ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಡವೆಯನ್ನಿ ಕ್ಯು ವುದಲ್ಲದೆ, ನಿಮ್ಮ ಮನಸ್ಸಿಗೂ ತೃಪ್ತಿ ಯಾಗುವಂತೆ ಸನ್ಮಾನವನ್ನು ಮಾಡುತ್ತಾನೆ. ವಿಶ್ವನಾಥ.. ಇದೇನೊ ನಮಗೆ ಕನಸಿನಂತೆ ತೋರುತ್ತಿದೆ, ಅಂತಹ ವರನು ಸಿಕ್ಕುವಷ್ಟು ಪುಣ್ಯವನ್ನು ನೀವು ಮಾಡಿರುವೆನೆ ? ಶ್ರೀಧರವರನು ನಿಮ್ಮೆದುರಿಗೇ ಕುಳಿತುಕೊಂಡು ಮತ್ತು ಕೊಡುತ್ತಿರುವಾಗ ನಿಮಗೆ ಅಪನಂಬಿಕೆಯೇಕೆ ? ವಿಶ್ವನಾಥ-ಇದೇನು ಸ್ವಾಮಿ, ಹೀಗೆ ಮಾತನಾಡುತ್ತೀರಿ, ನನಗಾವುದೂ ಅರ್ಥವಾಗುವುದಿಲ್ಲ. ಶ್ರೀಧರ ಸ್ವಾಮಿ, ನಿಮ್ಮಲ್ಲಿ ಮುಚ್ಚುಮರೆಯೇಕೆ, ಕನೈಯು ಬೇಕಾಗಿರುವುದು ನನಗೇ ವಿಶ್ವನಾಥಏನು, ಏನು, ನಿಮಗೆ ? ಶ್ರೀಧರ.ಅದೇನು ಅಷ್ಟು ಆಶ್ಚರ್ಯಪಡುತ್ತೀರಿ ? ನಾನು ಹೇಳುವುದನ್ನು ಪೂರಾ ಕೇಳಿ ! ನಾನೇನೋ ವಯ ಸ್ವಾದವನಂತೆ ತೋರಿದರೂ, ನನಗಿನ್ನೂ ಐವತ್ತು ವರ್ಷ ಕೂಡ ಆಗಿಲ್ಲ. ನನಗೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕೆಂಬ ಇಷ್ಟವಿದೆ. ಇದ ಕೋಸ್ಕರ ನೀವೇನು ಕೇಳಿದರೂ ಕೊಡಲು ಸಿದ್ದ ನಾಗಿದ್ದೇನೆ. ವಿಶ್ವನಾಥ ಅಯ್ಯೋ ! ನಾನು ಮಗಳನ್ನು ಮಾರಲೆ ? ನಾನು ಹುಟ್ಟಿದುದಕ್ಕೆ ಸಾರ್ಥಕವಾಯಿತು. ಶ್ರೀಧರ-ನೀವು ಆರೀತಿ ಯೋಚನೆ ಮಾಡಕೂಡದು ನಿಮ್ಮ ಮಗಳನ್ನು ನನಗೆ ಕೊಟ್ಟರೆ ನೀವು ನನಗೆ ಕೇವಲ ಆತ್ಮೀಯರಾಗುವಿರಿ, ನಾನು ಕೊಡವ