತಮಲ ಪುಣ್ಯಮೂರ್ತಿಯ ಕಂಡನಾಹನುಮ.

ಈಗ ಅವಳೊಡನೆ ಸಂಭಾಷಣೆಮಾಡುವುದಾದರೂ ಹೇಗೆ? ಸುತ್ತಲೂ ದಾಸಿಯರ ಕಾವಲಿದೆಯಲ್ಲವೆ?

ಹನುಮಂತನು ಅಲ್ಲಿ ಕಾದು ಕಾದು, ಕೊನೆಗೆ ಅವಕಾಶಕ೦ಡನು. ಸೀತಾದೇವಿಗೆ ರಾಮನ ಮುದ್ರೆಯುಂಗುರವನ್ನು ಪರಿಚಯಕ್ಕಾಗಿ ಕೊಟ್ಟನು. ಇಲ್ಲವಾದಲ್ಲಿ, ಅವಳು ಇವನನ್ನು ನಂಬುವಳೇ ? ಇಂತಹ ವಿಕಾರಿಗಳೆಷ್ಟೋ ಮಂದಿ ರಾವಣನ ಕಡೆಯಿಂದ ಅವಳನ್ನು ನಾನಾ ವಿಧವಾಗಿ ಪೀಡಿಸಿರುವರು. ಆ ಉಂಗುರವನ್ನು ಸೀತಾದೇವಿಯು ತಲೆಯ ಮೇಲಿಟ್ಟುಕೊಂಡು ವಂದಿಸಿ. ದಲ ; ಎದೆಗೆ ಒತ್ತಿಕೊಂಡು ಮೈಮರೆತಳು; ಮುದ್ದಿಟ್ಟು ಕಣ್ಣೀರಿಟ್ಟಳು;