ಈ ಪುಟವನ್ನು ಪರಿಶೀಲಿಸಲಾಗಿದೆ

________________


80

ಅವನು ನಾಲ್ಕೂ ಕಡೆಯ ಪಹರೆಯವರ ಕಾವಲನ್ನು ನೋಡುತ್ತಲೇ ಇರುವ ಉದ್ಯೋಗವನ್ನು ವಹಿಸಿಕೊಂಡನು. ನಡುರಾತ್ರಿ ಮೂಾರಿತು, ಮಹಿರಾವ ಜನು ಆಗಲೆ ಪಾತಾಳದಿಂದ ರಾಮಲಕ್ಷ್ಮಣರು ಮಲಗಿದ್ದಲ್ಲಿಗೇ ಒಂದು. ಸುರಂಗವನ್ನು ತೋಡಿಸಿದನು. ಅವನು ತಾನು ದಶರಥನ ಹಾಗೆ ವೇಷ ವನ್ನು ಹಾಕಿಕೊಂಡು ಒಂದು ದ್ವಾರದ ಬಳಿಗೆ ಬರಲು, ಅಲ್ಲಿಂದ ಕಾಮಭಕ್ತ ಹನುಮಂತನು ಅವನನ್ನು ಒಳನುಗ್ಗಲು ಬಿಡಲಿಲ್ಲ: ಮತ್ತೊಂದು ಧ್ವಾರದಲ್ಲಿ ಭರತನಂತೆ ವೇಷಧರಿಸಿ ಹೋಗಲು ಯತ್ನಿಸಿದನು, ಅಲ್ಲಿಯ ಹನು ಮಂತನು ನುಗ್ಗ ಗೊಡನು, ವಿಭೀಷಣನು ಬಾರದೆ ಯಾರನ್ನೂ ಒಳಬಿಡೆ ಲಾಗುವುದಿಲ್ಲೆಂದನು, ಕೌಸಲ್ಯಯಂತೆ ಬಂದನು; ಉತ್ತರವು ಆದೇ. ಕೊನೆಗೆ ವಿಭೀಷಣನಾಗಿಯೇ ಬಂದನು, ಬಂದು “ ಬಹಳ ಸಾವಧಾನವಾಗಿರು; ರಾಮಲಕ್ಷ್ಮಣರನ್ನು ನೋಡಿ, ಜಾಗ್ರತ ಹೇಳಿ ಬರುವೆನು. ಯಾರೂ ನನ್ನಂತೆ ಬಂದರೂ ಒಳಕ್ಕೆ ಬಿಡದಿರು' ಎಂದು ಹನುಮಂತನಿಗೆ ಹೇಳಿ ಒಳಕ್ಕೆ ನಡೆದನು. ಸುಗ್ರೀವನ ತೊಡೆಯ ಮೇಲೆ ತಲೆಯಿಟ್ಟು ರಾಮನೂ, ಅಂಗದನ ರಕ್ಷಣೆಯಲ್ಲಿ ಲಕ್ಷ್ಮಣನೂ ಮಲಗಿದ್ದರು. ಸುಗ್ರೀವನು ನೋಡಿ ದನು, ಅವನು ವಿಭೀಷಣನು ವಾನರರನ್ನು ಮೌನವಾಗಿರ ಹೇಳಿ, ರಾಮ ಲಕ್ಷಣರನ್ನು ಮೆಲ್ಲನೆ ಸುರಂಗಮಾರ್ಗವಾಗಿ ಪಾತಾಳಕ್ಕೆ ತಂದನು. ಅಲ್ಲಿ ಅವರನ್ನು ರಾಕ್ಷಸರ ಸೆರೆಯಲ್ಲಿಟ್ಟನು. ಅವರು ಒಂದನ್ನೂ ತಿಳಿಯರು

ಇಷ್ಟರಲ್ಲಿ ವಿಭೀಷಣನೆ ಹನುಮಂತನಿದ್ದ ಬಾಗಿಲಿಗೆ ಬಂದನು. ಆವನಿಗೆ ಆಶ್ಚರ್ಯವಾಯಿತು, ಈಗಲೆ ಒಳಹೋದ ವಿಭೀಷಣನು ಅಷ್ಟ ರಲ್ಲಿ ಇದಿರು ಬಂದನೆಂಬುದು ಹೇಗೆ? ಮಹಿರಾವಣನು ಹೀಗೆ ಮೋಸ ಮಾಡಿದನೆಂದು ವಿಭೀಷಣನು ತಿಳಿದನು, ಇವನೇ ಮಾಯಾವಿಭೀಷಣ, ನೆಂದು ಹನುಮಂತನು ಭಾವಿಸಿದನು. ಕೂಡಲೆ ಹನುಮಂತನು ಬಾಯಿಗೆ ಬಂದಂತೆ ನಿಭೀಷಣನನ್ನು ಜರೆದಾಡಿದನು. ವಿಭೀಷಣನು ಗಂಭೀರ ಭಾವ ದಿಂದ ನಿಂತನು. ' ನಾನು ರಾಮಮಿತ್ರನಲ್ಲದಿದ್ದಲ್ಲಿ ಗೋವಧೆ ಬ್ರಹ್ಮಹತ್ಯ ಮೊದಲಾದ ಪಾಪಗಳು ನನ್ನ ಮೇಲೆ ಬರಲಿ! ನಾನು ರಾಮಮಿತ್ರನಲ್ಲ ದಿದ್ದಲ್ಲಿ ಇಂದ್ರಜಿತುವಿನ ಯಜ್ಞವನ್ನು ನೀವು ಧ್ವಂಸಮಾಡುತಿದ್ದಿರೇ? ನನ್ನ ಮಗನನ್ನ ಕೊಲ್ಲುವ ಉಪಾಯವನ್ನು ನಾನು ಹೇಳಿಕೊಡುತ್ತಿದ್ದೆ ನೇ?