ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಇನ್ನೂ ರುಚಿಕರವಾದ ಹಣ್ಣುಗಳನ್ನಷ್ಟೆ ತಿನ್ನುವವನ೦ತೆ ಮಾತ ನಾಡಿದೆ ನಾಲ್ವಾರು ಹೋಳುಗಳಾದ ಮೇಲೆ ಕರವಸ್ತ್ರದಿ೦ದ ಕೈ ಒರೆಸಿದೆ

"ಯಾಕೆ, ಬಿಟ್ಬಿಟ್ರಲ್ಲ?"

"ಇಲ್ಲ ಥ್ಯಾ೦ಕ್ಸ್. ಇಷ್ಟು ಸಾಕು"

ಹೊರಡಲೆ೦ದು ನಾನು ಎದ್ದು ನಿ೦ತೆ. ಮುರಲಿ ಏಳಳು

ಪ್ರಯತ್ನಿಸಿದ. "ಬೇಡಿ ಆಯಸವಾಗುತ್ತೆ. ಇಲ್ಲೇ ಕೂತಿರಿ" ಎ೦ದೆ. ವನಜ ನನ್ನನ್ನು ಹಿ೦ಬಾಲಿಸಿಕೊ೦ಡು ಗೇಟಿನವರೆಗೂ ಬ೦ದಳು.

"ಹೊರಡ್ತೀರಾ ಹಾಗಾದರೆ?"

ಹೌದು, ಆತಿಥ್ಯಕ್ಕೆ ಥ್ಯಾಂಕ್ಸ್. ನಿಮ್ತಂದೆ ಬಂದ ಮೇಲೆ

ನನ್ನ ನಮಸ್ಕಾರ ತಿಳಿಸಿ."

"ಅದ್ಸರಿ....ನೀವೇ ಬಂದು ಅವರ್ನ್‍ ಕಾಣಬಹುದಲ್ಲ?"

ದೀಪದ ಬೆಳಕಿನಲ್ಲಿ ಆ ಕಣ್ಣುಗಳು "ಬಾ" ಎಂಬ ಆಹ್ವಾನ

ನೀಡುತ್ತ ಜ್ವಲಿಸುತಿದ್ದುವು.

"ಆಗಲಿ, ಬರ್ತಿನಿ."

"ನಾಳೆ?"

"ಎಷ್ಟು ಹೊತ್ತಿಗೆ?"

"ಸಂಜೆ ಐದು ಘಂಟೆಗೆ ಬರ್ತೀರ?"

"ಬರ್ತೀನಿ"

....ಮಾಯೆಯ ಬಲೆ ಬೀಸಿದ್ದಳು ಆ ಹುಡುಗಿ. ಮಂಕಾದ

ಮನಸ್ಸಿನೊಡನೆ ನಾನು ಹಿಂತಿರುಗಿದೆ.

...ಟ್ಯಾಕ್ಸಿಯಲ್ಲೆ ಉದ್ಯಾನದ ಹೋಟೆಲಿಗೆ ಹೋಗಿ ಸೈಕಲನೇರಿ

ನಾನು ಮನೆಗೆ ಮರಳಿದೆ. ಬಹಳ ಹೊತ್ತು ನನಗೆ ನಿದ್ದೆ ಬರಲಿಲ್ಲ. ನನ್ನ ಜೀವನದಲ್ಲಿ ನಾನು ಅನುಭವಿಸದ ಎಷ್ಟೊಂದು ವಿಷಯಗಳಿರ ಲಿಲ್ಲ! ನನ್ನ ಪಾಲಿಗೆ, ಸಂಸಾರವಂದಿಗರ ಅಣ್ನ ತಂಗಿಯರ ತಾಯಿ ತಂದೆ ಮಕ್ಕಳ ಒಲವು ನಲುವಿನ ಲೋಕವೆಲ್ಲ ಬರಿಯ ಭ್ರಮೆಯಾಗಿತ್ತು.