ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೬:೨೭** : "? " * **' (*Sep ಘಸ'*******'-""..:YYಭ EY Ark ೬೩. ܘܢ EG 'FTigತಿ-•':4••••••r-dely-25[2,*tujia: Mru44-1ಳy -+--Aw++++++++++++++rikಷ೨-64---{ATE " **1.x Fas rvzrang.. ಪ್ರೇಮಕ್ಕೆ ಕಣ್ಣಿಲ್ಲ ನಿಂದ ಒಂದೆರಡು ಕಡೆ ಕಟ್ಟಿದ್ದರು, ಬಿದ್ದಿದ್ದ ಕಾಸೊಸ್ ಗಿಡಗಳನ್ನೆತ್ತಿ ನಿಲ್ಲಿಸಿ, ಸುತ್ತಲೂ ದಾರ ಬಿಗಿದರು, ಬೇರುಕಿತ್ತು ಬಂದಿದ್ದ ಕೆಲ ಗಿಡಗಳನ್ನು ಮತ್ತೆ ಮಣ್ಣಲ್ಲಿ ನೆಟ್ಟರು. ಕಳೆ ಕೀಳತೊಡಗಿದರು ಬಳಿಕ.

  • ವಿಶಾಲಾಕ್ಷಿಗಾಗಲೇ ಬೆವರೊಡೆಯಿತು, ಹುಬ್ಬುಗಳ ಮೇಲ್ಗಡೆ, ತುಟಿಗಳ ಮೇಲಕ್ಕೆ, ಎರಡು ಗೆರೆಗಳಾಗಿ, ಬೆವರಿನ ಹನಿಗಳು ಹವಳದ ಸರ ಕೋದುವು. ಮಣ್ಣು ಮೆತ್ತಿದ್ದ ಕೈಯಿಂದ-ಹಿಂಗೈಯಿಂದ-ಕೆದರಿದ್ದ ಮುಂಗುರುಳನ್ನು ಅವಳು ಹಿಂದಕ್ಕೆ ಸರಿಸಿದಳು. ಮಳೆ ಉಳಿಸಿಹೋಗಿದ್ದ ನೀರಿನ ತೇವವನ್ನೆಲ್ಲ ಆತುರ ದಿಂದ ಹೀರುತ್ತಿದ್ದ ಸೂರ್ಯರಶ್ಮಿ ತಗಲಿ, ಅವಳ ಕೆನ್ನೆಗಳು ಕೆಂಪಗಾದುವು.

“ನಾನೂ ಸ್ನಾನ ಮಾಡದೇನೇ ಇರಬೇಕಾಗಿತ್ತು, ಅಲ್ವಾ ಅಕ್ಕಾ ?” -ಕೊಳೆಯಾಗಿದ್ದ ತನ್ನ ಕೈಕಾಲುಗಳನ್ನು ದಿಟ್ಟಿಸಿ ಜಯರಾಮು ಹೇಳಿದ. “ಆಮೇಲೆ ಚೆನ್ನಾಗಿ ತೊಳಕೊಂಡರಾಯ್ತು.” * ನಾಗನ್ನು ಅಡುಗೆ ಮನೆಯ ಕಿಟಕಿಯಿಂದ ಹೊರಗಿಣಿಕಿ ಅಂದರು : “ಹಂಡೇಲಿ ನೀರು ತಣ್ಣಗಾಯ್ತಲ್ಲೇ....ಸ್ನಾನ ಮಾಡಬಾರಾ ?” (ಆಗೋಯ್ತಮ್ಮ, ಬಂದ್ವಿಟ್ಟೆ.” ಎರಡು ಮೂಲೆಗಳಲ್ಲಷ್ಟೇ ಕೆಳೆ ಉಳಿದಿತ್ತು, ಅಷ್ಟನ್ನೂ ಕಿತ್ತು, ರಾಶಿ ಮಾಡಿ, ಹಿಂಬದಿಯ ಹಿತ್ತಿಲ ಗೋಡೆಯಾಚೆಗೆ ಎಸೆಯಬೇಕು, ಕಸಬರಿಕೆ ತಂದು ಸ್ವಚ್ಛಗೊಳಿಸಬೇಕು, ಅಷ್ಟು ಮಾಡಿದರೆ ಮುಗಿಯಿತು ಉದ್ಯಾನದ ಕೆಲಸ. ಪ್ರತಿಯೊಂದನ್ನೂ ಕ್ರಮಬದ್ಧವಾಗಿ ಮಾಡಿ ಮುಗಿಸುವ ಯೋಚನೆ ಯೇನೋ ಪ್ರಶಂಸನೀಯವೇ. ಆದರೆ, ಕ್ರಮಬದ್ದತೆಗೂ ಇದೆ ಒಂದು ಮಿತಿ ಮೇರೆ. ಪ್ರತಿಯೊಂದರಲ್ಲೂ ಆಕಸ್ಮಿಕದ ಅಂಶ ಎನ್ನುವುದೊಂದಿದೆ, ಅದನ್ನು ವಿಶಾಲಾಕ್ಷಿ ಪರಿಗಣಿಸಿಯೇ ಇರಲಿಲ್ಲ. ಹನಿಗಳೊಂದುಗೂಡಿ ನೀರಧಾರೆಯಾಗಿ ಕೆನ್ನೆಗಳ ಮೇಲೆ ಹರಿಯತೊಡಗಿ ದಂತೆ, ಕಳೆಯ ರಾಶಿಯನ್ನೆತ್ತಲೆಂದು ವಿಶಾಲಾಕ್ಷಿ ಕೆಳಕ್ಕೆ ಬಾಗಿದಳು. ಅಷ್ಟರಲ್ಲೇ ಗೇಟು ಮಿಸುಕಿದ ಸದ್ದಾಯಿತು. ತಲೆ ಎತ್ತಿದ ವಿಶಾಲಾಕ್ಷಿಗೆ ವ್ಯಕ್ತಿಯೊಂದು ಕಣ್ಣಿಗೆ ಬಿದ್ದಂತಾಗಿ, ಕಳೆಯ ನೃಲ್ಲೇ ಕೆಳಕ್ಕೆ ಬಿಟ್ಟು, ಆಕೆ ಎದ್ದು ನಿಂತಳು. ಮನೆಯ ಮುಂದೆ ನಿಂತಿದ್ದ ಯುವಕ, ಶಾಂತವಾಗಿ ಆ ದೃಶ್ಯವನ್ನು • | j* I : - : * K4 -+++: the'..# +4 +.'