ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಪದಪಿ ವರಾದಪಿ!

೭೭

ನಿಷೇಧಿಸಲಾಗಿದೆ; ಆದರೆ, ಬದಲಾವಣೆಗೆ ಅವಕಾಶವಿದೆ. ಸಮಜಾಯಿಸಿ, ವಿನಂತಿಸಿ ಮತಪರಿವರ್ತನೆ ಮಾಡಿ, ವಚನದಲ್ಲಿ ಬದಲಾವಣೆ ಮಾಡಬಹುದು. ದಶರಥನು ಸತ್ಯನಿಷ್ಠನಾಗಿದ್ದನು. ವರಗಳ ಬದಲು ಕೈಕೇಯಿಗೆ ಆತನು ವಚನವನ್ನು ಕೊಟ್ಟಿದ್ದರೂ ಆ ವಚನವನ್ನು ಪಾಲಿಸುವ ನೈತಿಕತೆ ಆತನಗಿತ್ತು. ವರಗಳನ್ನು ಕೊಟ್ಟನಂತರ ಸಹ ಕೈಕೇಯಿಯನ್ನು ಬಹುವಾಗಿ ವಿನಂತಿಸಿದ್ದಾನೆ. ಕೈಕೇಯಿಯ ನಿರ್ಧಾರ ಹಾಗೂ ವರಗಳ ಆಗುಗಳನ್ನು ತಪ್ಪಿಸುವ ಅಸಾಧ್ಯತೆಯ ಕಾರಣದಿಂದ ದಶರಥನ ಪ್ರಯತ್ನಗಳು ನಿಷ್ಫಲವಾದವು. ಈ ರೀತಿ ಸಂಪೂರ್ಣ ರಾಮಾಯಣವನ್ನು ರೂಪಿಸುವ ಸಾಮಥರ್ಯ್‌ವು ಕೇವಲ ಈ ಎರಡು ವರಗಳಲ್ಲಿ ಒಟ್ಟುಗೂಡಿದೆ.

ದಶರಥನ ವಿಷಯಲಂಪಟತೆಯ ಬಗ್ಗೆ ಅನೇಕ ಉಲ್ಲೇಖಗಳು ರಾಮಾಯಣದಲ್ಲಿವೆ. ಕೈಕೇಯಿಯ ಸೌಂದರ್ಯಕ್ಕೆ ಮಾರುಹೋಗಿ ದಶರಥನು ಆಕೆಗೆ ವರಗಳನ್ನು ಕೊಟ್ಟನೆಂದು ಅನ್ನುವುದು ಸರಿಯಲ್ಲ. ಆತನು ಕೈಕೇಯಿಯ ರೂಪಕ್ಕೆ ಸೋತುಹೋಗಿರಬಹುದು; ಆದರೆ ಈ ವರಗಳಿಗೆ ಅದರ ಆಧಾರವಿಲ್ಲ. ದಶರಥನು ತನ್ನ ಕೊನೆಯ ಗಳಿಗೆಯಲ್ಲಿ ಆಕೆಯ ಸ್ಪರ್ಶವು ತನಗಾಗಬಾರದೆಂದು, ಅವಳ ಮತ್ತು ತನ್ನ ಯಾವ ಧರ್ಮಸಂಬಂಧವೂ ಇನ್ನು ಮುಂದೆ ಉಳಿದಿಲ್ಲವೆಂದು, ಸ್ಪಷ್ಟವಾಗಿ ಹೇಳಿದ್ದಾನೆ. ರಾಮನೊಡನೆ ಅಸತ್ಯವನ್ನು ನುಡಿದ ಕಾರಣ ಕೈಕೇಯಿಯನ್ನು ಬಹುವಾಗಿ ನಿಂದಿಸಿದ್ದಾನೆ. ಇದನ್ನೆಲ್ಲ ಗಮನಿಸಿದರೆ ಕೈಕೇಐಇಯ ಸೌಂದರ್ಯಕ್ಕೆ ಮೋಹಿತನಾಗಿ ಆಕೆಗೆ ವರಗಳನ್ನು ಕೊಟ್ಟನೆಂಬುದು ನಿಜವೆನ್ನಿಸುವುದಿಲ್ಲ. ದಶರಥನು ಮಾತು ಕೊಟ್ಟು ಸಿಲುಕಿದ್ದನು. ಈ ತರಹದ ಸಲ್ಲದ ವರಗಳನ್ನು ಕೈಕೇಯಿಯು ಬೇಡಿಯಾಳು! ಎಂದು ಅವನು ಎಣಿಸಿರಲಿಲ್ಲವೆಂದು ದಶರಥನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾನೆ. ಧರ್ಮಬಂಧೇನ ಬದ್ಧೋsಸ್ಮಿ ನಷ್ಟಾ ಚ ಮಮ ಚೇತನಾ ||೨೪|| ``ಧರ್ಮಬಂಧನದಲ್ಲಿ ನಾನು ಸಿಲುಕಿದ್ದೇನೆ. ನನಗೆ ಯಾವುದೂ ಹೊಳೆಯುತ್ತಿಲ್ಲ. ರಾಮನನ್ನು ವನವಾಸಕ್ಕೆ ಕಳುಹಿಸುವ ನಿಜಕಾರಣವನ್ನು ಹೇಳಿದರೆ ಜನರು ತನ್ನನ್ನು ಅಪರಾಧಿ ಎಂದು ಕಾಣುವರೆಂಬ ವ್ಯಥೆಯು ದಶರಥನಿಗಾಯಿತು.

ರಾವಣನಿಗೆ ಕೇವಲ ಎರಡು ವರಗಳು ದೊರೆತಿವೆ. ಬ್ರಹ್ಮನು ಕೊಟ್ಟ ಮರ್ಯಾದಿತ ಅಮರತ್ವ ವರವು. ಒಂದು ವಿಧದಲ್ಲಿ, ಕೈಕೇಯಿಯು ಬೇಡಿಕೊಂಡ ವರಕ್ಕೆ ಮತ್ತು ರಾಮಾಯಣದ ರಚನೆಗೆ ಪೋಷಕವಾಗಿದೆ. ಆಕ್ರಮಣ ಕೊಬ್ಬು, ಅಧಿಕಾರಲಾಲಸೆ, ಕಾಮಾಂಧತೆ, ಅಮರ್ಯಾದಿತ ವರ್ತನೆ ಇವು ರಾವಣನಲ್ಲಿ ಹೆಚ್ಚಾಗಲು ಅವನಿಗೆ ದೊರೆತ ಈ ವರವು ಕಾರಣೀಭೂತವಾಗಿದೆ. ಆತನ ಪಾಪ