ಈ ಪುಟವನ್ನು ಪ್ರಕಟಿಸಲಾಗಿದೆ

ತಿಳಕೊಂಡಿಲ್ಲ. ಆದರೆ ನೀನು ಈಗ ಮಾಡ್ತಿರೋದು ಸರಿಯಾದ್ದು ಮಾತ್ರ ಅಲ್ಲ. ಇದರಿಂದ ನಿನಗೆ ಖಂಡಿತ ಸುಖ ಸಿಗೋದಿಲ್ಲ"

"ಚಲಂ,ನೀನು ಹಾಗನ್ಬಾರ್ದು?"

ನೀನು ಸಂಪಾದಿಸ್ತಿರೋ ರೀತಿ ಅವಳಿಗೆ, ಅವಳ ತಂದೆಗೆ,

ಗೊತ್ತ?"

"ಇಲ್ಲ"

"ಮತ್ತೆ? ಈ ವೃತ್ತಿ ಬಿಟ್ಟಡ್ಬೇಕು ಆಂತಿದೀಯೊ?"

"......"

"ಶೇಖರ್, ನಾನು ಆ ಹುಡುಗೀನ ನೋಡ್ಬೇಕು. ಅವಳ

ಜತೇಲಿ ಮಾತಾಡ್ಬೇಕು."

ಓ___ಆದು ಸಾಧ್ಯವಿಲ್ಲ."

ಸಿಡುಬಿನ ಕಲೆಗಳ ಕಪ್ಪಗಿನ ಕುರೂಪ ಮುಖದ ಚಲಂನನ್ನು

ನನ್ನ ಆಪ್ತನೆಂದು ವನಜಳಿಗೆ ಪರಿಚಯ ಮಾಡಿಕೊಡುವ ಚಿತ್ರವನ್ನು ಕಲ್ಪಿಸಿಕೊಂಡೇ ನಾನು ತಣ್ಣಗಾಗಿ ಹೋದೆ.

"ಸರಿ ಹಾಗಾದರೆ...." ಎಂದ ಚಲಂ.

ವನಜಳನ್ನು ಕಾಣ ಹೊರಟಾಗ ನನ್ನ ಮನಸ್ಸು ಕಸಿವಿಸಿ

ಗೊಂಡು ಕೇಳುತ್ತಿತ್ತು. ಏನಾದರೊಂದು ತೀರ್ಮಾನವಾಗಬೇಕು; ಬೇಗನೆ ಏನಾದರೂ ತೀರ್ಮಾನವಾಲೇಗಬೇಕು...

ಒಂದು ಘಂಟೆಯಿಂದಲೂ ಆಕೆಯೊಬ್ಬಳೇ ನನಗಾಗಿ ಕಾದಿ

ದ್ದಳು. ನಾನು ಬಂದೊಡನೆ,ನೊಂದ ಧ್ವನಿಯಲ್ಲಿ ಕೇಳಿದಳು.

"ಯಾಕೆ ರಾಧಾ--ಯಾಕೆ ಹೀಗೆ? ನೀನು ಇಷ್ಟು ನಿರ್ದಯಿ

ಆಂತ ನನಗೆ ಗೊತ್ತಿರಲಿಲ."

ನಮ್ಮೊಳಗೆ ನಾನು ನೀನುಗಳ ಆತ್ಮೀಯತೆ ಬೆಳೆದಿತ್ತು. ಅವಳ

ಮಾತಿಗೆ ನಾನು ಉತ್ತರ ಕೊಡಲಿಲ್ಲ.

ಇಷ್ಟರಲ್ಲೇ ವನಜಾ, ಸಹವಾಸ ಬೇಸರ ಬಂತೇನು?"

ವನಜ, ಸಿಲ್ಲಿ ಸಿಲ್ಲಿಯಾಗಿ ಮಾತನಾಡಬೇಡ"