ಈ ಪುಟವನ್ನು ಪ್ರಕಟಿಸಲಾಗಿದೆ

ವಿಮೋಚನೆ

೨೧೧

"ನೀವು ಪುಸ್ತಕಗಳ್ನ ಓದಲ್ವೆ?"

"ಓದ್ತೀನಿ. ಕಾದಂಬರಿಗಳಾದರೆ ಓದ್ತೀನಿ.

ಇಂಗ್ಲಿಷು ಕನ್ನಡ ಎರಡಲ್ಲೂ ಓದ್ತೀನಿ."

ಮತ್ತೆ ಮೌನ.

"ನೀವು-ಇಲ್ನೋಡಿ–

ಯಾವುದೋ ಪುಸ್ತಕ ಓದುತಿದ್ದ ನಾನು, ವನಜಳ ಮಾತು

ಕೇಳಿಸದವನ ಹಾಗೆ ನಟಿಸಿದೆ.

"ಕೇಳಿಸ್ಲಿಲ್ವಾ?"

"ನನಗೊಂದು ಹೆಸರಿದೆ.”

ಅವಳು ನಕ್ಕಳು.

"ಮಿಸ್ಟರ್ ರಾಧಾಕೃಷ್ಣ—"

"ಮಿಸ್ಟರ್ ಬೇಡಿ"

ಲಜ್ಜೆಯಿಂದ ಅವಳ ಮುಖ ಕೆಂಪೇರಿತು. ಆಕೆ ಮಾತು

ಮುಂದುವರಿಸಲಿಲ್ಲ, ನಾನು ಸುಮ್ಮನೆ ಪುಟಗಳನ್ನು ತಿರುವಿ ಹಾಕು

ತಿದ್ದರೆ, ನನ್ನನೇ ನುಂಗುವವರ ಹಾಗೆ ಅವಳು ನೋಡುತಿದ್ದಳು.

"ವನಜ, ನಿಮ್ಮ ಲೈಬ್ರೆರಿಯಿಂದ ಪುಸ್ತಕ ಇಸಕೊಂಡು

ಹೋಗ್ಲೇನು ?"

"ಅದನ್ನೇ ಹೇಳೋಣಾಂತ ನಾನು ಬಾಯಿ ತೆರೆದಿದ್ದು."

ಮುರಲಿ ನಮ್ಮನ್ನು ಕೂಗಿ ಕರೆದ.

ಈ ದಿವ್ಸ ನೀವಿಬ್ಬರೂ ಇಷ್ಟು ಮಾತನಾಡಿದ್ದು ಸಾಕು.

ಉಳಿದದ್ದೆಲ್ಲಾ ಆ ಮೇಲೆ ಮುಗಿಸ್ಕೊಳ್ಳಿ. ಇವತ್ತು ರಾಧಾ ನನ್ನ

ಸಮಿಾಪವೇ ಇರ್ಬೇಕು."

ನಾನು ನಗುತ್ತಾ ಒಪ್ಪಿಕೊಂಡೆ. ಅಷ್ಟರಲ್ಲೆ ಅವರ ತಂದೆ

ಬಂದರು ಎತ್ತರವಾಗಿದ್ದ ತೆಳ್ಳಗಿನ ದೇಹ.. ಅವರು ರುಮಾಲನ್ನೆತ್ತಿ

ಸ್ಟ್ಯಾಂಡಿನ ತಗಲು ಮೊಳೆಯ ಮೇಲಿರಿಸಿದಾಗ, ನುಣ್ಣಗೆ ಬೆಳ್ಳಗೆ

ತಲೆಯ ಇಕ್ಕೆಲಗಳಿಗೂ ಚಾಚಿಕೊಂಡಿದ್ದ ಅವರ ಸೊಗಸಾದ ಕ್ರಾಪನ್ನು

ಕಂಡೆ.