ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಮೂರು ಬಗೆಯಿಂದ ಪತಿಯ ಬಗ್ಗೆ ಅಚಲನಿಷ್ಠೆಯನ್ನಿಟ್ಟುಕೊಂಡವಳೆಂದರೆ ಪತಿವ್ರತೆ' ಎಂದು ಮನುವು ಸಾರಿದ್ದಾನೆ.

ಪೃಥಿವ್ಯಾಂ ಯಾನಿ ತೀರ್ಥಾನಿ ಸತೀಪಾದೇಷು ತಾನ್ಯಪಿ |

ತೇಜಶ್ವ ಸರ್ವದೇವಾನಾಂ ಮುನೀನಾಂ ಚ ಸತೀಷು ವೈ ||

``ಭೂಮಂಡಲದಲ್ಲಿಯ ಎಲ್ಲ ತೀರ್ಥೋದಕಗಳು ಸತಿಯ ಪಾದದಡಿಯಲ್ಲಿವೆ; ಎಲ್ಲ ದೇವತೆಗಳ ಹಾಗೂ ಋಷಿಮುನಿಗಳ ತೇಜಸ್ಸು ಸತಿಯಲ್ಲಿದೆ ಎಂದು ಬ್ರಹ್ಮವೈವರ್ತ ಪುರಾಣದಲ್ಲಿ ಪತಿವ್ರತೆಯನ್ನು ಗೌರವಿಸಲಾಗಿದೆ.೫೭ ಅನಸೂಯೆಯ ಪಾತಿವ್ರತ್ಯವನ್ನು ಪರೀಕ್ಷಿಸಲೋಸುಗ ಬ್ರಹ್ಮ, ವಿಷ್ಣು, ಮಹೇಶ ಈ ಮೂವರು `ನಗ್ನಳಾಗಿ ನಮಗೆ ಭಿಕ್ಷೆ ಹಾಕು! ಎಂದು ಅವಳಿಗೆ ನುಡಿದರು. ಅವಳು ಈ ಮೂವರನ್ನೂ ಕೂಸುಗಳನ್ನಾಗಿ ಮಾಡಿ ಅವರ ಇಚ್ಛೆಯನ್ನು ಪೂರೈಸಿದಳು. ಪೌಷ್ಯನ ರಾಣಿಯನ್ನು ಕಾಣಲೆಂದು ಉತ್ತಂಕನು ಅವಳ ಬಳಿ ಬಂದಾಗ ಅವಳು ಅದೃಶ್ಯಳಾದಳು. ಗೊತ್ತುಮಾಡಿದ ಮದುವೆಯಾಗಲಿರುವ ವರನು ಅಂಧನಾಗಿದ್ದಾನೆ ಎಂದು ತಿಳಿದುಬಂದನಂತರ ಗಾಂಧಾರಿಯು, ತನ್ನ ಪತಿಯ ಬಗ್ಗೆ ವಿಕಲ್ಪವು ಮನಸ್ಸಿನಲ್ಲಿ ಮೂಡಬಾರದೆಂದು, ತನ್ನ ಕಣ್ಣುಗಳನ್ನು ಸದಾಕಾಲಕ್ಕಾಗಿ ಕಟ್ಟಿಕೊಂಡಳು.

ಪತಿವ್ರತೆಯು ಪರಪುರುಷನ ಕಣ್ಣಿಗೆ ಬೀಳಬಾರದೆಂಬ ಕಲ್ಪನೆಯು ನಂತರದ ಕಾಲದ್ದಿರಬೇಕು. ಋಗ್ವೇದದಲ್ಲಿ `ಸುಮಂಗಲರಿಯಂ ವಧುರಿಮಾಂ ಸಮೇತ ಪಶ್ಯತ |' ಎಂಬ ಉಲ್ಲೇಖವಿದೆ. ರಾಮನೊಡಬೆ ವನವಾಸಕ್ಕೆ ತೆರಳಿದ ಸೀತೆಯ ಬಗ್ಗೆ ಈ ರೀತಿ ವರ್ಣಿಸಿದ್ದಾನೆ:

ಯಾ ನ ಶಕ್ಯಾ ಪುರಾ ದ್ರಷ್ಟುಂ ಭೂತೈರಾಕಾಶಗೈರಪಿ |

ತಾಮದ್ಯ ಸೀತಾಂ ಪಶ್ಯಂತಿ ರಾಜಮಾರ್ಗಗತಾ ಜನಾಃ ||

ಈ ಮೊದಲು ಯಾವ ಸೀತೆಯನ್ನು ಆಕಾಶದಲ್ಲಿ ಸಂಚರಿಸುತ್ತಿರುವವರು ನೋಡಲು ಅಸಾಧ್ಯವಿತ್ತೊ ಆ ಸೀತೆಯನ್ನು ಬೀದಿಯ ಜನರು ನೋಡುತ್ತಿದ್ದಾರೆ.೫೮ ಮಹಾಭಾರತದಲ್ಲಿ ಸ್ತ್ರೀಯರ ಬಗ್ಗೆಯೂ ಇದೇ ರೀತಿ ಹೇಳಲಾಗಿದೆ:

೫೭.ಭಾರತೀಯ ಸಂಸ್ಕೃತಿ ಕೋಶ, ಖಂಡ ೫,ಪು.೩೫೯-೬೦ ಮತ್ತು ೩೬೮-೭೫. ೫೮.ಅಯೋಧ್ಯಾಕಾಂಡ,೩೩-೮