ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ದ ಮಾತುಗಳು. ನಾನು ಕೂಡಾ ಹೀಗೆಯೇ ಆಗುವೆ ನೆಂದು ಆತ ತಿಳಿದಿದ್ದನೇನೊ? ನನಗೆ ಆ ಮಾತು ರುಚಿಸಲಿಲ್ಲ. ಆದರೆ ಶೀಕಂಠೋಪಜೀವಿಯಾದ ನನಗೆ ಹಾಗೆಂದು ಹೇಳುವ ಸ್ವಾತಂತ್ರ್ಯ ವಿರಲಿಲ್ಲ. ಆತನ ತಂಗಿ ಬಾಣಂತಿಯಾಗಿ ಸತ್ತ ಮರುದಿನ ನಾರಾ ಯಣನನ್ನು ನಾನು ಕಂಡಿದ್ದೆ. ಹೋಟೆಲು ತಿಂಡಿ ಮಾತುಕತೆ... ಆಗ ಅವನಿಗೆ ಉದ್ಯೋಗವಿರಲಿಲ್ಲ. ಈಗ ಉದ್ಯೋಗ ದೊರೆತಿತ್ತು... ಆದಾದಮೇಲೆ ತನ್ನದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಆತ ನಿಯೋಗದ ಒಬ್ಬ ಸದಸ್ಯನಾಗಿದ್ದ.

"ಏನು ಯೋಚಿಸ್ತಾ ಇದೀಯಾ, ಚಂದ್ರು?"

"ನೀನೋಂದು ಮಾತು ಹೇಳಿದರೆ ನಾರಾಯಣ ಕೇಳಿದ್ರೂ ಕೇಳ್ಬಹುದು."

"ಸಾಧ್ಯವಿಲ್ಲದ ವಿಷಯ. ಆಗ ನೋಡಿದಿಯೋ ಇಲ್ಲವೊ ? ನಮಸ್ಕಾರ ಅಂತಾದರೂ ಅಂದ್ನೆ ಆತ ?"

ಆದರೆ, ನಾರಾಯಣನಿಗೆ ಸಂಬಂಧಿಸಿ ಅಂತಹ ಕಾಠಿನ್ಯ ಅವಶ್ಯ ವಿತ್ತೆ ? ಒಂದು ವೇಳೆ ನಾನೇ ನಾರಾಯಣನ ಸ್ಥಿತಿಯಲ್ಲಿ ಇದ್ದಿದ್ದರೆ? ಅಥಾವಾ ಶ್ರೀಮಂತ ಮಾವ ದೊರೆಯುವುದರ ಬದಲು ಸ್ವತ ಶ್ರೀಕಂಠನೇ ದೇಹಶ್ರಮ ಮಾರುವ ಉದ್ಯೋಗಿಯಾಗಬೇಕಾದ ಪರಿಸ್ಥಿತಿ ಬದಗಿದ್ದರೆ?

ಶ್ರೀಕಂಠ-ನಾರಾಯಣರ ನಡುವೆ ಬೆಳೆದು ಬಂದ ಆ ಅಡ್ಡ ಗೋಡೆ.....

ಐ. ಜಿ.ಪಿ. ಯ ಫೂನ್ ಮಾಡಿ ಕೇಳಿದ್ದರು.

"ಏನ್ಮಾಡ್ತೀರಾ? ನಮ್ಮಿಂದ ಏನಾದರೂ ಆಗ್ಬೇಕಾಗಿದ್ದರೆ ಹೇಳಿ."

"ಯೂನಿಯನ್ನಿನವರು ಹದಿನಾಲ್ಕು ದಿನಗಳ ಮುಷ್ಕರ ನೋ ಟೀಸು ಕೋಟ್ಟಿದ್ದಾರೆ...... ಇನ್ನೊಂದು ವಾರ ಕಾದು ನೋಡೋಣ ಹೇಳ್ತೀನಿ."