ಈ ಪುಟವನ್ನು ಪರಿಶೀಲಿಸಲಾಗಿದೆ



೮೩

ಪೂಜೆಯನ್ನು ಮಾಡುತಿರುವರು], ಮೂರು ದಿನಗಳ ತನಕ ಪೂಜೆಯನ್ನು ನಡೆಸಿ ಮಹಾದೇವಿಯ ಪುಸಾದ ಪಡೆದನು, ಅನಂತರ ಮರಳಿ ಯುದ್ದ ಕಾರಂಭವಾಯಿತು. ಆದರೂ ರಾವಣನು ಸೋಲುವವನಲ್ಲ, ಅವನನ್ನು ಕೊಲ್ಲುವ ಬಾಣವು ಅವನ ಪತಿವು ತಾಪತ್ನಿಯಾದ ಮಂಡೋದರಿಯ ಬಳಿ ಯಲ್ಲಿದ್ದಿತು, ಅದನ್ನು ತರಲು ಹನುಮಂತನು ನಡೆದನು, ಅದು ಒಂದು ಕಲ್ಲಿನ ಕಂಬದಲ್ಲಿದ್ದುದನ್ನು ಅರಿತುಕೊಂಡು, ಕಂಬವನ್ನು ಒಡೆದು, ಹನು ಮಂತನು ಆ ಬಾಣವನ್ನು ಕಿತ್ತು, ವಾನರಸೇನೆ ಇದ್ದಲ್ಲಿಗೆ ಓಡಿಯೊಡಿ ಮರಳಿದನು, ಮಂಡೋದರಿಯು ತನ್ನ ಸರ್ವನಾಶವಾಯಿತೆಂದು ಎನ್ನು ವುದರೊಳಗೆ, ರಾಮನು ಆ ಮೃತ್ಯು ಬಾಣವನ್ನು ಹೂಡಿ ರಾವಣನನ್ನು ಕೊಂದನು. ಅವನು ತ್ರಿಭುವನಗಳ ಅರಸು; ಈಗ ಮಣ್ಣಿನಲ್ಲಿ ಹೊರಳಾಡಿ ದನು, ೪೦ಕೆಯಲ್ಲಿ ಎಲ್ಲೆಲ್ಲಿಯೂ ಹಾಹಾಕಾರವೆದ್ದಿತು. ಆದರೆ ಆಗಲೆ:

ತಡೆವ ತಾರೆಗಳು ತರಣಿಯ

ನಡಸಿ ನುಂಗುವ ರಾಹುವು ? ಕಡಿ

ದುಡಿದುಹಾಯಿತು ಸರಳುರಸ್ಥಲವನು ದಶಾನನನ ।

ಹೊಡೆದವನರರ ಭೇರಿ, ಕಾಮನ

ಮುಡಿಯೊಳಕ್ಕವು ಕುಸುಮವವರರ

ಮಡದಿಯರು ಸುಳಿಸಿದರು ಜಯರವಮಂಗಳಾರತಿಯ

ರಾವಣನಂತೂ ಮುಡಿದನು. ಅವನಿಗೆ ಯೋಗ್ಯವಾದ ಸಂಸ್ಕಾರವನ್ನು ಮಾಡುವುದಕ್ಕಾದರೂ ಯಾರು ಉಳಿದಿರುವರು ? ಪುತ್ರರಿಲ್ಲ, ಪೌತ್ರರಿಲ್ಲ. ಸೋದರನಾದೊಬ್ಬ ವಿಭೀಷಣನು ಮತ್ತು ರಾಮನಿಗೆ ಶರಣಾಗತನಾದು ದರಿಂದ ಉಜ್ಜಿದಿರುವನು. ಅವನು ಶೋಕ ಮಾಡುತ್ತಿದ್ದುದನ್ನು ರಾಮನು ಕಂಡು, ತಾನೂ ಅವನಿಗಾಗಿ ದುಃಖಗೊಂಡನು. ಬಳಿಕ, ಅವನ ಪಾಪದ ಫಲವನ್ನು ಅವನು ಉಂಡನೆಂದು ವಿಭೀಷಣನಿಗೆ ಸಮಧಾನಗೊಳಿಸಿ, ರಾಕ್ಷಸರಲ್ಲಿ ಮಡಿದವರೆಲ್ಲರ ಸಲುವಾಗಿ ಅವನಿಂದಲೇ ಉತ್ತರಕ್ರಿಯೆಗಳನ್ನು ಮಾಡಿಸಿದನು.

ಇನ್ನು ಲಂಕೆಗೆ ಅರಸಾಗುವವರು ಯಾರು ? ವಿಭೀಷಣನಲ್ಲದೆ ಇನ್ಯಾರು ? ಅವನ ಅಭಿಷೇಕವು ಬಹು ವಿಜೃಂಭಣೆಯಿಂದ ಸಾಗಿತು.