ಈ ಪುಟವನ್ನು ಪ್ರಕಟಿಸಲಾಗಿದೆ

ಜೇಬಿನೊಳಕ್ಕೆ ಕೈಹಾಕಿ ಇನ್ನೊಂದು ಸಿಗರೇಟು ತೆಗೆದೆ. ಮುರಲಿ ಮೌನವಾಗಿ, ನಡಗುವ ಬೆರಳುಗಳಿಂದ ನಾನು ಕಡ್ಡಿಗೀರಿದುದನ್ನು ನೋಡಿದ ......ನಿಮಿಷಗಳು ಯುಗಗಳಂತೆ ಕಳೆದುವು.

" ವನಜಾಗೆ ಮೈ ಚೆನ್ನಾಗಿಲ್ವೇನು?

ಯಾವುದೋ ಆಸೆಯ ಎಳೆ ಸಿಕ್ಕಿತೆಂಬಂತೆ ನಾನು ಹೇಳಿದೆ.

" ಚೆನ್ನಾಗಿಯೇ ಇದೆ. ಇಲ್ಲದೇನು?"

" ಮತ್ತೇ?"

ಆ ಪ್ರಶ್ನೆಗೆ ಊತ್ತರವಾಗಿ ಅವನಿಂದ ಮಾತುಗಳು ಹೊರಟುವು. ಪಾಠ ಒಪ್ಪಿಸುವವರಂತೆ ಅವನು ಮಾತನಾಡಿದ.

"ರಾಧಾಕೃಷ್ಣ ! ನೀವು ಇಂಥವರೂಂತ ನಮಗೆ ಗೊತ್ತಿರಲಿಲ್ಲ. ನೀವು ಹೇಗೆ ಮಾಡ್ಬಾರ್ದಾಗಿತ್ತು . ನೀವು ದೊಡ್ಡ ತಪ್ಪು ಮಾಡಿದಿರಿ. ನಾವು ಸುಖವಾಗಿಯೇ ಇದ್ದೆವಲ್ಲ? ಎಷ್ಟೊಂದು ಶಾಂತವಾಗಿತ್ತು! ನೀವು ಬಂದು ಎಂಥ ಅನ್ಯಾಯ ಮಾಡಿದಿರಿ! ನಮ್ಮ ವನಜಾ ಗತಿ ಇನ್ನೇನಾಗ್ಬೇಕು? .......ನಾನು ನಿಮ್ಮನ್ನ ಒಳ್ಳೆಯವರೂಂತ ತಿಳಿ ದಿದ್ದೆ_ ನಾಗರಿಕರು, ಸುಸಂಸ್ಕ್ರತರು, ಅಂತ . ಆದರೆ ನೀವು-ನೀವು_ ಹುಂ ! ನಮ್ತಂದೆ ಬಂದು ಹೇಳ್ದಾಗ ಹೇಗಾಯ್ತು ಗೊತ್ತೆ? ಓ ದೇವರೆ! ವನಜಾ ಅದನ್ನ ಸಹಿಸಿಕ್ಕೊಂಡಳು. ನಾನಾಗ್ಗಿದ್ದರೆ ತುಂಬ ಕಷ್ಟವಾಗಿತ್ತು.ಅದನ್ನೆಲ್ಲಾ ಸಹಿಸೋದು ನನ್ನಿಂದಾಗ್ತಲೇ ಇರ್ಲಿಲ್ಲ್ಲ. ನಾನು ಏನಾದರೂ ಮಾಡ್ಕೊಂಡು ಬಿಡ್ತಿದ್ದೆ. ಆದರೆ ವನಜ_"

" ವನಜ ಏನೆಂದಳು?"

ನನ್ನದಲ್ಲದ ಸ್ವರ ಮಾತನಾಡುತಿತ್ತು.

" ವನಜ, ಹುಂ ! ಏನನ್ಬೇಕು? ಇನ್ನು ನಿಮ್ಮ ಮೂಖ ನೋಡೋ ದಿಲ್ಲ ಅಂದಳು. ನಿಮ್ಮನ್ನ_ನಿಮ್ಮನ್ನ_"

" ಹೇಳು ಮುರಲಿ. ಹೇಳು."

" ನಿಮ್ಮನ್ನ ಬ್ರೂಟ್ ಅಂದಳು, ಲೋಫರ ಅಂದಳು. ಇನ್ನು ಮನೆಗೆ ಬಂದರೆ, ಒದ್ದು ಹೊರಹಾಕ್ತೀನಿ ಅಂದಳು!"

" ಓ!"