ಈ ಪುಟವನ್ನು ಪರಿಶೀಲಿಸಲಾಗಿದೆ



೭೧

೬. ಲಂಕಾಕಾಂಡ

ಇಪ್ಪತ್ತು ಯೋಜನೆಗಳ ವಿಸ್ತಾರವುಳ್ಳ ಪ್ರದೇಶದಲ್ಲಿ ವಾನರಸೇನೆಗಳು ಬೀಡುಗೊಂಡುವು, ರಾಕ್ಷಸರ ಸೈನಿಕರು ಕೋಟೆಗಳ ಹೆಗೋಡೆಗಳನ್ನು ಹತ್ತಿ ಸೇತುವನ್ನು ನೋಡಿ ಆಶ್ಚರ್ಯಪಟ್ಟರು. ಸಮುದ್ರಕ್ಕೆ ಸೇತು ಕಟ್ಟಿದರೆಂಬುದೇ ವಿಚಿತವಲ್ಲವೆ? ಇದೆಂದೂ ಕೇಳದ ವಿಷಯವು, ಲಂಕೆಯ ಗತಿ ಏನಾಗುವುದೋ? ಎಂದು ಅವರು ವಿಚಾರಮಾಡುತಿರುವಷ್ಟರಲ್ಲಿ * ಜಯ ಸೀತಾರಾಮ!' ಎಂಬ ಧ್ವನಿಯನ್ನು ಮಾಡುತ್ತ ವಾನರಸೇನೆಗಳು ಕೋಟೆಯ ಬಳಿಗೆ ಬಂದುವು. ರಾವಣನು ಅವರ ಸಂಖ್ಯೆಯಷ್ಟು ಸನ್ನಾಹವೇನು ಎಂದು ತಿಳಿದುಕೊಳ್ಳಲು ತನ್ನ ಮಂತ್ರಿಗಳಾದ ಶುಕಸಾರಣ ರನ್ನು ಕಳುಹಲು, ಅವರು ವಿಚಾರವಾಡ ಬಂದವರೇ ಭಯಗ್ರಸ್ತರಾದರು. ಅವರು ವಾನರರಂತೆ ವೇಷಹಾಕಿಕೊಂಡು ಆತ್ಮ ಬಂದರು, ವಿಭೀಷಣನು ಇದನ್ನು ತಿಳಿದು ರಾಮನಿಗೆ ಸೂಚಿಸಲು, - ದೂತರನ್ನು ಕೊಲ್ಲಲಾಗದು, ಅದರಲ್ಲಿಯೂ ಅವರು ಅಸ್ತ್ರಧಾರಿಗಳಲ್ಲ, ಬೇಕಾದ ಕಡೆಗೆ ತಿರುಗಿ ಹೋಗಲಿ!' ಎಂದನು. ಅವರು ಹಗೆಗಳ ಬಲಾಬಲಗಳನ್ನು ಚೆನ್ನಾಗಿ ಪರೀಕ್ಷಿಸಿದರು, ವಾನರರೊಳಗೆ ಏನಾದರೊಂದು ಭೇದಬುದ್ದಿಯನ್ನು ಕಲ್ಪಿಸನೊಡಿದರು: ಏನೂ ಪ್ರಯೋಜನವಾಗಲಿಲ್ಲ, ಅದಕ್ಕಾಗಿಯೇ ಮರಳಿ ಬಂದವರೇ, ಅವರು ರಾವಣನಿಗೆ ಯುದ್ಧವು ಬೇಡವೆಂದು ತಿಳುಹಿದರು. ಅವರ ಮಾತನ್ನು ಕೇಳಿ, ಅವನು ಒಂದೇ ಬಾರಿ ಅಗ್ನಿಶರ್ಮನಾದನು! ಆದರೆ, ಸಮುದ್ರಕ್ಕೆ ಸೇತುಕಟ್ಟ, ಅಲ್ಲಿಯ ತನಕ ಬರ್ಬರರಾದ ವಾನರರೂ ಬಂದರಲ್ಲಾ ಎಂದು ಭಾವಿಸಿ, ಅವನ ವಜದಂತೆ ದೃಢವಾದ ಎದೆಯ ಒಂದು ಕ್ಷಣಕ್ಕೆ ನಡುಗಿತು. ಆದರೆ ಯಾರ ಸಾವು ಸಮಾಪವಾಗಿದೆಯೋ ಅವನು ಯಾರ ಮಾತನ್ನೂ ಕೇಳನು, ಅವನೇನು ಮಾಡಿದನು? ಒಬ್ಬ ಶಿಲ್ಪಿಯಿಂದ, ರಾಮನ ತಲೆಯಂತೆ ಒಂದು ತಲೆಯನ್ನಿ, ಅವನ ಧನುಸ್ಸಿ ನಂತಹ ಒಂದು ಧನುಸ್ಸನ್ನೂ ತಯಾರಿಸಿ ಸೀತಾದೇವಿಗೆ ಕಳುಹಿಕೊಟ್ಟನು, ಸೀತೆಯು ಈ ಕಪಟವನ್ನು ಬಲ್ಲಳ? ಅವಳು ಸಹಗಮನವಾಡು