ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

೯೪

ವಿಫಲಗೊಂಡವು. ಸೀತೆಯಲ್ಲಿ ಪಾತಿವ್ರತ್ಯದ ಅದ್ಭುತ ತೇಜಸ್ಸಿತ್ತೆಂಬ ಅಭಿಪ್ರಾಯವನ್ನು ಮಂಡೋದರಿಯು ಹೊಂದಿದ್ದಳು. ರಾವಣನ ವಧೆಯಾದ ನಂತರ ಶೋಕ ಸಂತಪ್ತಳಾದ ಅವಳು ಈ ರೀತಿ ನುಡಿದಿದ್ದಾಳೆ:

ಅಪ್ರಾಪ್ಯ ತಂ ಚೈವ ಕಾಮಂ ಮೈಥಿಲೀಸಂಗಮೇ ಕೃತಮ್ |

ಪತಿವ್ರತಾಯಾಸ್ತಪಸಾ ನೂನಂ ದಗ್ಧೋsಸಿ ಮೇ ಪ್ರಭೋ ||

ತದೈವ ಯನ್ನ ದಗ್ಧಸ್ತ್ವಂ ಘರ್ಘಯಂಸ್ತನುಮಧ್ಯಮಾಮ್ |

ದೇವಾ ಬಿಭ್ಯತಿ ತೇ ಸರ್ವೇ ಸೇಂದ್ರಾಃ ಸಾಗ್ನಿಪುರೋಗಮಾಃ ||

``ಹೇ ಪ್ರಭೋ! ಮಿಥಿಲೆಯ ರಾಜಕುಮಾರಿಯಲ್ಲಿ ಆಸಕ್ತನಾಗಿ ಸಮಾ ಗಮವನ್ನು ಬಯಸಿದ ನಿನ್ನ ಮನೋರಥವು ಸಿದ್ಧಿಸಲಿಲ್ಲ. ಆ ಪತಿವ್ರತೆಯ ತಪಸ್ಸಿನ ತೇಜಸ್ಸಿನಿಂದ ನೀನು ಸುಟ್ಟುಹೋದೆ; ಯಾವ ಗಳಿಗೆಯಲ್ಲಿ ನೀನು ಅವಳನ್ನು ಸ್ಪರ್ಶಿಸಿದೆಯೋ ಅದೇ ಕ್ಷಣದಲ್ಲಿ ನಿನ್ನ ದೇಹವು ಸುಟ್ಟು ಭಸ್ಮವಾಗ ಬೇಕಿತ್ತು; ಆದರೆ ಇಂದ್ರ, ಅಗ್ನಿ, ದೇವತೆಗಳು ನಿನಗೆ ಭಯಪಡುತ್ತಿದ್ದುದರಿಂದ ನೀನು ಆಗ ಸಾಯಲಿಲ್ಲ.೬೭ ಈ ರೀತಿ ಓರ್ವ ಪವಿತ್ರೆಯು ಇನ್ನೋರ್ವ ಸಾಮಾನ್ಯ ಪತಿವ್ರತೆಯನ್ನು ಹೊಗಳಿ ನುಡಿದದ್ದು ಬಹಳ ಮನಸ್ಸೆಳೆಯುವಂತಿದ್ದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವದು ಉಚಿತವೆನಿಸುತ್ತದೆ. ಪತಿವ್ರತೆಯ ಬಳಿ ತೇಜಸ್ಸಿನ ಪ್ರಭಾವವಿರುತ್ತದೆ ಎಂದು ಮನ್ನಿಸಿದರೆ, ರಾವಣನ ಅಧಃಪತನವನ್ನು ಮಂಡೋದರಿಯು ಸ್ವಲ್ಪವಾದರೂ ಏಕೆ ತಡೆಯಲಿಲ್ಲ? ಮಂಡೋದರಿಯು ಪತಿವ್ರತೆ; ಅವಳ ಪಾತಿವ್ರತ್ಯವನ್ನು ಶಂಕಿಸುವ ಒಂದು ಉಲ್ಲೇಖವೂ ರಾಮಾಯಣ ದಲ್ಲಿಲ್ಲ. ಸೀತೆಯ ಸ್ಪರ್ಶವಾಗುತ್ತಲೇ ರಾವಣನು ಸುಟ್ಟುಹೋಗಲಿಲ್ಲ; ರಾವಣನ ಘನತೆಯೇ ಇದಕ್ಕೆ ಕಾರಣವೆಂದು ನಂಬಿದರೆ, ವಿರಾಧನು ರಾಮಲಕ್ಷ್ಮಣರ ಸಮ್ಮುಖದಲ್ಲಿಯೇ ಸೀತೆಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಾಗ ಆ ವಿರಾಧನೇಕೆ ಭಸ್ಮವಾಗಲಿಲ್ಲ? ವಿರಾಧನ ಬಳಿ ಅದಾವ ಶಕ್ತಿ ಇತ್ತು? ವಿರಾಧನು ಅಷ್ಟಕ್ಕೇ ನಿಲ್ಲದೆ-

ಕಥಂ ತಾಪಸಯೋರ್ವಾಂ ಚ ವಾಸಃ ಪ್ರಮದಯಾ ಸಹ ||

ಅಧರ್ಮಚಾರಿಣೌ ಪಾಪೌ ಕೌ ಯುವಾಂ ಮುನಿದೂಷಕೌ |

ಇಯಂ ನಾರೀ ವರಾರೋಹಾ ಮಮ ಭಾರ್ಯಾ ಭವಿಷ್ಯತಿ ||

೬೭.ಸುಂದರಕಾಂಡ,೧೧೧.