ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ವಿಮೋಚನೆ

ಆ ಮಿಲ್ಲಿನ ಮ್ಯಾನೇಜರರ ಮನೆಯ ಮುಂದೆ ಸುಳಿದುದಾಯಿತು. ಅದರೆ ನಾನು ಹೋದ ಘಳಿಗೆ ಸರಿಯಾಗಿರಲಿಲ್ಲ. ಭಾನುವಾರವಾ ಗಿತ್ತೇನೋ ನಿಜ. ಆದರೆ, ಅದು ಅವರು ನಿದ್ದೆ ಮಾಡುತ್ತಿದ್ದ ಘಳಿಗೆ ಯಾಗಿತ್ತು. ಎದ್ದವರು ಕೆಂಗಣ್ಣುಗಳಿಂದಲೇ ನನ್ನನ್ನು ನೋಡಿದರು. ಲೋಕವನ್ನೆ ತೂಗಿ ಅಳೆಯುವ ಸಾಮರ್ಥ್ಯವಿತ್ತೇನೋ ಅ ದೃಷ್ಟಿಗೆ. ನನ್ನದು ಖೋಟಾ ದೌಲತ್ತೆಂದು ಅವರು ಸುಲಭವಾಗಿ ಕಂಡು ಹಿಡಿದಿರ ಬೇಕು.

"ಏನು ನೀವು ಗ್ರಾಜುಯೇಟೇ ?"

"ಇಲ್ಲ ಸಾರ್, ವಿದ್ಯಾಭ್ಯಾಸ ಪೂರ್ತಿ ಮಾಡ್ಲಿಲ್ಲ."

ಇಂಗ್ಲಿಷಿನಲ್ಲೆ ಮಾತುಕತೆಯಾಗುತ್ತಿತ್ತು.

"ಯಾವುದಾದರೂ ಸ್ಪೆಷಲೈಸ್ ಮಾಡ್ಕೊಂಡಿದಿರಾ?"

ನಾನು ಉತ್ತರವೀಯಲಿಲ್ಲ. ಒಂದು ವಿಷಯದಲ್ಲಿ ನಾನು ಸ್ಪೆಷ ಲೈಸ್ ಮಾಡಿಕೊಂಡಿದ್ದೆ __ಪರಿಣತನಾಗಿದ್ದೆ. ಆದರೆ ಅದನ್ನು ಆ ಮಹಾನುಭಾವರಿಗೆ ತಿಳಿಸುವುದು ಸಾಧ್ಯವಿತ್ತೆ ?

"ಸರಿ, ಮಿಲ್ಲಿಗೆ ಬರುವುದು ಬಿಟ್ಟಿಟ್ಟು ನಮ್ಮನೇಗೆ ಯಾಕ್ ಬಂದಿರಿ?"

"ಏನಾದರೂ ತಂದಿದೀರೇನು ?"

ನನಗೆ ಮೊದಲು ಅರ್ಥನಾಗಲಿಲ್ಲ. ಅವರೇನು ಕೇಳುತ್ತಿದ್ದರು ? ಪ್ರಮಾಣ ಪತ್ರವನ್ನೆ ? ಪರಿಚಯದ ಕಾಗದವನ್ನೆ ? ಅಥವಾ, ಅಥವಾ.......

ಅವರು ನನ್ನನ್ನೆ ನೋಡುತ್ತಿದ್ದರು. ಸ್ವಲ್ಪ ಸ್ವಲ್ಪವಾಗಿ ನನಗೆ ಅರ್ಥವಾಗುತ್ತಿತ್ತು. ನಾನು ಏನನ್ನೂ ತಂದಿರಲಿಲ್ಲ. ಅವರಿಗಾಗಿ ಯಾವ ಕಾಣಿಕೆಯನ್ನೂ ತಂದಿರಲಿಲ್ಲ.

"ಸರಿ,ಈಗ ಹೋಗು."

ನನ್ನ ಮುಖ ಕೆಂಪಗಾಯಿತು. ಬಹು ವಚನದ ಸಂಬೋಧನೆ ಯನ್ನು ಆತ ಏಕ ವಚನಕ್ಕೆ ಇಳಿಸಿದ್ದ. ನಾನು ಎದ್ದು ನಿಂತೆ.