ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೨ ..* ಓv, .-4, "x-kw-5 ܇ ܕܝܵܡܵܐ* ವಿಶಾಲಾಕ್ಷಿ “ಎಲ್ಲಿ ಅಧ್ಯಾಪಕರಾಗಿದ್ದಿರಿ ?” ಕಾಫಿ ಬಂದು, ಸಂಭಾಷಣೆಗೆ ಅಲ್ಪ ವಿರಾಮ ದೊರೆಯಿತು. ಹೀರಿ, ರುಚಿನೋಡಿ, “ಇದೆ ತಕ್ಕಮಟ್ಟಿಗೆ” ಎಂದು, ಗಂಗಾಧರ ಮುಂದು ವರಿದ : “ಗುಲ್ಬರ್ಗಾದಲ್ಲಿ ನಾನು ಆನರ್ಸ್ ಮಾಡ್ಕೊಂಡು ಐದು ವರ್ಷಗಳಾದುವು. ಪಾಸಾದ ವರ್ಷವೇ ಅಲ್ಲಿ ಕಾಲೇಜಿನಲ್ಲಿ ಲೆಕೋರರ್ ಆಗಿ ಒಂದು ತಾತ್ಕಾಲಿಕ ಉದ್ಯೋಗ ಸಿದ್ದು, ಎರಡು ವರ್ಷ ಅಲ್ಲಿದ್ದೆ.” *

  • ಗುಲ್ಬರ್ಗಾ, ಹೈದರಾಬಾದ್ ಸಂಸ್ಥಾನದಲ್ಲಿ ಇರೋದು ?”

“ಹೂಂ, ಇನ್ನೂ ಒಂದು ತಿಂಗಳು ಅದೇ ಸಂಸ್ಥಾನದಲ್ಲಿರುತ್ತೆ, ಆಮೇಲೆ ಕರ್ನಾಟಕ ಪ್ರಾಂತ ಆಗುತ್ತೆ....? “ಹೌದು, ಪತ್ರಿಕೇಲಿ ಓದಿದೀನಿ.” “ಏನು ಹೇಳಿದ್ದೆ ಅಂದ್ರೆ-ಅದೇ-ಉದ್ಯೋಗದ ವಿಷಯ, ಅಲ್ಲಿಂದ ಬಂದ ವನು ಒಂದು ವರ್ಷ ಮನೇಲೇ ಇದ್ದೆ. ಆಮೇಲೆ ನಮ್ಮೂರಿನ ಪುರಪ್ರೌಢ ಶಾಲೇಲಿ ಎರರ್ಡು ವರ್ಷ ಅಧ್ಯಾಪಕನಾದೆ!” ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಬಳಿಕ ಹೈಸ್ಕೂಲಿನಲ್ಲಿ ಉಪಾಧ್ಯಾಯ. “ಅಲ್ಲೇನು ಕನ್ನಡ ಕಲಿಸ್ತಿದ್ರಾ ?” “ಎಲ್ಲಾ ಹೇಳ್ಕೊಡ್ತಿದ್ದೆ !....ತಾಯಿಗೆ ಕಾಹಿಲೆ ಬೇರೆ, ಕಿರಿಮಗ ಅಂತ ಅವರಿಗೂ ನನ್ನ ಮೇಲೆ ಪ್ರೀತಿ, ಈ ವರ್ಷ ಎಂ.ಎ ಮಾಡ್ಕೊಳ್ಳೋದಕ್ಕೆ ಬಿಟ್ರು....ಇನ್ನು ಮೇಲೆ ಮಾತ್ರ ಯಾವ ಬಂಧನವೂ ನನಗಿಲ್ಲ.” ['ಮದುವೆಯಾಗಿಲ್ಲ ನನಗೆ.] ಕಾಫಿ ಕುಡಿದಾಗಿತ್ತು, ಆದರೆ ; ಆಗಲೇ ಏಳುವ ಆತುರವನ್ನು ಇಬ್ಬರೂ - ತೋರಲಿಲ್ಲ. ವಿಶಾಲಾಕ್ಷಿ ಅಂದಳು : “ನಿಮ್ಮ ಕವಿತೆ ಓದಿದೆ.” “ಹೌದೆ ? ಈಗ ನೆನಪಾಯ್ತು, ಮಾತನಾಡೋದರಲ್ಲಿ ಮರತೇ ಬಿಡ್ತಿದ್ದೆ. ನಿಮಗೊಂದು ಪ್ರತಿ ಕೊಡಬೇಕೂಂತ ಇರಿಸಿದ್ದು--ಇಗೋ-” - ಪುಸ್ತಕಗಳೆಡೆಯಿಂದ ಆತ ತೆಗೆದುಕೊಟ್ಟು, ಬಿಳಿಯ ಹೊದಿಕೆಯೇ, .:

  • - ** *.

-y==== ..೫......: :: - ಇಲ್ಲಿದೆ :: -2ch...